Bengaluru-Pune Expressway: ಬೆಂಗಳೂರು ಪುಣೆ ಎಕ್ಸ್‌ಪ್ರೆಸ್‌ವೇ : ಯೋಜನೆ ಮಾಹಿತಿ, ವೆಚ್ಚ ವಿವರ
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಮಹತ್ವದ ಯೋಜನೆಯಾಗಿದೆ. ಇದು ಪ್ರವೇಶ-ನಿಯಂತ್ರಿತ, ಗ್ರೀನ್‌ಫೀಲ್ಡ್ ಯೋಜನೆಯಾಗಿದ್ದು, ಭಾರತಮಾಲಾ ಯೋಜನೆಯ ಭಾಗವಾಗಿದೆ.
ಒಟ್ಟು ಹನ್ನೆರಡು ಜಿಲ್ಲೆಗಳ ಮೂಲಕ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದ್ದು, ಮೂರು ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಸತಾರಾ ಜಿಲ್ಲೆಗಳು ಪ್ರಯೋಜನ ಪಡೆದರೆ, ಕರ್ನಾಟಕದ ಬೆಳಗಾವಿ, ಗದಗ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಪ್ರಯೋಜನ ಪಡೆಯಲಿವೆ.

ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ ಬೆಂಗಳೂರು - ಪುಣೆ ನಡುವಿನ ಅಂತರ ಸುಮಾರು 95 ಕಿಮೀ ಕಡಿಮೆಯಾಗಲಿದೆ. ಈಗ ಬೆಂಗಳೂರಿನಿಂದ ಪುಣೆ ತಲುಪಲು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಒಮ್ಮೆ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡರೆ, ಬೆಂಗಳೂರು ಪುಣೆ ಪ್ರಯಾಣದ ಅವಧಿ 7 ಗಂಟೆಗೆ ಇಳಿಯಲಿದೆ. 6 ಲೇನ್‌ಗಳನ್ನು ಹೊಂದಿದ್ದು, ವೇಗದ ಗರಿಷ್ಠ ಮಿತಿ 120 ಕಿ.ಮೀ. ಆಗಿದೆ.
ಎಕ್ಸ್‌ಪ್ರೆಸ್‌ವೇ ಬಗ್ಗೆ ಮಾಹಿತಿ
ಎಕ್ಸ್‌ಪ್ರೆಸ್‌ವೇ ಪುಣೆಯಲ್ಲಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಕೂಡ ಸೇರುತ್ತದೆ. ವರದಿಗಳ ಪ್ರಕಾರ, ಎಕ್ಸ್‌ಪ್ರೆಸ್‌ವೇ 2028 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿಯಾಗಲಿದೆ.

ಪ್ರಸ್ತಾವಿತ ಪುಣೆ ವರ್ತುಲ ರಸ್ತೆಯು ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯೊಂದಿಗೆ ಕಂಜ್ಲೆಯಲ್ಲಿ ಪ್ರಾರಂಭವಾಗುತ್ತದೆ. ಇದು ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಮೊದಲು ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ಪುಣೆ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಗ್ರಾಮಾಂತರ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಮೂಲಕ ಹಾದು ಹೋಗುತ್ತದೆ. ಬೆಂಗಳೂರು ಮಹಾನಗರ ಪ್ರದೇಶದ ಮುತಗಡಹಳ್ಳಿ ಸಮೀಪದಲ್ಲಿ ಯೋಜಿತ ಉಪಗ್ರಹ ವರ್ತುಲ ರಸ್ತೆ ಎಕ್ಸ್‌ಪ್ರೆಸ್‌ವೇ ಕೊನೆಯಾಗಲಿದೆ.
ಈ ರಸ್ತೆ ನಿರ್ಮಾಣದ ಬಳಿಕ 12 ಜಿಲ್ಲೆಗಳ ಅಭಿವೃದ್ಧಿಗೆ ಸಹಾಯವಾಗಲಿದೆ. 55 ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಮರಗಳನ್ನು ನೆಡುವುದು ಮತ್ತು ಭವಿಷ್ಯದ ವಿಸ್ತರಣೆಗಾಗಿ 15-ಮೀಟರ್ ಮೀಡಿಯನ್ ಸೇರಿದಂತೆ ಸಾಕಷ್ಟು ಮೂಲಸೌಕರ್ಯಗಳನ್ನು ಹೊಂದಲು ಯೋಜಿಸಲಾಗಿದೆ.
6 ರೋಡ್ ಓವರ್ ಬ್ರಿಡ್ಜ್‌ಗಳು (ROB), 22 ಇಂಟರ್‌ಚೇಂಜ್‌ಗಳು ಮತ್ತು 14 ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್‌ಗಳನ್ನು ಸಹ ಯೋಜನೆಯಲ್ಲಿವೆ. ಕೃಷ್ಣ, ತುಂಗಭದ್ರಾ ಸೇರಿದಂತೆ 10 ವಿವಿಧ ನದಿಗಳಿಗೆ ಸೇತುವೆ ನಿರ್ಮಾಣವಾಗಲಿದೆ.
ರಿಯಲ್ ಎಸ್ಟೇಟ್ ಅಭಿವೃದ್ಧಿ
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಬಳಿಕ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಅಭಿವೃದ್ಧಿಯಾಗಲಿದೆ. ನಾಸಿಕ್, ಕೊಲ್ಹಾಪುರ ಮತ್ತು ಸತಾರಾ ಪ್ರದೇಶಗಳಲ್ಲಿ ಭೂಮಿ ಮೌಲ್ಯ ಹೆಚ್ಚಾಗಲಿದೆ.
ಉತ್ತಮ ರಸ್ತೆ ಸಂಪರ್ಕದಿಂದ ಹೆಚ್ಚಿನ ಹೂಡಿಕೆದಾರರನ್ನು ಸೆಳೆಯಲಿದೆ. ಪಶ್ಚಿಮ ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳು ಮತ್ತು ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲಿ ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಹಾದು ಹೋಗುತ್ತದೆ, ಇದು ಸ್ಥಳೀಯರಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಭೂಸ್ವಾಧೀನದ ವಿಷಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಯೋಜನೆಗೆ 7,689 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಕ್ರಮವಾಗಿ 2,233 ಹೆಕ್ಟೇರ್ ಮತ್ತು 5,456 ಹೆಕ್ಟೇರ್‌ಗಳನ್ನು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ.
ಭಾರತಮಾಲಾ ಯೋಜನೆಯಡಿ ಪ್ರಸ್ತಾವಿತ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಕೇಂದ್ರದ ಅನುಮೋದನೆಗಾಗಿ ಕಾಯುತ್ತಿವೆ.
ಸೆಪ್ಟೆಂಬರ್‌ನಲ್ಲಿ ಕ್ಲಿಯರೆನ್ಸ್ ನಿರೀಕ್ಷಿಸಲಾಗಿದೆ ಮತ್ತು ಒಮ್ಮೆ ಪಡೆದ ನಂತರ, ಭೂಸ್ವಾಧೀನವನ್ನು ತ್ವರಿತಗೊಳಿಸಲು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ನೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಹಾಯ ಮಾಡಲಿದೆ.
ರಸ್ತೆ ನಿರ್ಮಾಣಕ್ಕೆ ಸರಿಸುಮಾರು 25,000 ಮರಗಳನ್ನು ಕಡಿಯಲಾಗುವುದು ಮತ್ತು ಪರಿಸರದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡಲಾಗುವುದು. ಒಟ್ಟಾರೆ ಕರ್ನಾಟಕದಲ್ಲಿ 12,355 ಎಕರೆ ಹಾಗೂ ಮಹಾರಾಷ್ಟ್ರದಲ್ಲಿ 7,166 ಎಕರೆ ಭೂಮಿ ಬೇಕಾಗಲಿದೆ.












Click it and Unblock the Notifications