Pune-Mumbai Expressway: ಈ ಹೆದ್ದಾರಿಯಲ್ಲಿ 'ತುರ್ತು ಕರೆ ಬೂತ್' ಸ್ಥಾಪನೆ, ಪ್ರಯಾಣಿಕರು ಗಮನಿಸಿ
ಪುಣೆ, ಫೆಬ್ರವರಿ 08: ಕೇಂದ್ರ ಬಿಜೆಪಿ ಸರ್ಕಾರವು ದೇಶದ ಸಾರಿಗೆ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದರ ಭಾಗವಾಗಿಯೇ ಈ ಎಕ್ಸ್‌ಪ್ರೆಸ್‌ವೇ ನಲ್ಲಿ ಸವಾರರಿಗೆ, ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಅಳವಡಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು 95-ಕಿಲೋಮೀಟರ್ ಉದ್ದದ ಪುಣೆ- ಮುಂಬೈ ಎಕ್ಸ್‌ಪ್ರೆಸ್‌ವೇ (Pune-Mumbai Expressway) ನಲ್ಲಿ ಪ್ರತಿ ಎರಡು ಕಿಲೋ ಮೀಟರ್ ಮಾರ್ಗ ಮಧ್ಯೆ 'ತುರ್ತು ಕರೆ ಬೂತ್'ಗಳನ್ನು ಸ್ಥಾಪಿಸಲು ಕರೆ ನೀಡಿದೆ.

ಹೌದು, ಈ ಪುಣೆ- ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಓಡಾಡುವ ಪ್ರಯಾಣಿಕರು, ಸವಾರರು ಸೇರಿದಂತೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಉತ್ತಮ ಸಾರಿಗೆ ವ್ಯವಸ್ಥೆಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (MSRDC) ಪ್ರಮುಖ ಟೆಲಿಕಾಂ ಆಪರೇಟರ್ ವಿಐ (Vodafone Idea Limited) ಜೊತೆಗೆ ಪಾಲುದಾರಿಕೆ ಹೊಂದಿದೆ.
ಪ್ರಯಾಣಿಕರ ಜತೆ ನೇರ ಸಂಪರ್ಕಿಸುವ ಬೂತ್
ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಮತ್ತು ರಾಜ್ಯ ಹೆದ್ದಾರಿ ಪೊಲೀಸ್ ನಿಯಂತ್ರಣ ಕೊಠಡಿಯ ನಡುವೆ ನೇರ ಸಂಪರ್ಕವನ್ನು ಸಕ್ರಿಯಗೊಳಿಸಲು ಈ ಬೂತ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಹೆದ್ದಾರಿಯಲ್ಲಿ ಈ ವಿಶೇಷ ವ್ಯವಸ್ಥೆಯು ವಿಐ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಅವರ ಸಹಕಾರದಲ್ಲಿ ಬೂತ್ ಸ್ಥಾಪನೆಗೆ ಆಹ್ವಾನ ನೀಡಲಾಗಿದೆ.
ಒಪ್ಪಂದದಂತೆ, ಹೆದ್ದಾರಿಯಲ್ಲಿ ತುರ್ತು ಕರೆ ಬೂತ್‌ನಲ್ಲಿ ನೆಟ್‌ವರ್ಕ್ ಸ್ಥಿರತೆಯನ್ನು ಖಾತರಿಪಡಿಸಲಾಗುತ್ತದೆ. ಮುಖ್ಯವಾಗಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆ ತರಲಾಗುತ್ತಿದೆ. ಪ್ರಯಾಣಿಕರಿಗೆ ಗಡಿಯಾರದ ಸುತ್ತ ಸುಗಮ ಸಂವಹನವನ್ನು ನೀಡುತ್ತದೆ.

ಪ್ರಯಾಣಿಕರ ಪ್ರತಿ ಪ್ರಶ್ನೆಗೆ ಉತ್ತರ
ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ನೆಟ್‌ವರ್ಕ್ ಸ್ಥಗಿತವನ್ನು ತಪ್ಪಿಸಲು, ರಾಜ್ಯ ಹೆದ್ದಾರಿ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ತುರ್ತು ಕರೆ ಬೂತ್‌ಗಳಲ್ಲಿ ವಿಐ ಸಿಮ್ ಕಾರ್ಡ್‌ಗಳನ್ನು ಅಳವಡಿಸಲಾಗುವುದು. MSRDC ಉಪಕರಣಗಳ ನಿರ್ವಹಣೆ ಮಾಡುವ ಜೊತೆಗೆ ತುರ್ತು ಸಂದರ್ಭದಲ್ಲಿ ಕರೆ ಮಾಡುವ ಪ್ರಯಾಣಿಕರ ಯಾವುದೇ ಪ್ರಶ್ನೆಗಳಿಗೆ ಉತ್ತರ/ಪರಿಹಾರ ಒದಗಿಸುತ್ತದೆ.
ಮಹಾರಾಷ್ಟ್ರ ರಾಜ್ಯದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿರುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ನಲ್ಲಿ ಈ ತುರ್ತು ಕರೆ ಬೂತ್‌ಗಳು ಸ್ಥಾಪಿಸದರೆ, ಅದು ವೈದ್ಯಕೀಯ ಬಿಕ್ಕಟ್ಟುಗಳು, ಕಾರ್ ಸ್ಥಗಿತಗಳು ಮತ್ತು ಅಪಘಾತಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಜೀವಗಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಮತ ವ್ಯಕ್ತಪಡಿಸಿದ್ದಾರೆ.
ಕಾಲಕಾಲಕ್ಕೆ ಹೆದ್ದಾರಿ, ಬೂತ್ ಮೂಲಸೌಕರ್ಯ ಹೆಚ್ಚಳ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಜನರಿಗೆ ಸುರಕ್ಷಿತ ಪ್ರಯಾಣದ ಅನುಭವ ಒದಗಿಸುವ ಪ್ರಯತ್ನದ ನಿರ್ಣಾಯಕ ಭಾಗವಾಗಿದೆ. ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ವಿಐ ಕಾಲಾನಂತರದಲ್ಲಿ ನೆಟ್‌ವರ್ಕ್‌ನ ಉತ್ತಮ ಗುಣಮಟ್ಟ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಪರಿಣತಿ ಮತ್ತು ಅನುಭವವನ್ನು ಹೊಂದಿದೆ.
ಇದೆಲ್ಲದ ಜತೆ ಜೊತೆಗೆ ಹೆದ್ದಾರಿಯ ರಕ್ಷಣೆ ಮತ್ತು ಸಂವಹನ ಮೂಲಸೌಕರ್ಯವನ್ನು ಹೆಚ್ಚಿಸಲು ಸಹ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ.
ಈ ಹೆದ್ದಾರಿಯಲ್ಲಿ ತುರ್ತು ಕರೆ ಬೂತ್ ಹೇಗಿಲಿದೆ ಎಂಬ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಐ ಹಂಚಿಕೊಂಡಿದ್ದು, ಎಲ್ಲಡೆ ಹರಿದಾಡುತ್ತಿದೆ.












Click it and Unblock the Notifications