ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ ಸೋರಿಕೆ ನಷ್ಟ, ಪಿಯುಸಿ ಗಣಿತ ಭಾರೀ ಕಷ್ಟ

|
Google Oneindia Kannada News

ನವದೆಹಲಿ/ಬೆಂಗಳೂರು, ಮಾರ್ಚ್, 16: ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಗುಲ್ಲೆದ್ದಿದೆ. ಸಿಬಿಎಸ್ ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷೆ ಬರೆದು ಬಂದ ಅನೇಕ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ವಿಚಾರಣೆ ಅಗತ್ಯವೆಂದು ತೋರಿದರೆ ಮಾಹಿತಿ ಕಲೆಹಾಕಲಾಗುವುದು ಮತ್ತು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಜತೆಗೂ ಮಾತನಾಡಲಾಗುವುದು ಎಂದು ತಿಳಿಸಿದ್ದಾರೆ.[ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2016]

cbse

ಪ್ರಶ್ನೆ ಪತ್ರಿಕೆಯಲ್ಲಿದ್ದ 51 ಪ್ರಶ್ನೆಗಳು ವಾಟ್ಸಪ್ ನಲ್ಲಿ ಮೊದಲೆ ಹರಿದಾಡುತ್ತಿದ್ದವು ಎಂದು ರಾಂಚಿ, ಧನ್ ಬಾದ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಸಿಬಿಎಸ್ ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಯಲಿದ್ದು ಮತ್ತೊಂದು ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಆದರೂ ಆಶ್ಚರ್ಯವಿಲ್ಲ.

ಮಕ್ಕಳನ್ನು ಗಳಗಳನೆ ಅಳುವಂತೆ ಮಾಡಿದ ಗಣಿತ ಪರೀಕ್ಷೆ: ಇತ್ತ ಪಿಯುಸಿ ಗಣಿತ ಪರೀಕ್ಷೆ ಬರೆದು ಬಂದ ಕರ್ನಾಟಕದ ಮಕ್ಕಳು ಗಳಗಳನೇ ಅಳುತ್ತಿದ್ದಾರೆ. ಅತಿ ಕಠಿಣ ಗಣಿತದ ಪರೀಕ್ಷೆಯಾಗಿದೆ ಎಂದು ಮಕ್ಕಳು ಆರೋಪಿಸಿದ್ದಾರೆ. ಪಿಯುಸಿ ಗಣಿತ ಪರೀಕ್ಷೆಯನ್ನುಹೊಸದಾಗಿ ನಡೆಸಬೇಕು ಎಂದು ಆನ್ ಲೈನ್ ಪೆಟಿಶನ್ ಸಹ ಶುರುವಾಗಿದ್ದಾರೆ. ಸುಮಾರು 8 ಸಾವಿರ ಜನ ಸಹಿ ಮಾಡಿದ್ದಾರೆ.[ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ 2016 ವೇಳಾಪಟ್ಟಿ]

ವಿದ್ಯಾರ್ಥಿಗಳು ಹೇಳುವಂತೆ ಪ್ರಶ್ನೆ ಪತ್ರಿಕೆಯನ್ನು ಸಮರ್ಪಕವಾಗಿ ಉತ್ತರಿಸಬೇಕಾದರೆ ನಾಲ್ಕು ವರೆ ಗಂಟೆ ಕಾಲ ಬೇಕಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಕೆಲ ಪ್ರಶ್ನೆಗಳಿಗೆ ಉತ್ತರಿಸಲೇ ಸಾಧ್ಯವಿಲ್ಲ. ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯನ್ನು ಮೀರಿ ಪತ್ರಿಕೆ ತಯಾರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

English summary
Several students who were appearing for class 12th exam on Monday alleged that Maths paper was already leaked. Disappointed students from Ranchi and Dhanbad region said that many questions and their sequence were similar to a question paper which was leaked on WhatsApp on Sunday. Their parents too said that touts were found selling 51 questions and answers near exam centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X