ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಸಿಡಿ ಚುನಾವಣೆ: ಕೇಜ್ರಿವಾಲ್ 'ಚೋಟಾ ರೀಚಾರ್ಜ್' ಎಂದ ಓವೈಸಿ

|
Google Oneindia Kannada News

ದೆಹಲಿ ನವೆಂಬರ್ 28: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ತನ್ನ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪಕ್ಷದ ಸಾರ್ವಜನಿಕ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅಸಾದ್ದುದಿನ್ ಓವೈಸಿ, ಆಡಳಿತ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

'ಇಲ್ಲಿ ಹಲವಾರು ಎಂಸಿಡಿ ವಾರ್ಡ್‌ಗಳ ಬಗ್ಗೆ ಗಮನ ಹರಿಸಲಾಗಿಲ್ಲ ಮತ್ತು ಈ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಗುಜರಾತಿಗೆ ಹೋಗು, ದೆಹಲಿಯ ಸೀಲಾಂಪುರಕ್ಕೆ ಹೋಗು... ಅಂತ ಪಕ್ಷದ ನಾಯಕರು ಅಲೆದಾಡುತ್ತಿದ್ದಾರೆ. ಆದರೆ ಈ ಪ್ರದೇಶಗಳಲ್ಲಿ ಅಭಿವೃದ್ಧಿಯಾಗಲೀ ಅಥವಾ ಶಾಲೆಗಳ ನಿರ್ಮಾಣವಾಗಲಿ ಆಗಿಲ್ಲ' ಎಂದು ಓವೈಸಿ ದೂರಿದ್ದಾರೆ.

ದೆಹಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಅರವಿಂದ್ ಕೇಜ್ರಿವಾಲ್ 'ಚೋಟಾ ರೀಚಾರ್ಜ್' ಎಂದು ಕರೆದಿದ್ದಾರೆ. ಹಿಂದಿನ ಸರ್ಕಾರಗಳ ವಿರುದ್ಧ ಕೂಡ ವಾಗ್ದಾಳಿ ನಡೆಸಿದ ಅವರು, ದೆಹಲಿಯ ಅಭಿವೃದ್ಧಿಗೆ ಯಾರೂ ಶ್ರಮಿಸಲಿಲ್ಲ. ಶಾಲೆಗಳ ನಿರ್ಮಾಣವಾಗಲೀ, ಸ್ವಚ್ಛತೆ ಅನುಷ್ಠಾನವಾಗಲೀ ಆಗಿಲ್ಲ ಎಂದರು.

ದೆಹಲಿ ಸಿಎಂ ವಿರುದ್ಧ ಓವೈಸಿ ವಾಗ್ದಾಳಿ

ದೆಹಲಿ ಸಿಎಂ ವಿರುದ್ಧ ಓವೈಸಿ ವಾಗ್ದಾಳಿ

ತಬ್ಲೀಘಿ ಜಮಾತ್‌ಗೆ ಮಾನಹಾನಿ ಮಾಡಿದ್ದಕ್ಕಾಗಿ ದೆಹಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ತಬ್ಲಿಘಿ ಜಮಾತ್ ಮೇಲೆ ಕೋವಿಡ್ -19 ಹರಡುವಿಕೆಯ ಹೊಣೆಗಾರಿಕೆಯನ್ನು ಕೇಜ್ರಿವಾಲ್ ಪಿನ್ ಮಾಡಿದ್ದಾರೆ. ನೀವು ತಬ್ಲೀಘಿ ಜಮಾತ್‌ಗೆ ಮಾನಹಾನಿ ಮಾಡಿದ್ದೀರಿ. ಕೊರೊನಾ ಹೆಚ್ಚಾದರೆ ಅದನ್ನು ಹರಡಲು ತಬ್ಲಿಘಿ ಜಮಾತ್ ಕಾರಣ ಎಂದು ಇಡೀ ಜಗತ್ತು ದೂಷಿಸುವಂತೆ ಮಾಡಿದ್ದೀರಿ" ಎಂದರು.

ಸಿಎಎ ವಿರೋಧಿ ಪ್ರತಿಭಟನೆ

ಸಿಎಎ ವಿರೋಧಿ ಪ್ರತಿಭಟನೆ

ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವಿಷಯವನ್ನೂ ಅವರು ಪ್ರಸ್ತಾಪಿಸಿದರು. 2020ರ ದೆಹಲಿ ಗಲಭೆಯ ವಿಷಯವನ್ನು ಪ್ರಸ್ತಾಪಿಸಿದರು. ಜನರ ಮನೆಗಳು ಉರಿಯುತ್ತಲೇ ಇದ್ದವು. ಆದರೆ ಮುಖ್ಯಮಂತ್ರಿ ನಾಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ನನಗೆ ಒಂದು ದಿನ ರಕ್ಷಣೆಗೆ ಪೊಲೀಸರನ್ನು ನೀಡಲಿಲ್ಲ ಎಂದು ದೂರಿದರು.

ಬುರ್ಖಾ ವಿಚಾರದಲ್ಲಿ ಕೇಜ್ರಿವಾಲ್ ನಿಲುವೇನು?

ಬುರ್ಖಾ ವಿಚಾರದಲ್ಲಿ ಕೇಜ್ರಿವಾಲ್ ನಿಲುವೇನು?

ಓವೈಸಿ ಅವರು ಕೇಜ್ರಿವಾಲ್ ವಿರುದ್ಧ ಮತ್ತಷ್ಟು ವಾಕ್ ಸಮರ ಮುಂದುವರೆಸಿದರು. ಹಲವಾರು ವಿಷಯಗಳ ಬಗ್ಗೆ ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿದರು. ಬುರ್ಖಾ ವಿಚಾರದಲ್ಲಿ ಕೇಜ್ರಿವಾಲ್ ಏನು ಹೇಳಿದ್ದಾರೆ? ಏಕರೂಪ ನಾಗರಿಕ ಸಂಹಿತೆ ಬಗ್ಗೆ ಕೇಜ್ರಿವಾಲ್ ಅವರನ್ನು ಕೇಳಬೇಕು. ಬುರ್ಖಾ ಬಗ್ಗೆ ನಿಮ್ಮ ನಿಲುವೇನು ಎಂದು ಕೇಜ್ರಿವಾಲ್ ಅವರನ್ನು ಕೇಳಬೇಕು. ಬುರ್ಖಾ ಬಗ್ಗೆ ಕೇಜ್ರಿವಾಲ್ ಏನು ಹೇಳುತ್ತಾರೆ ಕೇಳಬೇಕಾಗಿದೆ? ಯಾಕೆಂದರೆ ಅವರು ಬಿಕ್ಲಿಸ್ ಬಾನೋ (11 ಅಪರಾಧಿಗಳ ಬಿಡುಗಡೆ) ಬಗ್ಗೆ ಮಾತನಾಡುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ವಿರುದ್ಧ ಓವೈಸಿ ಕಿಡಿ

ಸಿಎಂ ವಿರುದ್ಧ ಓವೈಸಿ ಕಿಡಿ

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸುತ್ತಲಿನ ಹಿಂಸಾಚಾರಕ್ಕಾಗಿ ಜೈಲು ಪಾಲಾದ ಉಮರ್ ಖಾಲಿದ್ ಅವರ ವಿಷಯವನ್ನೂ ಓವೈಸಿ ಅವರು ಪ್ರಸ್ತಾಪಿಸಿದರು. ತನ್ನ ಪತಿಗೆ ಆಹಾರ ನೀಡುವಂತೆ ಉಮರ್ ಖಾಲಿದ್ ಪತ್ನಿ ವಿಡಿಯೋಗಳ ಮೂಲಕ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾಳೆ. ಆದರೆ 'ಕೇಜ್ರಿವಾಲ್ ತನ್ನ ಸಚಿವರನ್ನು ಜೈಲಿನಲ್ಲಿ ಎಣ್ಣೆ ಹಾಕುತ್ತಿದ್ದಾರೆ' ಎಂದು ಓವೈಸಿ ಕಿಡಿ ಕಾರಿದರು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ 250 ಸ್ಥಾನಗಳಿಗೆ ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದೆ.

English summary
AIMIM has fielded 15 of its candidates in the Delhi Municipal Corporation elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X