ಪ್ರಿಯಾಂಕಾ 'ಸ್ವಾತಂತ್ರ್ಯ' ಫೋಟೋ ತಂದ ರಾದ್ಧಾಂತ!

Posted By:
Subscribe to Oneindia Kannada

ಮುಂಬೈ, ಆಗಸ್ಟ್ 17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಆಗಸ್ಟ್ 15ರಂದು, ಸ್ವಾತಂತ್ರ್ಯೋತ್ಸವದ ಸವಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಅವರು ಜನಪ್ರಿಯ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೋವೊಂದು ಅವರ ಅಭಿಮಾನಿಗಳು ಹಾಗೂ ಟೀಕಾಕಾರರ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.

ನಿಷೇಧಾಜ್ಞೆ ವೇಳೆ ಭಾರತ್ ಮಾತಾ ಕೀ ಜೈ ಎಂದ ಮಹಿಳೆಗೆ ರೈನಾ ಶ್ಲಾಘನೆ

ಇತ್ತೀಚೆಗೆ, ಪ್ರಧಾನಿ ಮೋದಿಯವರ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಅವರು ವಿವಾದಕ್ಕೊಳಗಾಗಿದ್ದರು. ಇದೀಗ, ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮದೊಂದು ಪೋಸ್ಟ್ ನಿಂದ ವಿವಾದಕ್ಕೀಡಾಗಿದ್ದಾರೆ.

Priyanka Chopra Trolled For Not Wearing Sari On Independence Day

ಆಗಸ್ಟ್ 15ರಂದು ಪ್ರಿಯಾಂಕಾ ಚೋಪ್ರಾ ಹಾಕಿರುವ ಈ ಫೋಟೋದಲ್ಲಿ ಜೀನ್ಸ್ ಹಾಗೂ ಟಿ- ಶರ್ಟ್ ಧರಿಸಿರುವ ಅವರು, ತ್ರಿವರ್ಣವುಳ್ಳ ದುಪಟ್ಟಾವೊಂದನ್ನು ಹಿಡಿದು #MyHeartBelongsToIndia ಎಂಬ ಅಡಿಬರಹ ಬರೆದು ಪೋಸ್ಟ್ ಮಾಡಿದ್ದಾರೆ.

ಇದನ್ನು ವಿರೋಧಿಸಿರುವ ಹಲವಾರು ಮಂದಿ, ಪಿಂಕಿಯವರ ಬಟ್ಟೆ ವಿಚಾರವಾಗಿ ಕಮೆಂಟ್ ಮಾಡಿದ್ದಾರೆ. 'ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರುವಾಗ ಸೀರೆಯುಡಲು ಆಗುವುದಿಲ್ಲವೇ, ಜೀನ್ಸ್ ಪ್ಯಾಂಟೇ ಬೇಕಿತ್ತೇ' ಎಂದು ಕೆಲವರು ಟೀಕಿಸಿದ್ದರೆ, ಮತ್ತೆ ಕೆಲವರು, ತ್ರಿವರ್ಣವುಳ್ಳ ದುಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡಿದ್ದನ್ನು ಪ್ರಶ್ನಿಸಿ 'ಸ್ಟುಪಿಡ್... ತ್ರಿವರ್ಣಕ್ಕೆ ಒಂದು ಮರ್ಯಾದೆ ಬೇಡವಾ, ಅದನ್ನು ಹೇಗೆ ಬೇಕೋ ಹಾಗೆ ಬಳಸಿದ್ದೀರಾ' ಎಂದು ಬೈಯ್ದಿದ್ದಾರೆ. ಹೀಗೆಯೇ ಅನೇಕ ಟೀಕೆಗಳ ಸುರಿಮಳೆಯೇ ಆಗಿದೆ.

Independence Day #Vibes 🇮🇳#MyHeartBelongsToIndia #happyindependencedayindia #jaihind

A post shared by Priyanka Chopra (@priyankachopra) on Aug 14, 2017 at 6:17pm PDT

ಆದರೆ, ಈ ಟೀಕೆಗಳಿಗೆ ಪ್ರಿಯಾಂಕಾ ಅವರ ಕೆಲವು ಅಭಿಮಾನಿಗಳು ತಕ್ಕದಾಗಿಯೇ ಉತ್ತರ ಕೊಟ್ಟಿದ್ದಾರೆ. 'ಪ್ರಿಯಾಂಕಾ ಅವರ ದೇಶಾಭಿಮಾನವನ್ನು ಮಾತ್ರ ಪರಿಗಣಿಸಿ, ಅವರ ಬಟ್ಟೆ ಮೇಲೆ ನಿಮ್ಮ ಕಣ್ಣೇಕೆ ?' ಎಂದು ಕೆಲವರು ಪ್ರಶ್ನಿಸಿದ್ದರೆ, ಮತ್ತೂ ಕೆಲವರು 'ತ್ರಿವರ್ಣವುಳ್ಳ ದುಪ್ಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡರೇನು ತಪ್ಪು? ಯೋಗ ದಿನಾಚರಣೆಯಂತೆ ಪ್ರಧಾನಿ ಮೋದಿ ಅವರು, ತಮ್ಮ ಬೆವರು ಒರೆಸಿಕೊಳ್ಳಲು ತ್ರಿವರ್ಣವುಳ್ಳ ಬಟ್ಟೆಯೊಂದನ್ನು ಬಳಸಿರಲಿಲ್ಲವೇ? ಅದು ತಪ್ಪಲ್ಲಎಂದಾದರೆ, ಇದೂ ತಪ್ಪಲ್ಲ' ಎಂದು ವಾದಿಸಿದ್ದಾರೆ.

ಹೀಗೇ, ಪರ- ವಿರೋಧ ಜಗಳ ಇನ್ಸ್ಟಾಗ್ರಾಂ ನಲ್ಲಿ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It seems like Priyanka Chopra will have to resign herself to being roundly trolled no matter what she wears - for the second time in months, the 35-year-old actress has been derided online for her choice of outfit, worn this time in a boomerang video she posted on Independence Day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ