ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 02: ಕರ್ನಾಟಕದ ಅತ್ಯಂತ ಶ್ರೀಮಂತ ಸಚಿವ ಡಿಕೆ ಶಿವಕುಮಾರ್ ಅವರು ದೇಶದ ಎರಡನೇ ಶ್ರೀಮಂತ ಸಚಿವರೂ ಕೂಡಾ.

2013ರಲ್ಲಿ ಘೋಷಿತ ಆಸ್ತಿ ಹಾಗೂ ಸಾಲದ ಮೊತ್ತ ಲೆಕ್ಕಾಚಾರದಂತೆ 251 ಕೋಟಿ ರು ಮೊತ್ತ ಘೋಷಿಸಿದ್ದರು. ಇದರಲ್ಲಿ 105 ಕೋಟಿ ರು ಸಾಲವನ್ನು ಕಳೆದರೆ 146 ಕೋಟಿ ರು ಘೋಷಿತ ಆಸ್ತಿ ಸಿಗುತ್ತದೆ. ಕರ್ನಾಟಕದಲ್ಲಿ ಶ್ರೀಮಂತ ಸಚಿವರಾಗಿ ಡಿಕೆ ಶಿವಕುಮಾರ್ ಇದ್ದರೆ, ಶ್ರೀಮಂತ ಶಾಸಕರಾಗಿ ಸಚಿವ ಲೇಔಟ್ ಕೃಷ್ಣಪ್ಪ ಅವರ ಮಗ ಶಾಸಕ ಪ್ರಿಯಕೃಷ್ಣ(900 ಪ್ಲಸ್ ಕೋಟಿ ರು ಘೋಷಿತ ಆಸ್ತಿ) ಇದ್ದಾರೆ.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಮಿಕ್ಕಂತೆ, ಮಿಕ್ಕಂತೆ ಕರ್ನಾಟಕದಲ್ಲಿ ಸಂತೋಷ್ ಲಾಡ್ (186 ಕೋಟಿ ರು), ಎಂ.ಆರ್ ಸೀತಾರಾಮ್ (136 ಕೋಟಿ ರು), ಆರ್ ವಿ ದೇಶಪಾಂಡೆ(138 ಕೋಟಿ ರು) ಹಾಗೂ ಪ್ರಮೋದ್ ಮಧ್ವರಾಜ್ (105 ಕೋಟಿ ರು) ಶ್ರೀಮಂತ ಕಾಂಗ್ರೆಸ್ ನಾಯಕರಾಗಿದ್ದಾರೆ.

ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳುಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳು

ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕಮರ್ (55) ಅವರು ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕರಾಗಿ ಗುರುತಿಸಿಕೊಂಡಿದ್ದಾರೆ. ಎಂ.ಎ ವ್ಯಾಸಂಗ ಮಾಡಿರುವ ಡಿಕೆ ಶಿವಕುಮಾರ್ ಅವರ ಮೇಲೆ ಹತ್ತು ಹಲವು ಕ್ರಿಮಿನಲ್ ಕೇಸುಗಳಿವೆ. ಆಸ್ತಿ-ಸಾಲದ ವಿವರ ಮುಂದೆ ನಿರೀಕ್ಷಿಸಿ.ಓದಿ..

ಕ್ರಿಮಿನಲ್ ಕೇಸುಗಳ ಪಟ್ಟಿ

ಕ್ರಿಮಿನಲ್ ಕೇಸುಗಳ ಪಟ್ಟಿ

* ಐಪಿಸಿ ಸೆಕ್ಷನ್ 468 ಅಡಿಯಲ್ಲಿ ಫೋರ್ಜರಿ ಕೇಸ್.

* ಭ್ರಷ್ಟಾಚಾರ, ಸಂಚು ಆರೋಪದ ಮೇಲೆಐಪಿಸಿ ಸೆಕ್ಷನ್ 120(B), 169, 177, 417, 419, 465, 468 ಅನ್ವಯ ಪ್ರಕರಣ.
* ನಕಲಿ ದಾಖಲೆ ಸಲ್ಲಿಕೆ, ಭೂ ಅವ್ಯವಹಾರ ಸೇರಿದಂತೆ ಅನೇಕ ಕೇಸುಗಳು ಇನ್ನೂ ಬಾಕಿ ಇವೆ.

ಚರಾಸ್ತಿ ವಿವರ

ಚರಾಸ್ತಿ ವಿವರ

ನಗದು: ಡಿಕೆಶಿ 15 ಲಕ್ಷ, ಪತ್ನಿ ಹೆಸರಿನಲ್ಲಿ 8 ಲಕ್ಷ ಒಟ್ಟು 23 ಲಕ್ಷ ರು
ಬ್ಯಾಂಕಿನಲ್ಲಿ ಜಮೆ: ಒಟ್ಟು 1 ಕೋಟಿ ರು.
ಷೇರುಗಳು, ಡಿಬೆಂಚರ್ಸ್ ಮೊತ್ತ: 6 ಕೋಟಿ ರು

ಎಲ್ ಐಸಿ: 21 ಲಕ್ಷರು

ವೈಯಕ್ತಿಕ ಸಾಲ: ಸಿಪಿ ಯೋಗೇಶ್ವರ್ ಸೇರಿದಂತೆ ವಿವಿಧ ಸಂಸ್ಥೆಗಳಿಂದ ವೈಯಕ್ತಿಕ ಸಾಲದ ಮೊತ್ತ 51 ಕೋಟಿ ರು.

* 8 ಲಕ್ಷದ ಟೊಯೊಟಾ ಕ್ವಾಲೀಸ್,
* 50 ಲಕ್ಷ ರು ಬೆಲೆ ಬಾಳುವ ಅಭರಣ
* 27 ಲಕ್ಷ ರು ಬೆಲೆ ಬಾಳುವ ಪೀಠೋಪಕರಣ
ಚಿರಾಸ್ತಿ ಮೌಲ್ಯ : 60 ಕೋಟಿ ರು

ಸ್ಥಿರಾಸ್ತಿ ಮೊತ್ತ

ಸ್ಥಿರಾಸ್ತಿ ಮೊತ್ತ

* ಕನಕಪುರ, ಸರ್ಜಾಪುರದಲ್ಲಿರುವ ಜಮೀನುಗಳ ಮೊತ್ತ 1 ಕೋಟಿ ರು
* ಉತ್ತರಹಳ್ಳಿ ಹೋಬಳಿ, ಭೂಪಸಂದ್ರ, ಕೆ.ಆರ್ ಪುರಂ, ಕನಕಪುರ, ಮೈಸೂರು, ಗೋಪಾಲಪುರ, ಓಕಳಿಪುರಂ, ಮೈಸೂರಿನ ಮೂರು ಕಡೆ ಇರುವ ಕಟ್ಟಡ ಸೇರಿ 149 ಕೋಟಿ ರು.

* ವಾಣಿಜ್ಯ ಕಟ್ಟಡಗಳು : ಕೆಂಗೇರಿ, ಕನಕಪುರ, ಇನ್ಫಾಂಟ್ರಿ ರಸ್ತೆ, ಮಡಿವಾಳದಲ್ಲಿ ಐದು ಕಾಂಪ್ಲೆಕ್ಸ್ ಸೇರಿ 26 ಕೋಟಿ ರು
* ವಸತಿ ಕಟ್ಟಡ: ಕನಕಪುರ ಟೌನ್, ದೆಹಲಿ ಸಫ್ದರ್ಜಂಗ್ ಎನ್ ಕ್ಲೇವ್, ಕೃಷ್ಣನಗರ್, ಮುಂಬೈನಲ್ಲಿ ಫ್ಲಾಟ್,ಸದಾಶಿವ ನಗರ, ಕನಕಪುರ, ಬೆಂಗಳೂರಿನಲ್ಲಿ ಫ್ಲಾಟ್ ಎಲ್ಲವೂ ಸೇರಿ 14 ಕೋಟಿ ರು
* ಇತರೆ 10 ಲಕ್ಷ ರು ಮೌಲ್ಯದ ಕಟ್ಟಡ ಒಟ್ಟಾರೆ, 191 ಕೋಟಿ ರು ಸ್ತಿರಾಸ್ತಿ ಮೌಲ್ಯ

ಬ್ಯಾಂಕಿನಿಂದ ಪಡೆದ ಸಾಲ

ಬ್ಯಾಂಕಿನಿಂದ ಪಡೆದ ಸಾಲ

* ವಿಜಯ ಬ್ಯಾಂಕ್, ಫೆಡರಲ್ ಬ್ಯಾಂಕಿನಿಂದ 5 ಕೋಟಿ ರು ಸಾಲ
* ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಪಡೆದ ಸಾಲದ ಮೊತ್ತ 99 ಕೋಟಿ ರು
* ಆದಾಯ ತೆರಿಗೆ, ಸೇವಾ ತೆರಿಗೆ, ಆಸ್ತಿ ತೆರಿಗೆ ಸೇರಿದಂತೆ ಯಾವುದೇ ತೆರಿಗೆ ಉಳಿಸಿಕೊಂಡಿಲ್ಲ.
* 105 ಕೋಟಿ ರು ಒಟ್ಟಾರೆ ಸಾಲವನ್ನು ಹೊಂದಿದ್ದಾರೆ.

English summary
Karnataka's richest Minister DK Shivakumar, with properties worth Rs 251 crore, is ranked second in the country as per the declared assets in 2013. He has loans a liabilities worth Rs 105 crore, and therefore his net assets stand at Rs 146 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X