Trains Cancellation: ಈ ಮಾರ್ಗದಲ್ಲಿ 25 ದಿನ 16 ದೂರದ ರೈಲುಗಳ ಸಂಚಾರ ಸ್ಥಗಿತ, ಕಾರಣ?, ದಿನಾಂಕ ತಿಳಿಯಿರಿ
ನವದೆಹಲಿ, ಜನವರಿ 11: ದೇಶಾದ್ಯಂತ ಕೋಟ್ಯಂತರ ಜನರಿಗೆ ಕಡಿಮೆ ಬೆಲೆಯಲ್ಲಿ ಪ್ರಯಾಣ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಆಗಾಗ ಹಳಿ ತಪಾಸಣೆ ಸೇರಿದಂತೆ ನಿರ್ವಹಣೆ ಕಾರ್ಯಚರಣೆ ಕೈಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಈ ಮಾರ್ಗದಲ್ಲಿ ಒಟ್ಟು 16 ರೈಲುಗಳು ಸಂಚಾರ ರದ್ದು ಮಾಡಲಾಗಿದೆ.
ಭಾರತೀಯ ರೈಲ್ವೇ ಇಲಾಖೆ ವ್ಯಾಪ್ತಿಯ ಆಗ್ರಾ ವಿಭಾಗದಲ್ಲಿ ನಿರ್ವಹಣಾ ಕಾರ್ಯಗಳನ್ನು, ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ಜನವರಿ 10 ರಿಂದ ಫೆಬ್ರವರಿ 6 ರವರೆಗೆ ದೂರದ (Long Distance Connecting trains) ವಿವಿಧ 16 ರೈಲುಗಳನ್ನು ರದ್ದುಗೊಳಿಸಿರುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಈ ದೂರದ ರೈಲುಗಳು ಆಗ್ರಾ ವಿಭಾಗ ವ್ಯಾಪ್ತಿಯಿಂದ ಪುಣೆಯನ್ನು ಸಂಪರ್ಕಿಸುವ ರೈಲುಗಳಾಗಿದ್ದು, ಸುಮಾರು ಮುಂದಿನ 25 ದಿನಗಳ ಕಾಲ ಈ ರೈಲುಗಳು ವಾಣಿಜ್ಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಫೆಬ್ರುವರಿ ಮೊದಲ ವಾರ ಕೆಲಸ ಪೂರ್ಣ?
ಇಲ್ಲಿನ ಪಲ್ವಾಲ್-ಮಥುರಾ ಜಂಕ್ಷನ್ ನಡುವೆ ಯಾರ್ಡ್ ಮರುನಿರ್ಮಾಣಕ್ಕಾಗಿ ಇಂಟರ್‌ಲಾಕ್ ರಹಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಫೆಬ್ರವರಿ ಮೊದಲ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯೆ ಇದೆ. ಇದಾದ ಬಳಿಕವೇ ನಂತರ ರೈಲುಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಆಗ್ರಾ ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಣೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮ್ ಪಾಲ್ ಬರ್ಪಗ್ಗ ಅವರು, ಉತ್ತರ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಪ್ರಯಾಣಿಕರಿಗೆ ರೈಲ್ವೇ ವಿಚಾರಣೆ ವ್ಯವಸ್ಥೆಯಲ್ಲಿ ರೈಲಿನ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಬೇಕು. ನಿಮ್ಮ ಪ್ರಯಾಣಕ್ಕೂ ಮುನ್ನ ಆ ಮಾರ್ಗದ ರೈಲು ಸಂಚಾರ ಕುರಿತು ತಿಳಿದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಇನ್ನೂ ಆಗ್ರಾ ವಿಭಾಗದಲ್ಲಿ ರೈಲು ಮಾರ್ಗದಲ್ಲಿ ನಡೆಯುತ್ತಿರುವ ತಾಂತ್ರಿಕ ಕೆಲಸಗಳು ಈ ರೈಲುಗಳ ಸಂಚಾಋದ ಮೇಲೆ ಪರಿಣಾಮ ಬೀರುತ್ತಿವೆ. ಆದರೆ ಇದು ಪುಣೆ ರೈಲ್ವೆ ವಿಭಾಗಕ್ಕೆ ಸಂಬಂಧಿಸಿಲ್ಲ. ಫೆಬ್ರವರಿ ಮೊದಲ ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಟ್ರ್ಯಾಕ್ ವಿದ್ಯುದೀಕರಣ ಮಾಹಿತಿ
ಇತ್ತೀಚೆಗೆ ಭಾರತೀಯ ರೈಲ್ವೆ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣದಲ್ಲಿ ಇಲಾಖೆ ಸುಮಾರು ಶೇಕಡಾ 93% ಸಾಧನೆ ಮಾಡಿದೆ. 2030ರ ಹೊತ್ತಿಗೆ ಎಲ್ಲ ಮಾರ್ಗ ಪ್ರತಿಯೊಂದು ರೈಲುಗಳು ವಿದ್ಯುತ್ ಚಾಲಿತವಾಗಿ ಓಡಾಡುವಂತೆ ಮಾಡಲು ಸಚಿವಾಲಯ ಗುರಿ ಇಟ್ಟುಕೊಂಡಿದೆ.
ಅದೇ ರೀತಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೈಋತ್ಯ ರೈಲ್ವೆ ವಿಭಾಗ (SWR) ವ್ಯಾಪ್ತಿಯಲ್ಲಿ ಒಟ್ಟು ಮಾರ್ಗಗಳಲ್ಲಿ ಶೇಕಡಾ 85ರಷ್ಟು ಮಾರ್ಗಗಳನ್ನು ವಿದ್ಯುದೀಕರಣ ಮಾಡಲಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಶೇಕಡಾ 100 ರಷ್ಟು ಸಾಧನೆ ಆಗಿದೆ. ಕರ್ನಾಟಕದಲ್ಲಿ ಶೇಕಡಾ 15ರಷ್ಟು ವಿದ್ಯುದೀಕರಣ ಮಾಡುವುದು ಬಾಕಿ ಇದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications