ಪುಣೆ: ಮರಾಠಿ ನಿರ್ದೇಶಕ ದಿಲಿಪ್ ಕೊಠಾರಿ ಪತ್ನಿ ನಿಗೂಢ ಸಾವು
ಪುಣೆ, ಫೆಬ್ರವರಿ 10: ಮರಾಠಿ ರಂಗಭೂಮಿ ಮತ್ತು ಸಿನಿಮಾ ನಿರ್ದೇಶಕ ದಿಲಿಪ್ ಕೊಠಾರಿ ಅವರ ಪತ್ನಿ ತಮ್ಮ ಫ್ಲಾಟ್ ನಲ್ಲಿ ನಿಗೂಢವಾಗಿ ಸಾವಿಗೀಡಾದ ಘಟನೆ ನಡೆದಿದೆ.
ಫೆ.8 ರಂದು ಗುರುವಾರ 65 ವರ್ಷದ ದೀಪಾಲಿ ಕೊಠಾರಿ ಅವರ ಶವ ಅವರ ಫ್ಲಾಟ್ ನಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದನ್ನು ಕೊಲೆ ಎಂದು ಶಂಕಿಸಲಾಗಿತ್ತಾದರೂ, ಅವರ ಅಳಿಯ ಇದನ್ನು ಆಕಸ್ಮಿಕ ಸಾವು ಎಂದಿದ್ದರು.
ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಅವರು ಬುಧವಾರ ಮಧ್ಯರಾತ್ರಿ ಅಥವಾ ಗುರುವಾರ ಬೆಳಗ್ಗಿನ ಜಾವ ಮೃತರಾಗಿದ್ದಾರೆ. ಅವರ ತಲೆ ಮತ್ತು ದೇಹದ ಮೇಲೆ ಸುಟ್ಟ ಗಾಯಗಳಿದ್ದು, ಅವರನ್ನು ಥಳಿಸಿ, ಕತ್ತು ಹಿಸುಕಿ ಸಾಯಿಸಲಾಗಿದೆ ಎಂದು ಶಂಕಿಸಲಾಗಿದೆ.

ಇದು ಆಕಸ್ಮಿಕ ಸಾವಲ್ಲ ಎಂದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications