• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಹತ್ಯೆಗೆ ಸಂಚು, ದುಷ್ಟರ ವಿರುದ್ಧ ಸಿಡಿದೆದ್ದ ಟ್ವಿಟ್ಟಿಗರು!

|
   ಮೋದಿ ಹತ್ಯೆಗೆ ಸಂಚು ರೂಪಿಸಿರುವ ಗುಮಾನಿ ಹಿನ್ನೆಲೆ ಟ್ವಿಟ್ಟಿಗರು ಫುಲ್ ಗರಂ | Oneindia kannada

   ಪುಣೆ, ಜೂನ್ 08: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ರೀತಿಯಲ್ಲಿಯೇ ಮೋದಿಯವರನ್ನೂ ಹತ್ಯೆಗೈಯಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬುದು ಪತ್ರವೊಂದರಿಂದ ತಿಳಿದುಬಂದಿದೆ.

   ಪುಣೆ ಪೊಲೀಸರು ವಶಪಡಿಸಿಕೊಂಡ ಪತ್ರವೊಂದರಿಂದ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಮಾವೋ ಮುಖಂಡ ಕಿಶನ್ ಈ ಪತ್ರ ಬರೆದಿದ್ದಾನೆ ಎಂದು ಶಂಕಿಸಲಾಗಿದೆ. ದೇಶದಾದ್ಯಂತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವುದು ಮಾವೋವಾದಿಗಳ ಆತಂಕಕ್ಕೆ ಕಾರಣವಾಗಿದ್ದು, ಇದು ಹೀಗೆಯೇ ಮುಂದುವರಿದರೆ ಮಾವೋವಾದಿಗಳು ಅಸ್ತಿತ್ವ ಕಳೆದುಕೊಳ್ಳುವ ಭಯ ಹೊಂದಿರುವುದರಿಂದ ಮೋದಿ ಹತ್ಯೆಗೆ ಸಂಚು ರೂಪಿಸಲು ಹೊರಟಿದ್ದರು ಎನ್ನಲಾಗಿದೆ.

   ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?

   ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ವದಂತಿಯನ್ನು ಗಂಭಿರವಾಗಿ ಪರಿಗಣಿಸುವಂತೆ ಹಲವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೋದಿ ಅಲೆಯನ್ನು ನಿಲ್ಲಿಸಲು ಮಾವೋವಾದಿಗಳಿಗೆ ಇದಕ್ಕಿಂತ ಬೇರೆ ದಾರಿ ಇಲ್ಲದಿರುವುದರಿಂದ ಅವರು ಹೀಗೆ ಯೋಚಿಸಿದ್ದರೆ ಅಚ್ಚರಿಯೇನಿಲ್ಲ ಎಂದು ಟ್ವಿಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ!

   ಮಾವೋವಾದಿಗಳಿಗೆ ಬೇರೆ ದಾರಿ ಇಲ್ಲ!

   ಮೋದಿ ಅಲೆಯನ್ನು ನಿಯಂತ್ರಿಸಲು ಅರ್ಬನ್ ನಕ್ಸಲರಿಗೆ ಬೇರೆ ದಾರಿ ಇಲ್ಲ. ಆದ್ದರಿಂದಲೇ ಅವರನ್ನು ಕೊಲ್ಲುವ ಉಪಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಮಾಹಿಕಾ.

   ಕಾನೂನು ಮೂಲಕ ಬಗೆಹರಿಸಿ!

   ಈ ವಿಷಯ ಈಗ ಅಪ್ರಸ್ತುತ ಮತ್ತು ಮೂರ್ಖತನದ್ದು. ಇದು ಸಾರ್ವಜನಿಕ ಚರ್ಚೆಯ ವಿಷಯವಲ್ಲ. ಕಾನೂನಿನ ಮೂಲಕ ತನಿಖೆಯಾಗಿ ಬಗೆಹರಿಯಲಿ. ಇಂಥ ಘಟನೆಗಳು, ಸಂಚು ನಡೆಯದಂತೆ ಎಚ್ಚರಿಕೆ ವಹಿಸಲಿ ಎಂದಿದ್ದಾರೆ ಮಂಗಲ್ ಸೈನ್ ಹಂಡಾ.

   ಮೋದಿ ಹತ್ಯೆಗೆ ಸಂಚು, ವದಂತಿ ಹಿಂದೆ ಜನಪ್ರಿಯತೆಯ ತಂತ್ರ: ಕಾಂಗ್ರೆಸ್

   ಮೋದಿ ಎಂದರೆ ಕೇವಲ ವ್ಯಕ್ತಿಯಲ್ಲ!

   ಮೋದಿ ಹತ್ಯೆಗೆ ಸಂಚು ರೂಪಿಸಿದ್ದವರಿಗೆ ತಿಳಿದಿರಲಿ. ಪ್ರಧಾನಿ ನರೇಂದ್ರ ಮೋದಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಒಂದು ವಿಚಾರ, ಒಂದು ಚಳವಳಿ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರೊಬ್ಬ ಧೃವತಾರೆ. ಅವರನ್ನು ಹತ್ಯೆಗೈಯಲು ಪ್ರಯತ್ನಿಸುವುದು ಮೂರ್ಖತನ. ಇಂಥ ಯತ್ನಗಳು ಮಾವೋವಾದಿಗಳಿಗೇ ತಿರುಗುಬಾಣವಾಗುತ್ತದೆ ಎಂದಿದ್ದಾರೆ ರಾಜಶ್ರೀ ಮಹ್ತಿನಿ.

   ಮೋದಿಯರು ಮಾತ್ರ ಭಾರತಕ್ಕೆ ಆಶಾಕಿರಣ

   ಮೋದಿ ಹತ್ಯೆಯ ಸಂಚಿನ ಸುದ್ದಿ ತಿಳಿದು ಆಘಾತವಾಯಿತು. ಅವರಿಗೆ ಅತ್ಯುತ್ಕೃಷ್ಟ ಭದ್ರತೆ ನೀಡಬೇಕು. ಅವರ ಹತ್ಯೆಯಾಗಬಾರದು ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಭಾರತಕ್ಕಿರುವ ಭರವಸೆ ಎಂದರೆ ಪ್ರಧಾನಿ ಮೋದಿಯವರೊಂದೇ ಎಂದಿದ್ದಾರೆ ಆಯುಶ್ ವೋರಾ.

   ಭಾರತದಲ್ಲಿ ಮಾತ್ರ ಹೀಗೆ!

   ಅಧಿಕಾರದಲ್ಲಿರುವ ಒಬ್ಬ ಪ್ರಧಾನ ಮಂತ್ರಿಯ ಹತ್ಯೆಗೆ ಸಂಚು ರೂಪಿಸಲಾಗುತ್ತದೆ. ಆದರೂ ಅದು ದೊಡ್ಡ ಸುದ್ದಿಯಾಗುವುದಿಲ್ಲ ಎಂದರೆ ಅದು ಭಾರತದಲ್ಲಿ ಮಾತ್ರ! ಬಿಜೆಪಿಯ ಮಾಧ್ಯಮ ವಿಭಾಗ ಮತ್ತಷ್ಟು ಬಲಯುತವಾಗಬೇಕು ಎಂಬುದಕ್ಕೆ ಇದು ಒಂದು ಉದಾಹರಣೆ ಎಂದಿದ್ದಾರೆ ಆರ್ ರವಿ.

   ನಕ್ಸಲರು ಮತ್ತು ಭಯೋತ್ಪಾದಕರಿಗೆ ಮೋದಿ ಅಂದ್ರೆ ಉರಿ!

   ನಕ್ಸಲರು ಮತ್ತು ಭಯೋತ್ಪಾದಕರು ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ಮೋದಿ ಸರ್ಕಾರದ ಕ್ರಮಗಳಿಂದ ಅತೀ ಹೆಚ್ಚು ನಷ್ಟವಾಗುತ್ತಿರುವುದು ಅವರಿಬ್ಬರಿಗೇ. ಅವರು ಉಳಿವಿಗಾಗಿ ಈ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ ಪ್ರಕಾಶ್.

   ಕಾಂಗ್ರೆಸ್ಸಿಗರಿಗೆ ಅಭಿನಂದನೆ!

   ಪ್ರಧಾನಿ ಮೋದಿಯವರನ್ನು ಮುಗಿಸುವ ತಮ್ಮ ಸ್ನೇಹಿತರ ಪ್ರಯತ್ನ ಪ್ರಗತಿಯಲ್ಲಿರುವುದಕ್ಕಾಗಿ ಕಾಂಗ್ರೆಸ್ಸಿಗೆ ಅಭಿನಂದನೆಗಳು! ಎಡಪಕ್ಷಗಳ ಜೊತೆ ಕಾಂಗ್ರೆಸ್ ಏಕೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿದೆ ಎಂಬುದು ನಮಗೆ ಈಗ ಅರ್ಥವಾಯಿತು ಎಂದಿದ್ದಾರೆ ರವಿ.

   ಇದು ಅಕ್ಷಮ್ಯ ಅಪರಾಧ!

   ನಮ್ಮ ಪ್ರಧಾನಿಯನ್ನು ಕೊಲ್ಲಲು ಸಂಚೆ? ಸಂಚಿನ ರೂವಾರಿಗಳೊಬ್ಬರೂ ಶಿಕ್ಷೆಯಿಂದ ಪಾರಾಗಬಾರದು. ಈ ನಡೆ ಅಕ್ಷಮ್ಯ ಎಂದಿದ್ದಾರೆ ಅಭಿನವ್ ಸತುರ್ವೇದಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Pune Police has intercepted an internal communication of Maoists in which it has been revealed that they were planning a 'Rajiv Gandhi-type' assassination of Prime Minister Narendra Modi. Modi Assassination Plot becomes a trending hashtag on twitter now.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more