JP Nadda: ಬಿಜೆಪಿ ರಾಷ್ಟ್ರನಾಯಕ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‌ಗೆ ಬೆಂಕಿ
ಪುಣೆ, ಸೆಪ್ಟಂಬರ್ 27: ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮಹಾರಾಷ್ಟ್ರ ಬಿಜೆಪಿ ಘಟಕ ಮುಖ್ಯಸ್ಥ ಚಂದ್ರಶೇಖರ್ ಬಾವಂಕುಲೆ ಜೊತೆಗೆ ಮಂಗಳವಾರ ಸಂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಪುಣೆಯ ಗಣೇಶ ಪೆಂಡಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಜೆ.ಪಿ ನಡ್ಡಾ ಅವರು ಹಾಗೂ ಇತರ ನಾಯಕರು ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಹೊತ್ತಿನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಇಂತದ್ದೊಂದು ಅವಘಡ ನಡೆದಿದೆ. ಕೂಡಲೇ ಅವರನ್ನು ಪೆಂಡಾಲ್‌ನಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸುವ ಮೂಲಕ ರಕ್ಷಿಸಲಾಯಿತು. ಸ್ಥಳದಲ್ಲಿದ್ದ ಕೆಲವು ಕಾರ್ಯಕರ್ತರು ಪಟಾಕಿ ಸಿಡಿಸಿದ್ದರಿಂದ ಪೆಂಡಾಲ್ ಗೆ ಬೆಂಕಿ ಸಿಡಿದು ಆವರಿಸಿತು ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪುಣೆಯ ಹೃದಯಭಾಗದಲ್ಲಿರುವ ಲೋಕಮಾನ್ಯನಗರ ಪ್ರದೇಶದಲ್ಲಿ ಗಣೇಶ ಚತುರ್ಥಿಗಾಗಿ ಹಾಕಲಾಗಿದ್ದ ತಾತ್ಕಾಲಿಕ ಪೆಂಡಾಲ ಮೇಲ್ಭಾಗದಲ್ಲಿ ಬೆಂಕಿ ಆವರಿಸಿದ ದೃಶ್ಯಗಳು ಕಂಡು ಬಂದಿವೆ. ಪೊಲೀಸ್ ಮಾಹಿತಿ ಪ್ರಕಾರ, ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನಡ್ಡಾ ಅವರನ್ನು ಸ್ಥಳದಿಂದ ಹೊರಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.
STORY | BJP chief JP Nadda evacuated from Ganesh pandal in Pune after fire breaks out
— Press Trust of India (@PTI_News) September 26, 2023
READ: https://t.co/BvDbeGJzqR
(PTI File Photo) pic.twitter.com/Ac4rvbcJOf
ಮಹಾಕಾಳೇಶ್ವರ ದೇವಸ್ಥಾನದ ಪ್ರತಿಕೃತಿಗೆ ಬೆಂಕಿ
ಸಾಣೆ ಗುರೂಜಿ ಗಣೇಶ ಮಿತ್ರ ಮಂಡಳಿಯವರು ಸಿಡಿಸಿದ್ದ ಪಟಾಕಿಯ ಕಿಡಿಯಿಂದ ಪೆಂಡಾಲ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಪುಣೆಯ ಬಿಜೆಪಿ ಅಧ್ಯಕ್ಷ ಧೀರಜ್ ಘಾಟೆ ಅವರಿಗೂ ಗಣೇಶ ಮಿತ್ರ ಮಂಡಲದ ಜೊತೆಗೆ ಸಂಬಂಧ ಇದೆ. ಈ ವರ್ಷ ಮಂಡಲವು ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದ ಪ್ರತಿಕೃತಿಯನ್ನು ಸ್ಥಾಪಿಸಿದೆ ಮತ್ತು ಕಳೆದ ವಾರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಭೇಟಿ ನೀಡಿದ್ದರು.
ವಿಶೇಷವೆಂದರೆ ಪಟಾಕಿಯಿಂದ ಬೆಂಕಿ ಹೊತ್ತಿಕೊಂಡು ಪೆಂಡಾಲ ಹೊತ್ತಿ ಉರಿಯಲಿದೆ ಎನ್ನುವಷ್ಟರಲ್ಲಿ ಆ ಪ್ರದೇಶದಲ್ಲಿ ಮಳೆ ಪ್ರಾರಂಭವಾಯಿತು. ಇದು ಬೆಂಕಿ ನಂದಿಸಲು ಮತ್ತಷ್ಟು ಸಹಾಯ ಮಾಡಿತು ಎಂದು ಪೊಲೀಸ್ ಉಪ ಆಯುಕ್ತ ಸುಹೇಲ್ ಶರ್ಮಾ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಾರ್ವತಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣಪತಿ ಮಂಡಲ ಒಂದಕ್ಕೆ ಭೇಟಿ ನೀಡಿದ್ದಾಗಲೂ ಬೆಂಕಿ ಕಾಣಿಸಿಕೊಂಡಿತ್ತು. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸ್ಥಳೀಯ ಬೆಂಬಲದೊಂದಿಗೆ ಬೆಂಕಿ ನಂದಿಸಿದರು. ಜೊತೆಗೆ ಅಗ್ನಿಶಾಮಕ ಸಿಬ್ಬಂದಿಗೂ ವಿಷಯ ತಿಳಿಸಿದ್ದರು. ಪೊಲೀಸ್ ಉಪ ಆಯುಕ್ತರ ಪ್ರಕಾರ ನಡ್ಡಾ ಕೊತ್ರುಡ್‌ನ ಗಣಪತಿ ಮಂಡಲದಲ್ಲಿ ಆರತಿಯಲ್ಲಿ ಪಾಲ್ಗೊಳ್ಳಲು ಸುರಕ್ಷಿತವಾಗಿ ತೆರಳಿದರು ಎಂದು ಅವರು ತಿಳಿಸಿದರು.












Click it and Unblock the Notifications