• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಲಿತರ ದಾರಿತಪ್ಪಿಸುವ ಘೋರ ಕೆಲಸದತ್ತ 'ಕೈ': ನರೇಂದ್ರ ಮೋದಿ

|

ನವದೆಹಲಿ, ಮೇ 10: "ಕಾಂಗ್ರೆಸ್ ಪಕ್ಷವು ಮೀಸಲಾತಿ ವಿಷಯದಲ್ಲಿ ,ದಲಿತರನ್ನು ದಾರಿ ತಪ್ಪಿಸುವ ಘೋರ ಕೆಲಸಕ್ಕೆ 'ಕೈ' ಹಾಕಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಮೋ app ಮೂಲಕ ಕರ್ನಾಟಕದ ಪರಿಶಿಷ್ಠ ಜಾತಿ, ಪಂಗಡ(ಎಸ್ಸಿ-ಎಸ್ಟಿ), ಇತರೆ ಹಿಂದುಳಿದ ವರ್ಗ(ಒಬಿಸಿ) ಮತ್ತು ಕೊಳಗೇರಿ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು, 'ದಲಿತ ಬಂಧುಗಳಲ್ಲಿ ನಾನು ವಿನಂತಿ ಮಾಡುತ್ತೇನೆ. ಕಾಂಗ್ರೆಸ್ ನ ಸುಳ್ಳುಗಳನ್ನು ನಂಬಬೇಡಿ. ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿದಷ್ಟು ಕೊಡುಗೆಯನ್ನು ಇನ್ಯಾವ ಪಕ್ಷವೂ ಕೊಟ್ಟಿಲ್ಲ' ಎಂದು ಬಿಜೆಪಿ ಸಾಧನೆಗಳನ್ನು ನೆನಪಿಸಿದರು.

ಸಂವಾದದಲ್ಲಿ ಕರ್ನಾಟಕವನ್ನು ಹಾಡಿ ಹೊಗಳಿದ ಮೋದಿ: ಮುಖ್ಯಾಂಶ

ಈ ಸಂದರ್ಭದಲ್ಲಿ ಮಹಾತ್ಮಾ ಫುಲೆ, ಸಂತ ರಹಿದಾಸ, ಸಂತ ಮಾದಾರ ಚೆನ್ನಯ್ಯ, ಜಗಜ್ಯೋತಿ ಬಸವೇಶ್ವರ, ಸಂತ ಕಬೀರ ದಾಸ, ರವಿದಾಸ ಮುಂತಾದ ಮಹನೀಯರನ್ನು ಮೋದಿ ಸ್ಮರಿಸಿದರು. ಸಂವಾದದ ಸಮಯದಲ್ಲಿ ಮೋದಿಯವರು ಉಲ್ಲೇಖಿಸಿದ ಪ್ರಮುಖ ವಿಷಯಗಳು ಇಲ್ಲಿದೆ.

ಕರ್ನಾಟಕದಿಂದಲೇ ಅತೀ ಹೆಚ್ಚು ದಲಿತ ಸಂಸದರು

"ದಲಿತ ಮತ್ತು ಹಿಂದುಳಿದ ವರ್ಗದ ಅತಿ ಹೆಚ್ಚು ಸಂಸದರನ್ನು ಬಿಜೆಪಿ ಚುನಾಯಿಸಿ ಲೋಕ ಸಭೆಗೆ ಕಳಿಸಿದೆ. ಅಂಬೇಡ್ಕರ್ ರ ವಿಚಾರಗಳು, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ಬಿಜೆಪಿ ಅತೀ ಆಸಕ್ತಿಯಿಂದ ಕೈಗೊಳ್ಳುತ್ತಿದೆ. ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದಂತೆ 5 ಪ್ರಮುಖ ಸ್ಥಳಗಳನ್ನು 'ಪಂಚ ತೀರ್ಥ'ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಿ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ. ಅಂಬೇಡ್ಕರ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಬಹಳಷ್ಟು ಅಡೆತಡೆಗಳಿದ್ದರೂ ಕೂಡಾ ನನ್ನ ಭಾರತ ಜಗತ್ತಿನಲ್ಲಿಯೇ ಅತ್ಯುನ್ನತ ಸ್ಥಾನಕ್ಕೇರುವುದು ನಿಶ್ಚಿತ ಎಂದು. ಅದು ಈಗ ಸಾಕಾರಗೊಳ್ಳುತ್ತಿದೆ"- ನರೇಂದ್ರ ಮೋದಿ

ಹಿಂದುಳಿದವರ ಅಭಿವೃದ್ಧಿಗೆ ಬದ್ಧ

"ಜನಧನ್ ಕಾರ್ಯಕ್ರಮದ ಯ ಮೂಲಕ 31 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸ್ವಚ್ಛ ಭಾರತ್ ಯೋಜನೆಯಡಿ 7 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.ದಲಿತರನ್ನೊಳಗೊಂಡ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ನಮ್ಮ ಗುರಿಯಾಗಿದೆ. ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ ಬದುಕಿನ ಜತೆ ಸಂಬಂಧ ಹೊಂದಿರುವ ಸ್ಥಳಗಳಾದ ಮೌವ್, ನಾಗಪುರ, 26 ಆಲಿಪುರ ರಸ್ತೆ (ದೆಹಲಿ), ದಾದರ್ ಮತ್ತು ಲಂಡನ್ ಮುಂತಾದೆಡೆ ಭೇಟಿ ನೀಡಲು "ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ" ನಿಧಿಗೆ ಹಣ ಮೀಸಲಿಡಲಾಗುವುದು. ಪ್ರಸ್ತುತ ಇರುವ ಎಲ್ಲಾ ಎಸ್ಸಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹೆಚ್ಚಿಸಲು, 600 ಎಸ್ಸಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲು ರೂ 3,000 ಕೋಟಿ ಮೊತ್ತದ "ಬಾಬು ಜಗಜೀವನ ರಾಮ್ ವಿದ್ಯಾರ್ಥಿವೇತನ ಯೋಜನೆ" ಸ್ಥಾಪಿಸಲ್ಲಿದೇವೆ"- ನರೇಂದ್ರ ಮೋದಿ

ರಾಹುಲ್ ಮಾತು ದುರಹಂಕಾರದ ಪರಮಾವಧಿಯಲ್ಲವೆ : ಮೋದಿ ವ್ಯಂಗ್ಯ

ಅಂಬೇಡ್ಕರ್ ರನ್ನು ಎಂದಿಗೂ ಗೌರವಿಸದ ಕಾಂಗ್ರೆಸ್

"ಕಾಂಗ್ರೆಸ್ ಯಾವತ್ತಿಗೂ ಬಾಬಾಸಾಹೇಬ್ ಅಂಬೇಡ್ಕರರನ್ನು ಗೌರವಿಸಿಲ್ಲ. ಅವರನ್ನು ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಹರಸಾಹಸವೆ ಮಾಡಿತು. ಆದರೆ ಶ್ಯಾಮ ಪ್ರಸಾದ ಮುಖೆರ್ಜೀ ಬಂಗಾಳದಿಂದ ಅಂಬೇಡ್ಕರರನ್ನು ಸಂಸತ್ತಿಗೆ ಕಳಿಸಿದರು.
ಅಂಬೇಡ್ಕರ್ ರನ್ನು ಕಾಂಗ್ರೆಸ್ ಬಹಳಷ್ಟು ಅವಮಾನಪಡಿದೆ.ಅವರನ್ನು ಸೋಲಿಸಿ ಅವಮಾನ ಪಡಿಸಿದ್ದು ಅಲ್ಲದೇ ಹಾಗೂ ಭಾರತರತ್ನ ಪ್ರಶಸ್ತಿ ನೀಡಲು ಕೂಡ ಮನಸ್ಸು ಮಾಡಲಿಲ್ಲ. ಆ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿ ನೀಡಿದ್ದು ಬಿಜೆಪಿಯೇ ಎನ್ನುವುದು ಕೂಡ ಮೆಚ್ಚುವಂಥದ್ದು"- ನರೇಂದ್ರ ಮೋದಿ

ಸ್ವಚ್ಛ ಭಾರತದತ್ತ ಒಂದು ಹೆಜ್ಜೆ

"ಶೌಚಾಲಯ ನಿರ್ಮಾಣ ಅಭಿಯಾನವನ್ನು ಶುರು ಮಾಡಿದಾಗ ನಮ್ಮ ಸರ್ಕಾರವನ್ನು ಕಾಂಗ್ರೆಸ್ ನವರು ವ್ಯಂಗ್ಯವಾಗಿ ಮಾತಾಡಿದರು. ಆದರೆ, ನಮ್ಮ ಸರ್ಕಾರ ಈ ಅಭಿಯಾನವನ್ನು ಇಂದು ಇಡೀ ದೇಶದಲ್ಲಿ ವ್ಯಾಪಕವಾಗಿ ಹಬ್ಬಿಸಿ,ದಾಖಲೆಯ ಮಟ್ಟದಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್' ಯೋಜನೆಯ ಮೂಲಕ ದೇಶದ 10 ಕೋಟಿ ಕುಟುಂಬಗಳ , 50ಕೋಟಿ ಜನಸಂಖ್ಯೆಗೆ 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸಿ ಆರೋಗ್ಯ ಕ್ಷೇತ್ರದಲ್ಲಿಯೇ ಕ್ರಾಂತಿ ಮಾಡಿದ್ದೇವೆ. ಸಾಂಪ್ರದಾಯಿಕ ಕಸುಬುಗಳನ್ನು ಲಾಭದಾಯಕವನ್ನಾಗಿಸಲು ಮತ್ತು ಸಾಂಪ್ರದಾಯಿಕ ಕಸುಬು ನಡೆಸುವವರ ಕಲ್ಯಾಣಕ್ಕಾಗಿ "ಒಬಿಸಿ ನಿಧಿ"ಯಡಿ ರೂ 1,000 ಕೋಟಿ ಹಣ ನೀಡಲಿದ್ದೇವೆ "- ನರೇಂದ್ರ ಮೋದಿ

ಕಾಂಗ್ರೆಸ್ಸಿಗೆ ಕಿಂಚಿತ್ತೂ ಕಾಳಜಿಯಿಲ್ಲ!

"ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಾಂಗ್ರೆಸ್ ಗೆ ಕಿಂಚಿತ್ತೂ ಕಾಳಜಿ ಇಲ್ಲ. ಲೋಕಸಭೆಯಲ್ಲಿ ನಾವು ಓಬಿಸಿ ಬಿಲ್ ಅನ್ನು ಪಾಸು ಮಾಡಿದ್ದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ನ ಮೊಂಡುತನದಿಂದ ವಿರೋಧ ವ್ಯಕ್ತವಾಯಿತು.ಇದರಿಂದಲೇ ತಿಳಿಯುತ್ತದೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿರೋಧಿಯೆಂದು. ದಲಿತರನ್ನು ಅವಮಾನಪಡಿಸುವ ಯಾವುದೇ ಕೃತ್ಯವನ್ನು ಬಿಜೆಪಿ ಸಮರ್ಥಿಸುವದಿಲ್ಲ.ಆ ಸಮಾಜಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಹಾಗೂ ದಲಿತರನ್ನು ಉನ್ನತಿಗೆ ಕೊಂಡೊಯ್ಯುವ ಎಲ್ಲ ಕೆಲಸಗಳಿಗೆ ಬಿಜೆಪಿ ತನ್ನನ್ನು ಸಮರ್ಪಿಸಿಕೊಂಡಿದೆ. ನಮ್ಮ ಸರ್ಕಾರ ದೇಶದ 4 ಕೋಟಿ ಕುಟುಂಬಗಳಿಗೆ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಒದಗಿಸಿ,ಬಡ ಕುಟುಂಬಗಳ ಪರ ನಮ್ಮ ಬದ್ಧತೆಯನ್ನು ಪೂರ್ಣಗೊಳಿಸಿದ್ದೇವೆ"- ನರೇಂದ್ರ ಮೋದಿ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: PM Narendra Modi addresses SC,ST,OBC and Slum Morcha Karyakartas of Karnataka BJP through NaMo app. Here are the highlights of the interaction.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more