ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Modi, Biden virtual meet; ಉಕ್ರೇನ್ ಬಿಕ್ಕಟ್ಟು ಶೀಘ್ರವೇ ಅಂತ್ಯ

|
Google Oneindia Kannada News

ನವದೆಹಲಿ, ಏಪ್ರಿಲ್ 11; ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವರ್ಚುವಲ್ ಸಭೆ ಸೋಮವಾರ ನಡೆಯಿತು. ಉಕ್ರೇನ್ ಬಿಕ್ಕಟ್ಟು ಸೇರಿದಂತೆ ವಿವಿಧ ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆಯನ್ನು ನಡೆಸಿದರು. ಭಾರತ-ಅಮೆರಿಕ ಬಾಂಧವ್ಯಗಟ್ಟಿಗೊಳಿಸುವಲ್ಲಿ ಈ ಸಭೆ ಮಹತ್ವದ್ದಾಗಿದೆ.

ವರ್ಚುವಲ್ ಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಯುದ್ಧಪೀಡಿತ ಉಕ್ರೇನ್‌ಗೆ ಔಷಧಿಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಪೂರೈಕೆ ಮಾಡಿದ ಕುರಿತು ಮಾತನಾಡಿದರು. "ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ನಾವು ದಾರಿ ಮಾಡಿಕೊಡುತ್ತವೆ" ಎಂದರು.

ಉಕ್ರೇನ್-ರಷ್ಯಾ ಸಂಧಾನ: ಯುರೋಪಿಯನ್ ನಾಯಕರೊಂದಿಗೆ ಬೈಡನ್ ಚರ್ಚೆ ಉಕ್ರೇನ್-ರಷ್ಯಾ ಸಂಧಾನ: ಯುರೋಪಿಯನ್ ನಾಯಕರೊಂದಿಗೆ ಬೈಡನ್ ಚರ್ಚೆ

"ಯುದ್ಧ ಪೀಡಿತ ಉಕ್ರೇನ್‌ನಲ್ಲಿನ ನಾಗರಿಕರ ಸುರಕ್ಷತೆ ಮತ್ತು ಅವರಿಗೆ ಮಾನವೀಯ ನೆರವನ್ನು ನಿರಂತರವಾಗಿ ನೀಡುವುದಕ್ಕೆ ನಾವು ಆದ್ಯತೆ ನೀಡಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Modi

ಪ್ರಧಾನಿ ನರೇಂದ್ರ ಮೋದಿ, "ಇತ್ತೀಚೆಗೆ ಬುಚಾ ನಗರದಲ್ಲಿ ನಡೆದ ಅಮಾಯಕ ನಾಗರೀಕರ ಹತ್ಯೆಯ ಸುದ್ದಿ ಬಹಳ ಕಳವಳಕಾರಿಯಾಗಿತ್ತು. ತಕ್ಷಣ ಅದನ್ನು ನಾವು ಖಂಡಿಸಿದ್ದೇವೆ ಮತ್ತು ನ್ಯಾಯಯುತ ತನಿಖೆಗೆ ಒತ್ತಾಯಿಸಿದ್ದೇವೆ" ಎಂದು ವರ್ಚುವಲ್ ಸಭೆಯಲ್ಲಿ ತಿಳಿಸಿದರು.

ಅಮೆರಿಕ ಭೇಟಿ ನೆನಪು ಮಾಡಿಕೊಂಡ ನರೇಂದ್ರ ಮೋದಿ, "ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ಗೆ ಬಂದಾಗ, ಭಾರತ-ಅಮೆರಿಕ ಪಾಲುದಾರಿಕೆ ಅನೇಕ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಕೊಡುಗೆ ನೀಡಬಹುದು ಎಂದು ನೀವು ಹೇಳಿದ್ದೀರಿ. ನಾನು ಇದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ಹೇಳಿದರು.

ಉಕ್ರೇನ್ ಗಡಿಯ ಜೆಸ್ಜೋವ್ ನಗರಕ್ಕೆ ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿ ಉಕ್ರೇನ್ ಗಡಿಯ ಜೆಸ್ಜೋವ್ ನಗರಕ್ಕೆ ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿ

ಸಭೆಯಲ್ಲಿ ನರೇಂದ್ರ ಮೋದಿ, "ಉಕ್ರೇನ್ ಮತ್ತು ರಷ್ಯಾದ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಹಲವಾರು ಬಾರಿ ಮಾತುಕತೆ ನಡೆಸಿದ್ದೇನೆ. ಶಾಂತಿ ಕಾಪಾಡಲು ಅವರಿಗೆ ಒತ್ತಾಯಿಸಿದ್ದೇನೆ. ಉಕ್ರೇನ್ ಜೊತೆ ನೇರವಾಗಿ ಮಾತುಕತೆ ನಡೆಸುವಂತೆ ಅಧ್ಯಕ್ಷ ಪುಟಿನ್‌ಗೆ ಸಲಹೆ ನೀಡಿದ್ದೇನೆ. ಬುಚಾದಲ್ಲಿನ ನಾಗರಿಕರ ಹತ್ಯೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದೇನೆ" ಎಂದರು.

ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್

ಜೋ ಬೈಡನ್ ಮಾತನಾಡಿ, "ರಷ್ಯಾ ಯುದ್ಧದ ಪರಿಣಾಮ, ಪರಿಸ್ಥಿತಿ ಸ್ಥಿರಗೊಳಿಸುವ ಕುರಿತು ಅಮೆರಿಕ ಮತ್ತು ಭಾರತ ತಮ್ಮ ಸಮಾಲೋಚನೆಯನ್ನು ಮುಂದುವರೆಸಲಿವೆ. ನಮ್ಮ ಮಾತುಕತೆಯಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ" ಎಂದರು.

ಪ್ರಧಾನಿ ಮೋದಿ ಮಾತನಾಡಿ, "ನಿಮ್ಮ ಅಧಿಕಾರಾವಧಿಯ ಆರಂಭದಲ್ಲಿ ನೀವು ಬಹಳ ಮುಖ್ಯವಾದ ಘೋಷಣೆಯೊಂದನ್ನು ಮಾಡಿದ್ದೀರಿ. ಪ್ರಜಾಪ್ರಭುತ್ವಗಳನ್ನು ಉಳಿಸುವ ಘೋಷಣೆಯನ್ನು ಭಾರತ-ಅಮೆರಿಕ ಪಾಲುದಾರಿಕೆಯಿಂದ ಯಶಸ್ವಿ ಮತ್ತು ಅರ್ಥಪೂರ್ಣಗೊಳಿಸಲು ಸಾಧ್ಯ" ಎಂದು ಹೇಳಿದರು.

2+2 ಸಚಿವರ ಸಭೆ; ಭಾರತ-ಅಮೆರಿಕ 2+2 ಸಚಿವರ ಸಭೆಯು ಸೋಮವಾರ ನಡೆಯಲಿದೆ. ಉಭಯ ರಾಷ್ಟ್ರಗಳ ರಕ್ಷಣಾ, ವಿದೇಶಾಂಗ ಸಚಿವರ ಸಭೆಗೂ ಮುನ್ನ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ವರ್ಚುವಲ್ ಸಭೆ ನಡೆಯಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್. ಜೈ ಶಂಕರ್ 2+2 ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತಲುಪಿದ್ದಾರೆ. ಜೋ ಬೈಡನ್ ಅಮೆರಿಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಅಮೆರಿಕ 2+2 ಸಚಿವರ ಸಭೆಯು ನಡೆಯುತ್ತಿದೆ.

ಉಕ್ರೇನ್-ರಷ್ಯಾ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶ್ವೇತ ಭವನದಲ್ಲಿ ಭಾರತದ ಇಬ್ಬರೂ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್ ಬಿಕ್ಕಟ್ಟು, ಕೋವಿಡ್ ಪರಿಸ್ಥಿತಿ, ಹವಾಮಾನ ವೈಪರಿತ್ಯ, ಜಾಗತಿಕ ಬಿಕ್ಕಟ್ಟು, ಭದ್ರತೆ, ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ವಿಚಾರಗಳ ಕುರಿತು 2+2 ಸಚಿವರ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ.

English summary
In a virtual meeting between prime minister if India Narendra Modi and America president Joe Biden modi said that hope Ukraine crisis ends soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X