ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಿದ ಕ್ರಿಕೆಟಿಗ ಶ್ರೀಶಾಂತ್, ಚುನಾವಣೆಗೆ ಸ್ಪರ್ಧೆ?

|
Google Oneindia Kannada News

ನವದೆಹಲಿ, ಮಾರ್ಚ್ 26 : ಭಾರತದ ಕ್ರಿಕೆಟ್ ತಂಡ ಮಾಜಿ ವೇಗದ ಬೌಲರ್ ಶ್ರೀಶಾಂತ್ ಬಿಜೆಪಿ ಸೇರಿದ್ದಾರೆ. ಮೇ 16ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಶ್ರೀಶಾಂತ್ ಸ್ಪರ್ಧಿಸುವ ಸಾಧ್ಯತೆ ಇದೆ.

ನವದೆಹಲಿಯಲ್ಲಿ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುದಲ್ಲಿ ಎಸ್.ಶ್ರೀಶಾಂತ್ ಬಿಜೆಪಿ ಸೇರಿದ್ದಾರೆ. ತ್ರಿಪುಣಿತುರ ವಿಧಾನಸಭಾ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿವೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. [ಶ್ರೀಶಾಂತ್ ಹೊಸ ಇನ್ನಿಂಗ್ಸ್, ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ!]

sreesanth

ಬುಧವಾರವೇ ಶ್ರೀಶಾಂತ್ ಅವರು ಬಿಜೆಪಿ ಸೇರಬೇಕಾಗಿತ್ತು. ಆದರೆ, ಕೇರಳದ ಕೆಲವು ಬಿಜೆಪಿ ನಾಯಕರು ಶ್ರೀಶಾಂತ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪ ಹೊತ್ತಿದ್ದ ಶ್ರೀಶಾಂತ್ ಪಕ್ಷಕ್ಕೆ ಬಂದರೆ ಮುಜುಗರ ಉಂಟಾಗುತ್ತದೆ ಎಂದು ಹೇಳಿದ್ದರು. [2019ರ ವಿಶ್ವಕಪ್ ತಂಡದಲ್ಲಿ ನಾನಿರಬೇಕು: ಶ್ರೀಶಾಂತ್]

ದೆಹಲಿಗೆ ಆಗಮಿಸಿದ ಶ್ರೀಶಾಂತ್ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ನೀಡಲಿದೆಯೇ? ಎಂಬುದನ್ನು ಕಾದು ನೋಡಬೇಕು.

2013ರ ಐಪಿಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಬಿಸಿಸಿಐ ಶ್ರೀಶಾಂತ್ ಅವರ ಮೇಲೆ ನಿಷೇಧ ಹೇರಿತ್ತು. ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಜುಲೈ 2015 ರಲ್ಲಿ ಪಟಿಯಾಲ ಹೌಸ್ ಕೋರ್ಟ್ ಶ್ರೀಶಾಂತ್‌ ಅವರಿಗೆ ಜಾಮೀನು ನೀಡಿತ್ತು. [ಕೇರಳ ಚುನಾವಣೆ ವೇಳಾಪಟ್ಟಿ]

English summary
Former cricketer S.Sreesanth joined the BJP on Friday. Sreesanth may contest for the upcoming Kerala assembly elections from Thiruvananthapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X