ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಡಿಸಿಎ ಭ್ರಷ್ಟಾಚಾರ: ವಿಡಿಯೋ ಸಾಕ್ಷ್ಯ ಬಹಿರಂಗ

By Mahesh
|
Google Oneindia Kannada News

ನವದೆಹಲಿ, ಡಿ. 20: ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಹಗರಣ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯವನ್ನು ಮಾಜಿ ಕ್ರಿಕೆಟರ್,ಬಿಜೆಪಿ ಸಂಸದ ಕೀರ್ತಿ ಅಜಾದ್ ಅವರು ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಡಿಡಿಸಿಎ ಅಧ್ಯಕ್ಷರಾಗಿದ್ದ ಕಾಲದಲ್ಲಿ ಭಾರಿ ಅವ್ಯವಹರ ನಡೆದಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್‌ ಮತ್ತು ಬಿಷನ್ ಸಿಂಗ್ ಬೇಡಿ ಅವರು ಸುದ್ದಿಗೋಷ್ಠಿ ಉದ್ದೇಶ ಹಾಗೂ ಡಿಡಿಸಿಎ ಅವ್ಯವಹಾರದ ಬಗ್ಗೆ ವಿವರಿಸಿದರು. ನಂತರ ವಿಕಿಲೀಕ್ಸ್ ಇಂಡಿಯಾ ನೆರವಿನಿಂದ ಸಂಗ್ರಹಿಸಲಾದ ವಿಡಿಯೋ ಸಾಕ್ಷ್ಯವನ್ನು ಬಹಿರಂಗ ಪಡಿಸಲಾಯಿತು.

BJP MP Kirti Azad's press conference Highlights

ಕೀರ್ತಿ ಅಜಾದ್ ಅವರ ಸುದ್ದಿಗೋಷ್ಠಿ ಮುಖ್ಯಾಂಶಗಳು:
* ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ವಿರುದ್ಧವಾಗಿ ಕೈಗೊಂಡಿರುವ ಕ್ರಮಗಳನ್ನು ನಾನು ಶ್ಲಾಘಿಸುತ್ತೇನೆ. ಅದರಂತೆ ನಮ್ಮ ಸುದ್ದಿಗೋಷ್ಠಿ ಉದ್ದೇಶ ಕೂಡಾ ಭ್ರಷ್ಟಾಚಾರ ವಿರುದ್ಧವೇ ಆಗಿದ್ದು, ಯಾರೊಬ್ಬರ ವಿರುದ್ಧ ವೈಯಕ್ತಿಕ ದ್ವೇಷದಿಂದ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದರು.
* ಸುಮಾರು 28 ನಿಮಿಷಗಳ ವಿಡಿಯೋ ಐದು ಭಾಗಗಳಲ್ಲಿದ್ದು, ಡಿಡಿಸಿಎ ಉಪ ಗುತ್ತಿಗೆ, ಅವ್ಯವಹಾರಗಳ ಬಗ್ಗೆ ವಿವರಣೆ ಇದೆ.
* ದಿನವೊಂದಕ್ಕೆ 16 ಸಾವಿರನಂತೆ ಲ್ಯಾಪ್ ಟಾಪ್ ಹಾಗೂ 3 ಸಾವಿರ ರು ನಂತೆ ಪ್ರಿಂಟರ್ ಗಳನ್ನು ಡಿಡಿಸಿಎ ಬಾಡಿಗೆಗೆ ಪಡೆದುಕೊಂಡಿತ್ತು.
* Wikileaks4India ನಿಂದ ಖಚಿತ ಮಾಹಿತಿ ಪಡೆದು ಈ ವಿಡಿಯೋ ತಯಾರಿಸಲಾಗಿದೆ. ಇದರಲ್ಲಿ ನಕಲಿ ಕಂಪನಿಗಳು, ಉಪ ಗುತ್ತಿಗೆ ಅಕ್ರಮದ ಬಗ್ಗೆ ಹೇಳಲಾಗಿದೆ.


* ಸ್ವಜನ ಪಕ್ಷಪಾತ, ಕೋರ್ಟ್ ಆದೇಶದ ಉಲ್ಲಂಘನೆ, ಟೆಂಡರ್ ನಲ್ಲಿ ಗೋಲ್ ಮಾಲ್, ಬೋಗಸ್ ಕಂಪನಿಗಳ ಸೃಷ್ಟಿ ಎಲ್ಲವೂ ಜೇಟ್ಲಿ ಅವರ ಕಾಲದಲ್ಲಿ ನಡೆದಿದೆ.
* ಕೋಟಿಗಟ್ಟಲೆ ಪಡೆದ ಕಂಪನಿಗಳಿಗೆ ಗುತ್ತಿಗೆ ಕೆಲಸ ನೀಡಿದ ಬಗ್ಗೆ ದಾಖಲೆಗಳೇ ಇಲ್ಲ
* ಸುಮಾರು 14 ನಕಲಿ ಕಂಪನಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಎಪಿಯಿಂದ ಸ್ವಾಗತ: ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಕಾಲದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದಾಖಲೆಯನ್ನು ಕೀರ್ತಿ ಅಜಾದ್ ಅವರು ಒದಗಿಸಿದ್ದಾರೆ. ಇದನ್ನು ನಾವು ಕ್ರಿಕೆಟ್ ನ 'ಕಾಮನ್ ವೆಲ್ತ್ ಗೇಮ್ಸ್' ಹಗರಣ ಎನ್ನಬಹುದು. ನೈತಿಕ ಹೊಣೆ ಹೊತ್ತು ಅರುಣ್ ಜೇಟ್ಲಿ ಅವರು ತಮ್ಮ ಹುದ್ದೆ ತೊರೆಯುವುದು ಒಳ್ಳೆಯದು ಎಂದು ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Former cricketer, BJP MP Kirti Azad and Bishen Singh Bedi has alleged massive corruption in Delhi cricket body - DDCA. Union Finance Minister Arun Jaitley was DDCA chief for 13 years till 2013 and Azad claims huge corruption took place during his tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X