ಇಪಿಎಫ್ ಮೇಲಿನ ತೆರಿಗೆ ಆದೇಶ ಹಿಂದಕ್ಕೆ: ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಮಾ.08: ಇಪಿಎಫ್ ವಿಥ್ ಡ್ರಾ ಸಮಯದಲ್ಲಿ ತೆರಿಗೆ ಹಾಕಲಾಗುತ್ತದೆ ಎಂಬ ಆತಂಕಕ್ಕೆ ಈಗ ತೆರೆ ಎಳೆಯಲಾಗಿದೆ. ಬಜೆಟ್ ಸಮಯದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಾಡಿದ್ದ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಲೋಕಸಭೆಯಲ್ಲಿ ಮಂಗಳವಾರ ಅರುಣ್ ಜೇಟ್ಲಿ ಅವರು ಆದೇಶ ಹಿಂಪಡೆದಿರುವುದಾಗಿ ಘೋಷಿಸಿದರು.

ಇಪಿಎಫ್ ಮೊತ್ತ ಹಾಗೂ ನಿವೃತ್ತಿ ಸಮಯದ ಪಿಎಫ್ ವಿಥ್ ಡ್ರಾ ಎಲ್ಲವೂ ತೆರಿಗೆ ಮುಕ್ತವಾಗಿತ್ತು. ಆದರೆ, ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿರುತ್ತದೆ. [ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎಂದು ಸೋಮವಾರ (ಫೆಬ್ರವರಿ 29) ರಂದು ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವ ಜೇಟ್ಲಿ ಅವರು ಹೇಳಿದ್ದರು.

 Proposal to tax EPF withdrawn: Arun Jaitley

ಇದು ಅನೇಕ ರೀತಿ ಗೊಂದಲಕ್ಕೆ ಕಾರಣವಾಯಿತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ ಒ) ಯ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೂ ಮುಂದಾಗಿದ್ದರು. ಭಾರಿ ವಿರೋಧದ ಹಿನ್ನೆಲೆಯಲ್ಲಿ ಈ ವಿವಾದಿತ ಪ್ರಸ್ತಾವನೆಯನ್ನು ಸರ್ಕಾರ ಹಿಂಪಡೆದುಕೊಂಡಿದೆ.

ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.[ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ]

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Clarifying over Govt's stand on Employees Provident Fund (EPF) Finance Minister Arun Jaitley said in Lok Sabha that the controversial tax proposal has been withdrawn. "Tax proposal for NPS scheme has been retained," Finance Minister informed in the Lok Sabha today (March 08).
Please Wait while comments are loading...