ರಾಜ್ ಕೋಟ್ ನಲ್ಲಿ ಅಗ್ನಿ ಆಕಸ್ಮಿಕ: ಮೂವರ ದುರಂತ ಅಂತ್ಯ

Posted By:
Subscribe to Oneindia Kannada

ರಾಜ್ ಕೋಟ್, ಜನವರಿ 13: ಇತ್ತೀಚೆಗೆ ಬೆಂಕಿ ಅವಘಡಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು(ಜ.13) ಬೆಳಗ್ಗಿನ ಜಾವ ಗುಜರಾತಿನ ರಾಜ್ ಕೋಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ರಾಜ್ ಕೋಟ್ನ ಪ್ರಾನ್ಸ್ಲಾ ಎಂಬ ಹಳ್ಳಿಯಲ್ಲಿ ನಡೆಯುತ್ತಿದ್ದ ಶಿಬಿರವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ. ಆದರೆ ಬೆಂಕಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಕೆಆರ್ ಮಾರುಕಟ್ಟೆ ಕೈಲಾಶ್ ಬಾರ್ ನಲ್ಲಿ ಬೆಂಕಿ, 5 ಮಂದಿ ದುರ್ಮರಣ

ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಕೆ.ಆರ್.ಮಾರ್ಕೇಟ್ ಬಳಿಯ ಕೈಲಾಶ್ ಬಾರಿನಲ್ಲಿ ಬೆಂಕ ಅವಘಡ ಸಂಭವಿಸಿದ ಪರಿಣಾಮ 5 ಜನ ಮೃತರಾಗಿದ್ದರು. ಮುಂಬೈಯ ಕಮಲಾಮಿಲ್ ನಲ್ಲಿ ಹೊಸ ವರ್ಷಕ್ಕೂ ಎರಡು ದಿನ ಮೊದಲು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 14 ಜನ ಮೃತರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three girls died and few others were injured after a fire broke out at a Rashtriya Shivir in Rajkot's Pransla village on Jan 13th. The reason for the fire is yet to be known.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ