ಗುಜರಾತ್ ನಲ್ಲಿ 100% ತಾಳೆಯಾಯ್ತು ಇವಿಎಂ - ವಿವಿಪ್ಯಾಟ್ ಲೆಕ್ಕ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 19: ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಈ ಬಾರಿ ವಿಶಿಷ್ಟ ಪ್ರಯೋಗ ನಡೆಸಿದ್ದ ಚುನಾವಣಾ ಆಯೋಗ ಇವಿಎಂ ತಿರುಚುವಿಕೆ ಆರೋಪವನ್ನು ಸಾಕ್ಷಿ ಸಮೇತ ತಳ್ಳಿ ಹಾಕಿದೆ.

182 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತೀ ಕ್ಷೇತ್ರಕ್ಕೊಂದರಂತೆ ಮತಯಂತ್ರ ಮತ್ತು ವಿವಿಪ್ಯಾಟ್ ಸ್ಲಿಪ್ ಗಳನ್ನು ಲೆಕ್ಕ ಹಾಕಲಾಗಿದೆ. ಹೀಗೆ ಲೆಕ್ಕ ಹಾಕಿದಾಗ ಎಲ್ಲಾ 182 ಮತಯಂತ್ರಗಳಲ್ಲಿ ದಾಖಲಾದ ಮತ ಮತ್ತು ವಿವಿಪ್ಯಾಟ್ ಸ್ಲಿಪ್ ಗಳ ಮಧ್ಯೆ ತಾಳೆಯಾಗಿದೆ.

"ಇವಿಎಂಗಳ ಮತ ಮತ್ತು ವಿವಿಪ್ಯಾಟ್ ಗಳ ಸ್ಲಿಪ್ ಗಳನ್ನು ಲೆಕ್ಕ ಹಾಕಿದಾಗ ಶೇಕಡಾ 100 ತಾಳೆಯಾಗಿದೆ," ಎಂದು ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮೂಲಕ ಇವಿಎಂಗಳನ್ನು ತಿರುಚಲಾಗಿದೆ ಎಂಬ ಆರೋಪಕ್ಕೆ ಚುನಾವಣಾ ಆಯೋಗ ತಕ್ಕ ಪ್ರತ್ಯುತ್ತರ ನೀಡಿದೆ.

ಇದೇ ಡಿಸೆಂಬರ್ 15ರಂದು ಕನಿಷ್ಠ ಶೇಕಡಾ 25ರಷ್ಟು ವಿವಿಪ್ಯಾಟ್ ಮತಗಳನ್ನು ಲೆಕ್ಕ ಹಾಕಿ ಇವಿಎಂಗಳಲ್ಲಿ ದಾಖಲಾದ ಮತಗಳ ಜತೆ ತಾಳೆ ಮಾಡಬೇಕು. ಈ ರೀತಿ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು.

ಆದರೆ, ಈ ಸಂಬಂಧ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There was a 100 per cent match in the random vote count on EVMs and paper trail slips which was carried out by the Election Commission in the 182 polling stations at Gujarat.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ