ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ

Posted By:
Subscribe to Oneindia Kannada

ದೇಶದ 14ನೇ ರಾಷ್ಟ್ರತಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಮ್ ನಾಥ್ ಕೋವಿಂದ್ ಅವರು ಜಯ ಸಾಧಿಸಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ರೈತನ ಮಗ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿಯಾಗಿ ಯುಪಿಎ ವತಿಯಿಂದ ಕಣಕ್ಕಿಳಿದಿದ್ದ ಮೀರಾ ಕುಮಾರ್ ಅವರ ವಿರುದ್ಧ ಜಯ ಸಾಧಿಸಿದ ಅವರು ಈ ಮಹೋನ್ನತ ಪದವಿಗೇರಿದ್ದಾರೆ. ರಾಷ್ಟ್ರಪತಿಯಾಗಿ ಅವರ ಅಧಿಕಾರ ಜುಲೈ 25ರಿಂದ ಆರಂಭಗೊಳ್ಳಲಿದೆ.

ಕೋವಿಂದ್ ಅವರು, ಶೇ. 66ರಷ್ಟು ಮತ ಗಳಿಸಿದರೆ, ಮೀರಾ ಕುಮಾರ್ ಅವರು ಶೇ. 34ರಷ್ಟು ಮತ ಗಳಿಸಿದರು.

ನಮ್ಮ ರಾಷ್ಟ್ರಪತಿಗಳು : ರಾಜೇಂದ್ರ ಪ್ರಸಾದ್ ರಿಂದ ಕೋವಿಂದ್ ತನಕ

ಈ ಹೊತ್ತಿನಲ್ಲಿ ರಾಷ್ಟ್ರ ಕಂಡ ಈ ಹಿಂದಿನ ರಾಷ್ಟ್ರಪತಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಬಾಬು ರಾಜೇಂದ್ರ ಪ್ರಸಾದ್ (ಜನನ: 1884, ಮರಣ: 1963)

ಬಾಬು ರಾಜೇಂದ್ರ ಪ್ರಸಾದ್ (ಜನನ: 1884, ಮರಣ: 1963)

ಮೂಲತಃ ಬಿಹಾರದವರು. ಸ್ವಾತಂತ್ರ್ಯ ಹೋರಾಟಗಾರ. ದೀರ್ಘಾವಧಿಯವರೆಗೆ ರಾಷ್ಟ್ರಪತಿಯಾಗಿದ್ದ ದಾಖಲೆ.

ಅಧಿಕಾರಾವಧಿ 1 - 1952ರಿಂದ 1957
ಅಧಿಕಾರಾವಧಿ 2 - 1957ರಿಂದ 1962

ಸರ್ವಪಲ್ಲಿ ರಾಧಾಕೃಷ್ಣನ್ (ಜನನ: 1888, ಮರಣ: 1975)

ಸರ್ವಪಲ್ಲಿ ರಾಧಾಕೃಷ್ಣನ್ (ಜನನ: 1888, ಮರಣ: 1975)

ಆಂಧ್ರ ಪ್ರದೇಶದ ಮುತ್ಸದ್ದಿ. ಆಂಧ್ರಪ್ರದೇಶ ವಿಶ್ವವಿದ್ಯಾಲಯ, ಬನಾರಸ್ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಾಗಿದ್ದವರು. ದಕ್ಷಿಣ ಭಾರತದಿಂದ ರಾಷ್ಟ್ರಪತಿಯಾದವರಲ್ಲಿ ಮೊದಲಿಗರು.

ಅಧಿಕಾರಾವಧಿ - 1962ರಿಂದ 1967

ಜಾಕಿರ್ ಹುಸೇನ್ (ಜನನ: 1897, ಮರಣ: 1969)

ಜಾಕಿರ್ ಹುಸೇನ್ (ಜನನ: 1897, ಮರಣ: 1969)

ಹೈದರಾಬಾದ್ ನವರಾದ ಜಾಕಿರ್ ಹುಸೇನ್, ಅಲಿಗಢ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದವರು. ಭಾರತದ ಮುಸ್ಲಿಂ ಸಮುದಾಯದ ಮೊದಲ ರಾಷ್ಟ್ರಪತಿ. ಆದರೆ, ಅಧಿಕಾರದಲ್ಲಿದ್ದಾಗಲೇ ನಿಧನರಾದ ಮೊದಲ ರಾಷ್ಟ್ರಪತಿಯೂ ಹೌದು. ಈ ವೇಳೆ, ವಿವಿ ಗಿರಿ (ಮೇ 3, 1969 - 20 ಜುಲೈ 1969), ಮೊಹಮ್ಮದ್ ಹಿದಾಯುತುಲ್ಲಾ (20 ಜುಲೈ 1969ರಿಂದ 24ನೇ ಜುಲೈ 1969) ಹಂಗಾಮಿಯಾಗಿದ್ದರು.

ಅಧಿಕಾರಾವಧಿ: 13 ಮೇ, 1967- 3 ಮೇ 1969

ವರಾಹಗಿರಿ ವೆಂಕಟ ಗಿರಿ (ವಿವಿ ಗಿರಿ) (ಜನನ: 1894, ಮರಣ: 1980)

ವರಾಹಗಿರಿ ವೆಂಕಟ ಗಿರಿ (ವಿವಿ ಗಿರಿ) (ಜನನ: 1894, ಮರಣ: 1980)

ಆಂಧ್ರ ಪ್ರದೇಶದವರು. ಉಪರಾಷ್ಟ್ರಪತಿಯಾಗಿ, ಆನಂತರ ರಾಷ್ಟ್ರಪತಿಯಾದವರು. ಜಾಕಿರ್ ಹುಸೇನ್ ನಿಧನರಾದಾಗ ಹಂಗಾಮಿ ಅಧ್ಯಕ್ಷರಾಗಿದ್ದರು.

ಅಧಿಕಾರಾವಧಿ: 24 ಆಗಸ್ಟ್ 1969ರಿಂದ 24 ಆಗಸ್ಟ್ 1974

ಫಕ್ರುದ್ದೀನ್ ಅಲಿ ಅಹ್ಮದ್ (ಜನನ: 1905- ಮರಣ: 1977)

ಫಕ್ರುದ್ದೀನ್ ಅಲಿ ಅಹ್ಮದ್ (ಜನನ: 1905- ಮರಣ: 1977)

ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ವೇಳೆ ರಾಷ್ಟ್ರಪತಿಯಾಗಿದ್ದವರು. ಮೂಲತಃ ಅಸ್ಸಾಂನವರಾದರೂ ಹುಟ್ಟಿದ್ದು ಬೆಳೆದಿದ್ದು ದೆಹಲಿಯಲ್ಲಿ. ಅಧಿಕಾರದಲ್ಲಿದ್ದಾಗಲೇ ನಿಧನರಾದರು. ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನದಲ್ಲಿ ಆಗಿನ ಉಪ ರಾಷ್ಟ್ರಪತಿ, ಕರ್ನಾಟಕದ ಬಸಪ್ಪ ದಾನಪ್ಪ ಜತ್ತಿ ಅವರು ಹಂಗಾಗಿ ರಾಷ್ಟ್ರಪತಿಯಾಗಿದ್ದರು.

ಅಧಿಕಾರಾವಧಿ: 24 ಆಗಸ್ಟ್ 1974ರಿಂದ 11 ಫೆಬ್ರವರಿ 1977

ನೀಲಂ ಸಂಜೀವ ರೆಡ್ಡಿ (ಜನನ: 1913ರಿಂದ 1996)

ನೀಲಂ ಸಂಜೀವ ರೆಡ್ಡಿ (ಜನನ: 1913ರಿಂದ 1996)

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ. ಆಗಿನ ಆಂಧ್ರಪ್ರದೇಶದಲ್ಲಿದ್ದ ಜನತಾ ಪಕ್ಷದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿ. ಲೋಕ ಸಭೆಯ ಸ್ಪೀಕರ್ ಕೂಡಾ ಆಗಿದ್ದರು.

ಅಧಿಕಾರಾವಧಿ: 25ನೇ ಜುಲೈ 1977ರಿಂದ 25ನೇ ಜುಲೈ 1982

ಗಿಯಾನಿ ಝೈಲ್ ಸಿಂಗ್ (ಜನನ: 1916- 1994)

ಗಿಯಾನಿ ಝೈಲ್ ಸಿಂಗ್ (ಜನನ: 1916- 1994)

1997ರಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಸಿಂಗ್, 1980ರಲ್ಲಿ ಕೇಂದ್ರದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಭಾರತದ ಚಾರಿತ್ರಿಕ ಘಟ್ಟಗಳಾದ ಇಂದಿರಾ ಗಾಂಧಿ ಸರ್ಕಾರದ ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿ ಹತ್ಯೆ, 1984ರ ಸಿಖ್ ಜನಾಂಗೀಯ ವಿರೋಧಿ ದಂಗೆ ವೇಳೆ ರಾಷ್ಟ್ರಪತಿಯಾಗಿದ್ದವರು.

ಅಧಿಕಾರಾವಧಿ: 25ನೇ ಜುಲೈ 1982ರಿಂದ 25ನೇ ಜುಲೈ 1987

ರಾಮಸ್ವಾಮಿ ವೆಂಕಟರಾಮನ್ (ಜನನ: 1916- ಮರಣ: 2009)

ರಾಮಸ್ವಾಮಿ ವೆಂಕಟರಾಮನ್ (ಜನನ: 1916- ಮರಣ: 2009)

ತಮಿಳುನಾಡಿನ ರಾಜಕೀಯ ಮುತ್ಸದ್ದಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ. 1950ರಲ್ಲಿ ಕಾಂಗ್ರೆಸ್ ನಿಂದ ಸಂಸದರಾಗಿದ್ದವರು. ಹಣಕಾಸು, ಕಾರ್ಮಿಕ ಇಲಾಖೆ, ರಕ್ಷಣಾ ಇಲಾಖೆಗಳ ಸಚಿವರಾಗಿದ್ದವರು.

ಅಧಿಕಾರಾವಧಿ: 25 ಜುಲೈ 1987ರಿಂದ 15 ಜುಲೈ 1992

ಶಂಕರ್ ದಯಾಳ್ ಶರ್ಮಾ (ಜನನ: 1910, ಮರಣ: 2009)

ಶಂಕರ್ ದಯಾಳ್ ಶರ್ಮಾ (ಜನನ: 1910, ಮರಣ: 2009)

ಮಧ್ಯಪ್ರದೇಶದವರು. ಅಲ್ಲಿ ಮುಖ್ಯಮಂತ್ರಿಯೂ ಆಗಿದ್ದವರು. ಕೇಂದ್ರದಲ್ಲಿ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವರಾಗಿದ್ದವರು. ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರಗಳ ರಾಜ್ಯಪಾಲರೂ ಆಗಿದ್ದರು.

ಅಧಿಕಾರಾವಧಿ: 25 ಜುಲೈ 1992ರಿಂದ 25 ಜುಲೈ 1997

ಕೊಚೇರಿಲ್ ರಾಮನ್ ನಾರಾಯಣನ್ (ಜನನ: 1920, ಮರಣ: 2005)

ಕೊಚೇರಿಲ್ ರಾಮನ್ ನಾರಾಯಣನ್ (ಜನನ: 1920, ಮರಣ: 2005)

ಕೇರಳದ ರಾಜಕಾರಣಿ. ಥಾಯ್ಲೆಂಡ್, ಟರ್ಕಿ, ಚೀನಾ ಹಾಗೂ ಅಮೆರಿಕದಲ್ಲಿ ರಾಯಭಾರಿಯಾಗಿದ್ದವರು. ಜವಾಹರಲಾಲ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿದ್ದವರು. ದೇಶ ಕಂಡ ಮೊದಲ ದಲಿತ ರಾಷ್ಟ್ರಪತಿ.

ಅಧಿಕಾರಾವಧಿ: 25 ಜುಲೈ, 1997ರಿಂದ 25 ಜುಲೈ 2002

ಎ.ಪಿ.ಜೆ. ಅಬ್ದುಲ್ ಕಲಾಂ (ಜನನ: 1931, ಮರಣ: 2015)

ಎ.ಪಿ.ಜೆ. ಅಬ್ದುಲ್ ಕಲಾಂ (ಜನನ: 1931, ಮರಣ: 2015)

ವಿಜ್ಞಾನಿಯಾಗಿ ರಾಷ್ಟ್ರಪತಿಯಾದ ಮೊದಲ ಭಾರತೀಯ ಪ್ರಜೆ. ರಾಷ್ಟ್ರಪತಿ ಹುದ್ದೆಯ ಘನತೆ ಹೆಚ್ಚಿಸಿ, ಜನಪ್ರಿಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಡೆದವರು. ಜನತಾ ರಾಷ್ಟ್ರಪತಿ ಎಂದೇ ಹೆಸರಾದವರು. ಪೂರ್ಣಾವಧಿಗೆ ರಾಷ್ಟ್ರಪತಿಯಾದ ಮೊದಲ ಮುಸ್ಲಿಂ ವ್ಯಕ್ತಿ.

ಅಧಿಕಾರಾವಧಿ: 25 ಜುಲೈ 2002ರಿಂದ 25 ಜುಲೈ 2007

ಪ್ರತಿಭಾ ದೇವಿಸಿಂಗ್ ಪಾಟೀಲ್ (ಜನನ: 1934- )

ಪ್ರತಿಭಾ ದೇವಿಸಿಂಗ್ ಪಾಟೀಲ್ (ಜನನ: 1934- )

ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಮೂಲತಃ ಮಹಾರಾಷ್ಟ್ರದವರು. ಹಿರಿಯ ಕಾಂಗ್ರೆಸ್ ರಾಜಕಾರಣಿ. 2004ರಿಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿದ್ದವರು.

ಅಧಿಕಾರಾವಧಿ: 25 ಜುಲೈ 2007ರಿಂದ 25 ಜುಲೈ 2012

ಪ್ರಣಬ್ ಮುಖರ್ಜಿ (ಜನನ: 1935 - )

ಪ್ರಣಬ್ ಮುಖರ್ಜಿ (ಜನನ: 1935 - )

ಪಶ್ಚಿಮ ಬಂಗಾಳದವರು. ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಬುದ್ಧಿಜೀವಿ. ಹಣಕಾಸು, ವಿದೇಶಾಂಗ, ರಕ್ಷಣಾ ಸಚಿವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಾಕಷ್ಟು ಅನುಭವ ಪಡೆದಿದ್ದವರು.

ಅಧಿಕಾರಾವಧಿ: 25ನೇ ಜುಲೈ 2012ರಿಂದ 25ನೇ ಜುಲೈ 2017.

Ram Nath Kovind to be sworn in as 14th President of India on July 25 |
ರಾಮ್ ನಾಥ್ ಕೋವಿಂದ್ (ಜನನ: 1945- )

ರಾಮ್ ನಾಥ್ ಕೋವಿಂದ್ (ಜನನ: 1945- )

ಹಿರಿಯ ಬಿಜೆಪಿ ಮುತ್ಸದ್ದಿ. ಉತ್ತರ ಪ್ರದೇಶದವರು. ದೇಶ ಕಂಡ ಎರಡನೇ ದಲಿತ ರಾಷ್ಟ್ರಪತಿ. ವಕೀಲರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಅವರು, ಆನಂತರ ರಾಜಕೀಯಕ್ಕೆ ಬಂದವರು. 1994ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಲಖ್ನೋದ ಅಂಬೇಡ್ಕರ್ ಮಂಡಳಿಯ ಸದಸ್ಯರೂ ಆಗಿದ್ದರು. 2015ರ ಆಗಸ್ಟ್ 8ರಂದು ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ರಾಮ್ ಕೋವಿಂದ್ ಅವರ ಪತ್ನಿಯ ಹೆಸರು ಸವಿತಾ ಕೋವಿಂದ್. 1974ರ ಮೇ 30ರಂದು ಅವರ ವಿವಾಹವಾಗಿತ್ತು. ಪ್ರಶಾಂತ್ (ಮಗ), ಸ್ವಾತಿ (ಮಗಳು).

ಅಧಿಕಾರಾವಧಿ: 25 ಜುಲೈ 2017 -

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In the wake of new President elected for India, Ramnath Kovind, a brief introduction or information regarding the past presidents of the country.
Please Wait while comments are loading...