Pune-Belagavi Jan Shatabdi: ಬೆಳಗಾವಿ-ಪುಣೆ ರೈಲ್ವೆ ಕಾರ್ಯಾಚರಣೆ ಯಾವಾಗ? ಅಪ್ಡೇಟ್ ಮಾಹಿತಿ
ಬೆಂಗಳೂರು, ಫೆಬ್ರವರಿ 11: ಗಡಿ ಜಿಲ್ಲೆ ಬೆಳಗಾವಿ ಮೂಲಕ ಕರ್ನಾಟಕ ಸಂಪರ್ಕಿಸುವ ಪುಣೆ-ಬೆಳಗಾವಿ (Pune-Belagavi Intercity train) ಇಂಟರ್ ಸಿಟಿ ರೈಲು 'ಜನಶತಾಬ್ದಿ'ಯ ಸೇವೆಯನ್ನು ಈ ಕೂಡಲೇ ಆರಂಭಿಸಬೇಕು ಎಂಬ ಒತ್ತಡ ರೈಲ್ವೆ ಇಲಾಖೆ ಅಧಿಕಾರಿಗಳ ಮೇಲೆ ಹೆಚ್ಚಾಗುತ್ತಿದೆ.
ಪುಣೆ- ಬೆಳಗಾವಿ ಇಂಟರ್‌ಸಿಟಿ (Belagavi-Pune intercity express train) ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಇಂಟರ್‌ಸಿಟಿ ರೈಲು ಸೇವೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ಕೂಗುಗಳ ಹೆಚ್ಚಾಗಿದೆ. ವಂದೇ ಭಾರತ್ ರೈಲಿಗೆ ಕಾಯದೇ ಈ ರೈಲನ್ನು ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಲಾಗಿದೆ.

ಕಳೆದ ತಿಂಗಳು ಇಂಟರ್‌ಸಿಟಿ ಸೇವೆಗಾಗಿ ಕೇಂದ್ರ ರೈಲ್ವೆ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದರೂ, ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇಂಟರ್‌ಸಿಟಿ ರೈಲು ಕಾರ್ಯಾಚರಣೆ ಅನುಷ್ಠಾನವನ್ನು ತಡೆಹಿಡಿಯಲಾಗಿತ್ತು. ಇದರಿಂದ ಈ ಭಾಗದ ಪ್ರಯಾಣಿಕರು ಸಾರಿಗೆ ಸಮಸ್ಯೆ ಎದುರಿಸುವಂತಾಗಿದೆ.
ಅರ್ಧ ದಶಕದ ಬೇಡಿಕೆ ಈಡೇರಿಸಿ
ಪುಣೆ ಮತ್ತು ಬೆಳಗಾವಿ ನಡುವೆ ದಕ್ಷ ರೈಲು ಸಂಪರ್ಕ ವ್ಯವಸ್ಥೆ ಮಾಡಲು ಸುಮಾರು ಐದಾರು ವರ್ಷದಿಂದ ಬೇಡಿಕೆ ಕೇಳಿ ಬರುತ್ತಲೇ ಇದೆ. ರೈಲ್ವೆ ಪ್ರಯಾಣಿಕರು ಈ ಪ್ರಮುಖ ನಗರಗಳ ನಡುವೆ ನೇರ ಸಂಪರ್ಕ ಇಲ್ಲದ ಸ್ಥಿತಿಯನ್ನು ಸಹಿಸಿಕೊಳ್ಳುತ್ತಲೇ ಬಂದಿದ್ದಾರೆ.
ಇಂಟರ್‌ಸಿಟಿ ಸೇವೆ ಆರಂಭಿಸಲು ಎಲ್ಲ ವಿಧದ ಸಿದ್ಧತೆ ಆಗಿದ್ದರು ಸಹ ಪದೇ ಪದೆ ಮುಂದೂಡಿಕೆಕೊಂಡು ಬರಲಾಗುತ್ತಿದೆ. ಇದು ವಿಶ್ವಾಸಾರ್ಹ ಸಾರಿಗೆಯಾದ ಭಾರತೀಯ ರೈಲ್ವೆ ಮೇಲೆ ಪ್ರಯಾಣಿಕರ ವಿಶ್ವಾಸ ಕಳೆದುಕೊಳ್ಳುವಂತೆ ಹತಾಶೆ ಮೂಡುವಂತೆ ಮಾಡಲಾಗಿದೆ.
ಎಲ್ಲ ಸಿದ್ಧತೆಯಾದರೂ ವಿಳಂಬ ಏಕೆ?
ಪುಣೆ ರೈಲ್ವೆ ವಿಭಾಗವು ಇಂಟರ್‌ಸಿಟಿ ಸೇವೆ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಸಿದ್ಧತೆಗೊಂಡಿರುವುದಾಗಿ ಹೇಳಿಕೊಂಡಿದೆ. ಸಾಂಗ್ಲಿ ಮತ್ತು ಮೀರಜ್ ಮೂಲಕ ಪ್ರಯಾಣಿಸುವ ಎಲ್ಲ ಪ್ರಯಾಣಿಕರ ದೀರ್ಘಕಾಲದ ಕುಂದು ಕೊರತೆ ಪರಿಹರಿಸುವಲ್ಲಿ ಈ ಸೇವೆಯ ಆರಂಭ ಅತಿ ಮುಖ್ಯ ಎಂದು ರೈಲ್ವೆ ವಿಭಾಗ ಹೇಳುತ್ತಿದೆ. ಈ ಮಾರ್ಗಗಳ ರೈಲು ಸೇವೆ ಆರಂಭಿಸುವಂತೆ ಸಚಿವರನ್ನು ಕೇಳಲಾಗಿದೆ.

ಅಲ್ಲದೇ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ರೈಲು ಮಾರ್ಗದ ಆರಂಭವನ್ನು ಹಿಡಿದಿಟ್ಟುಕೊಳ್ಳಲಾಗಿದೆ. ರಾಜಕೀಯ ಉದ್ದೇಶದಿಂದ ಈಗ ಸುಮ್ಮನಿದ್ದು, ಮುಂದಿನ ಕೆಲವು ದಿನಗಳಲ್ಲಿ ಇಂಟರ್‌ಸಿಟಿ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ ಅಂತಲೂ ಹೇಳಲಾಗುತ್ತಿದೆ.
ಪುಣೆ ಮಾರ್ಗದಲ್ಲಿ ಟ್ರ್ಯಾಕ್ ವಿದ್ಯುದೀಕರಣ
ಮುಂದಿನ ತಿಂಗಳು ಮಾರ್ಚ್ ಹೊತ್ತಿಗೆ ಪುಣೆ-ಬೆಳಗಾವಿ ರೈಲು ಮಾರ್ಗ ಐತಿಹಾಸಿಕ ನಿರ್ಲಕ್ಷ್ಯಕ್ಕೆ ಮುಕ್ತಿ ಹಾಡಿ, ಸಾವಿರಾರು ಜನರ ಪ್ರಯಾಣದ ತೊಂದರೆಗಳನ್ನು ನಿವಾರಿಸುವ ತುರ್ತು ಅಗತ್ಯವಿದೆ.
ಸದ್ಯ ಕರ್ನಾಟಕದ ಬೆಳಗಾವಿ ಹಾಗೂ ಮಹಾರಾಷ್ಟ್ರದ ಪುಣೆವರೆಗೆ ರೈಲ್ವೆ ಟ್ರ್ಯಾಕ್ ವಿದ್ಯುದೀಕರಣ ಮಾಡುವ ಕಾರ್ಯ ನಡೆಯುತ್ತಿದೆ. ಇದು ಮುಗಿಯಲು ಇನ್ನೂ ಸುಮಾರು 6-12 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈದೆಲ್ಲ ಗಮನಿಸಿ ಸದ್ಯಕ್ಕೆ ವಂದೇ ಭಾರತ್ ರೈಲು ಸಂಚಾರ ಕಾರ್ಯಸಾಧುವಲ್ಲವೆಂದು ಭಾವಿಸಿ, ಆ ರೈಲಿಗಾಗಿ ಕಾಯದೇ ಐದಾರು ವರ್ಷಗಳಿಂದ ಕೇಳಲಾಗುತ್ತಿರುವ ಪುಣೆ-ಬೆಳಗಾವಿ ಮಧ್ಯೆ ಇಂರ್‌ಸಿಟಿ ರೈಲು ಕಾರ್ಯಾಚರಣೆ ಆರಂಭಿಸಬೇಕು. ಇದುವ ಈ ಭಾಗದಲ್ಲಿನ ಸಾರಿಗೆ ಸಮಸ್ಯೆಗೆ ನೀಡಬಹುದಾದ ಸೂಕ್ತ ಪರಿಹಾರವಾಗಿದೆ.
ಸದ್ಯದ ಬೆಳವಣಿಗೆ ನೋಡಿದರೆ ಮೊದಲಿನಂತ ನಿರ್ಲಕ್ಷ್ಯ ಮಾಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಆದಷ್ಟು ಶೀಘ್ರವೇ ಪುಣೆ-ಬೆಳಗಾವಿ ಶತಾಬ್ದಿ ರೈಲು ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ಘೋಷಿಸಬಹುದು ಎನ್ನಲಾಗಿದೆ.












Click it and Unblock the Notifications