• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳು

|

ನವದೆಹಲಿ, ಜುಲೈ 27: ಭಾರತೀಯ ಸೇನಾ ವಾಯುಪಡೆ ಹೆಚ್ಚಿನ ಶಕ್ತಿ ತುಂಬಬಲ್ಲ ನಾಲ್ಕು ಸುಸಜ್ಜಿತ ಅಪಾಚೆ ಹೆಲಿಕಾಪ್ಟರ್‌ಗಳನ್ನು ಇಂದು ಅಮೆರಿಕದ ಸಂಸ್ಥೆಯು ಭಾರತಕ್ಕೆ ಹಸ್ತಾಂತರಿಸಿತು.

ಭಾರತವು 22, ಎಎಚ್-64ಇ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಖರೀದಿಸಿದ್ದು, ಮೊದಲ ನಾಲ್ಕು ಹೆಲಿಕಾಪ್ಟರ್‌ಗಳು ಇಂದು ಭಾರತೀಯ ವಾಯುಸೇನೆಯನ್ನು ಸೇರಿದವು. ಇದೇ ಗುಂಪಿನ ಇನ್ನೂ ನಾಲ್ಕು ಹೆಲಿಕಾಪ್ಟರ್‌ಗಳು ಮುಂದಿನ ವಾರ ಬರಲಿವೆ.

ನಾಲ್ಕು ವರ್ಷದ ಹಿಂದೆ ಈ ಸಹಿ ಹಾಕಲಾಕಿದ್ದ ರಕ್ಷಣಾ ಒಪ್ಪಂದದ ಅನ್ವಯ ಈ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಅಮೆರಿಕದ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಬೋಯಿಂಗ್ ಈ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡಿದೆ.

ಇಂದು ಬಂದಿರುವ ನಾಲ್ಕು ಹೆಲಿಕಾಪ್ಟರ್‌ ಮತ್ತು ಮುಂದಿನ ವಾರ ಬರಲಿರುವ ನಾಲ್ಕು ಹೆಲಿಕಾಪ್ಟರ್‌ಗಳು ಪಠಾಣ್‌ಕೋಟ್ ವಾಯುನೆಲೆಯನ್ನು ಸೇರಿಕೊಳ್ಳಲಿವೆ. 22 ಹೆಲಿಕಾಪ್ಟರ್‌ ಖದೀರಿಗೆ 2015 ರಲ್ಲಿ ಒಪ್ಪಂದವಾಗಿತ್ತು. 2017 ರಲ್ಲಿ ಮತ್ತೆ ಮರುಒಪ್ಪಂದ ಮಾಡಿಕೊಳ್ಳಲಾಯಿತು.

ಅಪಾಚೆ ಹೆಲಿಕಾಪ್ಟರ್‌ಗಳು ಮಾತ್ರವಲ್ಲದೆ, ಅಗ್ನಿ ನಿಯಂತ್ರಣ ರೇಡಾರ್‌ಗಳು, ಹೆಲ್ಟೇರ್ ಲಾಂಗ್ಬೋ ಕ್ಷಿಪಣಿಗಳು, ಸ್ಟಿಂಗರ್ ಬ್ಲಾಕ್ ಐ-92ಎಚ್ ಕ್ಷಿಪಣಿಗಳು, ಇರುಳು ದೃಶ್ಯ ಸೆನ್ಸೋರ್‌ಗಳು ಹಾಗೂ ವೈರಿಗಳನ್ನು ಗುರುತಿಸುವ ಮಾರ್ಗದರ್ಶಿ ವ್ಯವಸ್ಥೆಗಳ ಮಾರಾಟಕ್ಕೂ ಒಪ್ಪಂದವಾಗಿದೆ.

English summary
Four Apache Helicopters joined Indian Air force today. Four more Helicopters will arrive next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X