ಮಗಳ ಮದುವೆಗೆ 500 ಕೋಟಿ ರು. ಸುರಿದ ರೆಡ್ಡಿ ವಿರುದ್ಧ ತನಿಖೆ ಇಲ್ಲವೇ?

ಡಿಕೆಶಿ ವಿರುದ್ಧ ಐಟಿ ದಾಳಿಗೆ ಪ್ರಿಯಾಂಕಾ ಗಾಂಧಿ ಗರಂ. ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ನಾಯಕಿ. ಅಪನಗದೀಕರಣ ವೇಳೆಯಲ್ಲಿ ಮಗಳ ಮದುವೆಗೆ 500 ಕೋಟಿ ರು. ಖರ್ಚು ಮಾಡಿದ ರೆಡ್ಡಿಯನ್ನು ಏಕೆ ಪ್ರಶ್ನಿಸಲಿಲ್ಲ ಎಂದು ಪ್ರಶ್ನೆ.

ನವದೆಹಲಿ, ಆಗಸ್ಟ್ 3: ಇಡೀ ದೇಶವೇ ಅಪನಗದೀಕರಣದ ಬೇಗೆಯಲ್ಲಿ ಬೇಯುತ್ತಿರುವಾಗ, ಎಲ್ಲೆಲ್ಲೂ ಹಣದ ಅಭಾವ ಕಾಡುತ್ತಿದ್ದಾಗ, ಮಗಳ ಮದುವೆಗಾಗಿ 500 ಕೋಟಿ ರು. ಸುರಿದ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ವಿರುದ್ಧ ತನಿಖೆ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲವೇಕೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳು ಹಾಗೂ ಆಪ್ತರ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯ ವಿರುದ್ಧ ಟ್ವಿಟ್ಟರ್ ನಲ್ಲಿ ಖಂಡಿಸಿರುವ ಅವರು, ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.

IT raid on DK Shivakumar: Priyanka Gandhi lashes out against BJP on Twitter

ಈ ವೇಳೆ, ರೆಡ್ಡಿ ವಿಚಾರ ಪ್ರಸ್ತಾಪಿಸಿರುವ ಅವರು, ದೇಶದಲ್ಲಿ ಸಾಮಾನ್ಯ ಜನರು ಹಣವಿಲ್ಲದೆ ಪರದಾಡುತ್ತಿದ್ದಾಗ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರೀ ಜೋರಾಗಿ ಮದುವೆ ಮಾಡಿದ ರೆಡ್ಡಿಯವರಿಗೆ ಹಣ ಎಲ್ಲಿಂದ ಬಂತು ಎಂದು ಬಿಜೆಪಿ ಪ್ರಶ್ನೆ ಮಾಡಲಿಲ್ಲ. ಯಾವುದೇ ತನಿಖೆ ನಡೆಸಲಿಲ್ಲ. ತಮ್ಮ ವಿರುದ್ಧ ತನಿಖೆ ನಡೆಸದಂತೆ ಬಿಜೆಪಿಗೆ ರೆಡ್ಡಿ ಎಷ್ಟು ಹಣ ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು, ಬಿಜೆಪಿ ಪರ ತಮ್ಮ ವಾಗ್ದಾಳಿ ಮುಂದುವರಿಸಿರುವ ಅವರು, ಗುಜರಾತ್ ನಲ್ಲಿ ಬಿಜೆಪಿಯು 'ಆಪರೇಷನ್ ಕಮಲ' ಹೆಸರಿನಲ್ಲಿ ಕುದುರೆ ವ್ಯಾಪಾರದಲ್ಲಿ ತೊಡಗಿತ್ತು. ಇದನ್ನು ತಪ್ಪಿಸಲು ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಆ ಎಲ್ಲಾ ಶಾಸಕರ ಆತಿಥ್ಯವನ್ನು ವಹಿಸಿಕೊಂಡಿದ್ದರಿಂದಲೇ ಡಿಕೆ ಶಿವಕುಮಾರ್ ಮೇಲೆ ಇಂಥ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ ಎಂದು ಪ್ರಿಯಾಂಕ ಕಿಡಿ ಕಾರಿದ್ದಾರೆ.

ಅಲ್ಲದೆ, ಈ ಹಿಂದೆಯೇ ಡಿಕೆಶಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದರಂತೆ, ಅವರ ಆಸ್ತಿ ಮೌಲ್ಯ 251 ಕೋಟಿ ರು.ಗಳಷ್ಟಿತ್ತು. ಹಾಗಿರುವಾಗ, ಅವರ ಮನೆಯಲ್ಲಿ 10 ಕೋಟಿ ರು. ಸಿಕ್ಕಿದ್ದು ದೊಡ್ಡ ವಿಷಯವೇ? ಇದು ತಮಾಷೆಯಲ್ಲವೇ? ಎಂದು ಅವರು ಗೇಲಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+