ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EVM ನಲ್ಲಿ ಸಮಸ್ಯೆ ಇದ್ದಿದ್ದರೆ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ!: ಅಮರೀಂದರ್

ಮತಯಂತ್ರಗಳಲ್ಲಿ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಕಾಂಗ್ರೆಸ್ ನಾಯಕ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೆಲ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಂಡಿಘಡ, ಏಪ್ರಿಲ್ 13: ಇವಿಎಂ (Electoral Voting Machine) ನಲ್ಲಿ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಪಂಜಾಬಿನ ನೂತನ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಈ ಮೂಲಕ ಸೋಲಿಗೆ ಇವಿಎಂ ಹೊಣೆಯಲ್ಲ ಎಂದು ನಿನ್ನೆ ತಾನೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೋಯ್ಲಿ ಅವರ ಮಾತಿಗೆ ಅಮರೀಂದರ್ ಸಹ ಬೆಂಬಲ ನೀಡಿದ್ದಾರೆ.

ಮತಯಂತ್ರಗಳಲ್ಲಿ ದೋಷವಿದೆ ಎಂಬ ಮಾತಿಗೆ ಅರ್ಥವಿಲ್ಲ. ಹಾಗೊಮ್ಮೆ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಅಮರೀಂದರ್ ಸಿಂಗ್ ಕೆಲ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.[ಸೋಲಿಗೆ ಇವಿಎಂ ಹೊಣೆಯಲ್ಲ: ವೀರಪ್ಪ ಮೋಯ್ಲಿ]

Amarinder Singh

ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಇವಿಎಂ ಕಾರ್ಯದಕ್ಷತೆಯ ಬಗ್ಗೆ ಸೋತ ಪಕ್ಷಗಳು ತಕರಾರೆತ್ತಿದ್ದವು. ಸೋಲಿಗೆ ಮತಯಂತ್ರದ ದೋಷವೇ ಕಾರಣ ಎಂದು ದೂರಿದವರಿಗೆ ಚುನಾವಣಾ ಆಯೋಗವೂ ಛೀಮಾರಿ ಹಾಕಿತ್ತು.

English summary
If EVMs were tempered with, the congress would have not won in the five state assembly election, Punjab's newly appointed chief minister Amarinder Singh said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X