ಉಕ್ರೇನ್ ಯುದ್ಧದ ನಡುವೆ ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್

ನವದೆಹಲಿ, ಏಪ್ರಿಲ್ 07: ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಕಾರಣದಿಂದಾಗಿ ಹಲವಾರು ದೇಶಗಳು ರಷ್ಯಾದ ಮೇಲೆ ನಿರ್ಬಂಧವನ್ನು ಹೇರಿದೆ. ಈ ನಡುವೆ ಭಾರತದ ತೈಲ ಸಂಸ್ಕರಣಾ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿ ಮಾಡಿದೆ ಎಂದು ವರದಿ ತಿಳಿಸಿದೆ.

ಹಲವಾರು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧವನ್ನು ವಿಧಿಸಿದೆ. ಈ ನಡುವೆ ಇನ್ನು ಕೆಲವು ರಾಷ್ಟ್ರಗಳು ಎಂದಿನಂತೆ ರಷ್ಯಾದೊಂದಿಗೆ ಆರ್ಥಿಕ ವ್ಯವಹಾರವನ್ನು ನಡೆಸುತ್ತಿದೆ. ಪ್ರಮುಖವಾಗಿ ರಷ್ಯಾವು ತೈಲ ರಫ್ತುದಾರ ರಾಷ್ಟ್ರವಾಗಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ ಕೆಲವು ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿ ಮಾಡುವುದನ್ನು ಸ್ಥಗಿತ ಮಾಡಿದರೆ, ಇನ್ನೂ ಕೆಲವು ರಾಷ್ಟ್ರಗಳು ತೈಲವನ್ನು ಖರೀದಿ ಮಾಡುವುದನ್ನು ಮುಂದುವರಿಸಿದೆ.

ಭಾರತದ ತೈಲ ಸಂಸ್ಕರಣಾ ಕಂಪನಿಗಳು ಕೂಡಾ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದ್ದು, ಇದು ಇದು ಮೇ ತಿಂಗಳಲ್ಲಿ ಸಾಗಣೆ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.

Amid Ukraine-Russia War BPCL buys 2 million barrels of Russian Urals

ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿ

ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆ ರಷ್ಯಾದ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿದ ಬಳಿಕ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುತ್ತಿವೆ. ಆದರೆ ಈ ಸಂದರ್ಭದಲ್ಲಿಯೇ ಪಶ್ಚಿಮದ ಹಲವು ದೇಶಗಳು ರಷ್ಯಾದಿಂದ ತೈಲ ಖರೀದಿ ಸ್ಥಗಿತ ಮಾಡಿದೆ.

Amid Ukraine-Russia War BPCL buys 2 million barrels of Russian Urals

ಬಿಪಿಸಿಎಲ್ ರಷ್ಯಾದ ಯೂರಲ್ಸ್ ಕಚ್ಚಾ ತೈಲವನ್ನು ಈ ಹಿಂದಿನಿಂದಲೂ ಖರೀದಿ ಮಾಡುತ್ತಾ ಬಂದಿದೆ. ಈ ನಡುವೆ ಸೌದಿಯಿಂದ ಭಾರತದ ತೈಲ ಖರೀದಿ ಕಡಿಮೆಯಾಗಿದೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಭಾರತವು ಫೆಬ್ರವರಿ 24ರ ನಂತರ ರಷ್ಯಾದಿಂದ ಒಟ್ಟು 1.60 ಕೋಟಿ ಬ್ಯಾರೆಲ್ ತೈಲ ಖರೀದಿಸಿದೆ. ಆದರೆ ದೇಶದ ಎರಡು ತೈಲ ಸಂಸ್ಕರಣಾ ಕಂಪನಿಗಳು ಮೇ ತಿಂಗಳಲ್ಲಿ ಸೌದಿ ಅರೇಬಿಯಾದಿಂದ ಕಡಿಮೆ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿ ಮಾಡಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಸೌದಿ ಆರಾಮ್ಕೊ ಕಂಪನಿಯು ಮೇ ತಿಂಗಳಲ್ಲಿ ಏಷ್ಯಾಕ್ಕೆ ಪೂರೈಕೆ ಆಗುವ ಕಚ್ಚಾ ತೈಲದ ಬೆಲೆಯನ್ನು ತೀವ್ರವಾಗಿ ಹೆಚ್ಚಳ ಮಾಡಿದ ಬಳಿಕ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ರಿಯಾಯತಿ ಬೆಲೆಯಲ್ಲಿಯೇ ಇಂಧನ ಖರೀದಿಗೆ ಮುಂದಾಗಿದೆ ಎಂದು ವರದಿ ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+