ವಾರಾಂತ್ಯದಲ್ಲಿ ಪ್ರಮುಖ ರೈಲುಗಳ ಸಂಚಾರ ರದ್ದು, ಯಾವ ಮಾರ್ಗದಲ್ಲಿ ತಿಳಿಯಿರಿ

ನವದೆಹಲಿ, ನವೆಂಬರ್‌, 24: ರೈಲ್ವೆ ಹಳಿ ಕಾಮಗಾರಿ ಹಿನ್ನೆಲೆ ವಾರಾಂತ್ಯದಲ್ಲಿ ದೇಶದ ಈ ಎರಡು ಮಾರ್ಗಗಳ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಯಾವತ್ತು ರೈಲು ಸಂಚಾರ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ. ಹಾಗೆಯೆ ರೊಚ್ಚಿಗೆದ್ದ ಪ್ರಯಾಣಿಕರ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.

ಪುಣೆಯಲ್ಲಿ ರೈಲ್ವೆ ಕಾಮಗಾರಿ ಹಿನ್ನೆಲೆ ನವೆಂಬರ್ 25 ಮತ್ತು 26 ರಂದು ಮುಂಬೈ ಮತ್ತು ಪುಣೆಯ ಎರಡು ನಗರಗಳ ನಡುವೆ ಸಂಚರಿಸುವ ಹಲವಾರು ಪ್ರಮುಖ ರೈಲುಗಳನ್ನು ರದ್ದುಗೊಳಿಸಲಾಗಿದೆ, ಇದು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ.

Trains cancel in Weekend: Major trains canceled at weekend in these part of india

ರೈಲ್ವೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಖಡ್ಕಿ ಮತ್ತು ಶಿವಾಜಿನಗರ ರೈಲ್ವೆ ಮಾರ್ಗ ವಿಭಾಗದ ನಡುವೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಕೆಲಸಕ್ಕಾಗಿ ವಾರಾಂತ್ಯದಲ್ಲಿ ವಿಶೇಷ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಪುಣೆ ಮತ್ತು ಮುಂಬೈ ನಡುವೆ ಓಡುವ ಡೆಕ್ಕನ್ ಕ್ವೀನ್, ಸಿಂಹಗಡ ಎಕ್ಸ್‌ಪ್ರೆಸ್, ಇಂಟರ್‌ಸಿಟಿ, ಕೊಯ್ನಾ ಮತ್ತು ಡೆಕ್ಕನ್ ಎಕ್ಸ್‌ಪ್ರೆಸ್‌ನಂತಹ ಪ್ರಮುಖ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಇದರ ಹೊರತಾಗಿ, ಅನೇಕ ಇತರ ದೂರದ ರೈಲುಗಳು ತಡವಾಗಿ ಸಂಚಾರ ಆರಂಭಿಸಲಿವೆ. ಅಲ್ಲದೆ ಪುಣೆ ಮತ್ತು ಲೋನಾವಾಲಾ ನಡುವೆ ಓಡುವ 46 ಸ್ಥಳೀಯ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೈಲ್ವೇ ಹೇಳಿಕೆ ಹೀಗಿದೆ

ಪುಣೆ ವಿಭಾಗದಲ್ಲಿ ಖಡ್ಕಿ ಮತ್ತು ಶಿವಾಜಿನಗರ ನಡುವೆ ಯಾರ್ಡ್ ಮತ್ತು ಸ್ವಯಂಚಾಲಿತ ಸಿಗ್ನಲಿಂಗ್ ಕಾರ್ಯವನ್ನು ಕೈಗೊಳ್ಳಲಾಗುವುದು. ಆದ್ದರಿಂದ, ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಅಥವಾ ಮರುಹೊಂದಿಸಲಾಗುತ್ತದೆ. ಲೋನಾವಾಲಾದಿಂದ ಪುಣೆ ವಿಭಾಗದಲ್ಲಿ ಖಡ್ಕಿ ಮತ್ತು ಶಿವಾಜಿನಗರ ನಡುವೆ ನವೆಂಬರ್ 22ರಿಂದ ನವೆಂಬರ್ 26ರವರೆಗೆ ಇಂಟರ್‌ಲಾಕ್ ಮತ್ತು ಸಿಗ್ನಲಿಂಗ್ ಕೆಲಸ ಇದೆ. ಆದ್ದರಿಂದ ರೈಲಯಗಳನ್ನು ರದ್ದುಪಡಿಸಲಾಗಿದೆ.

ಆದರೆ ರೈಲುಗಳನ್ನು ದಿಢೀರ್‌ ರದ್ದು ಮಾಡಿದ್ದರಿಂದ ಈ ಬಗ್ಗೆ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಕುಟುಂಬ ಕಾರ್ಯಕ್ರಮಕ್ಕೆಂದು ಮುಂಬೈಗೆ ತೆರಳಲು ಭಾನುವಾರ ಸಿಂಹಗಡ ರೈಲಿನಲ್ಲಿ ಬುಕ್ ಮಾಡಿದ್ದೆವು, ಈಗ ರೈಲುಗಳು ರದ್ದಾಗಿವೆ. ಕೊನೆಯ ಕ್ಷಣದಲ್ಲಿ ಪರ್ಯಾಯ ಪ್ರಯಾಣದ ಆಯ್ಕೆಯನ್ನು ಹುಡುಕಬೇಕಾಗಿದೆ ಎಂದು ಪ್ರಯಾಣಿಕ ತುಷಾರ್ ನಾಯರ್ ಅಸಮಾಧಾನ ಹೊರಹಾಕಿದ್ದಾರೆ.

ರೈಲುಗಳ ಸಮಯ ಬದಲಾವಣೆ

ಹಳಿ ಕಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿ ಇದ್ದಾಗ ರೈಲ್ವೆಯು ಮುಂಜಾಗ್ರತಾ ಕ್ರಮವಾಗಿ ಕೆಲವು ಮಾರ್ಗಗಳಲ್ಲಿ ರೈಲುಗಳ ಸೇವೆಗಳ ಸಮಯವನ್ನು ಬದಲಾವಣೆ ಅಥವಾ ವಿಸ್ತರಣೆ ಮಾಡಿ ಆದೇಶ ಹೊರಡಿಸಿರುವ ಉದಾಹರಣೆಗಳು ಇವೆ. ಹಾಗೆಯೇ ಇದೀಗ ಬೆಂಗಳೂರು - ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆ ಮಾಡಿ ನೈಋುತ್ಯ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ ಬರುತ್ತಿದ್ದ ರೈಲು ಇನ್ಮುಂದೆ ಬೆಳಗ್ಗೆ 6:45ಕ್ಕೆ ಆಗಮಿಸಲಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಬೆಂಗಳೂರು- ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಪ್ರತಿ ರಾತ್ರಿ 9 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಾರನೇ ದಿನ ಬೆಳಗ್ಗೆ 7:35ಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ತಲುಪುತ್ತಿತ್ತು. ಆದರೆ ಅಕ್ಟೋಬರ್‌ ತಿಂಗಳನಿಂದ ರೈಲು ಬೆಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟರೂ ಹುಬ್ಬಳ್ಳಿ ನಿಲ್ದಾಣದಲ್ಲಿ 1 ಗಂಟೆ ಕಾಲ ನಿಲುಗಡೆ ಆಗುತ್ತಿತ್ತು.

ಇದರಿಂದ ರೈಲು ಬೆಳಗಾವಿಗೆ ಆಗಮಿಸಲು ಬೆಳಗ್ಗೆ 8 ಗಂಟೆ ಆಗುತ್ತಿತ್ತು. ಆದ್ದರಿಂದ ಬೆಂಗಳೂರು- ಬೆಳಗಾವಿ ರೈಲಿನ ಹಿಂದೆ ಬರುವ ಲೋಂಡಾ-ಮಿರಜ್‌ ಎಕ್ಸ್‌ಪ್ರೆಸ್‌ ರೈಲು ಕೂಡ ವಿಳಂಬ ಆಗುತ್ತಿದ್ದರಿಂದ ಬೆಳಗಾವಿಯ ಪ್ರಯಾಣಿಕರು ತೊಂದರೆ ಅನುಭವಿಸುವಂತೆ ಆಗಿತ್ತು.

ಹೀಗೆಯೇ ಅರಸೀಕೆರೆ, ದಾವಣಗೆರೆ ಸೇರಿದಂತೆ ಮಾರ್ಗ ಮಧ್ಯದ ವಿವಿಧ ನಿಲ್ದಾಣಗಳಿಗೆ ಮೊದಲಿಗಿಂತಲೂ ಮುಂಚಿತವಾಗಿ ತಲುಪಿ ಬೆಳಗಿನ ಜಾವ 3:35ಕ್ಕೆ ಹುಬ್ಬಳ್ಳಿ ನಿಲ್ದಾಣ ಆಗಮಿಸಲಿದೆ. ಹುಬ್ಬಳ್ಳಿಯಿಂದ 3:45ಕ್ಕೆ ಹೊರಟು ಬೆಳಗ್ಗೆ 6:45ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+