2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಕೆಲವೇ ಕ್ಷಣದಲ್ಲಿ ಪ್ರಕಟ
ಕರ್ನಾಟಕದ ಪಿಯುಸಿ ವಿದ್ಯಾರ್ಥಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟ ಆಗಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಯ ನಂತರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಹಾಗಾದರೆ ಫಲಿತಾಂಶ ನೋಡುವುದು ಹೇಗೆ? ಮುಂದೆ ಓದಿ.
ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ದೊಡ್ಡ ಹೆಸರು ಪಡೆದು ಗಮನ ಸೆಳೆಯುತ್ತಿದೆ. ಹೀಗಾಗಿ ಕರ್ನಾಟಕದ ಪಿಯುಸಿ ಫಲಿತಾಂಶ ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಇದೀಗ 2023 & 2024ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಹಾಗಾದರೆ ಯಾವ ವೆಬ್‌ಸೈಟ್ ಮೂಲಕ ನೀವು ಫಲಿತಾಂಶ ಪರಿಶೀಲನೆ ಮಾಡಬಹುದು? ರಿಸಲ್ಟ್ ಚೆಕ್ ಮಾಡುವಾಗ ಏನೆಲ್ಲಾ ಮುಂಜಾಗ್ರತೆ ಇರಬೇಕು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದೋಣ.

ರಿಸಲ್ಟ್ ನೋಡಲು ಹೀಗೆ ಮಾಡಿ
ಹೌದು, 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾರ್ಚ್ 01 ರಿಂದ ಮಾರ್ಚ್ 23 ರವರೆಗೆ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ತಕ್ಷಣ ಶುರುವಾಗಿತ್ತು. ಕರ್ನಾಟಕದ 1,124 ಕೇಂದ್ರಗಳಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆದಿದ್ರು. ಮಾರ್ಚ್ 25ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಫಲಿತಾಂಶ ಹೊರಗೆ ಬೀಳಲಿದ್ದು, ಇದಕ್ಕಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ನಡೆಸಿದೆ. ಇನ್ನೇನು, ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಹಾಗಾದರೆ, ಇದೀಗ 2nd PUC ರಿಸಲ್ಟ್ ನೋಡೋದು ಹೇಗೆ?
ಇದೀಗ ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡೋದಕ್ಕೆ ಮೊದಲಿಗೆ ತಮ್ಮ ರಿಜಿಸ್ಟರ್ ನಂಬರ್ / ರೋಲ್ ನಂಬರ್ ಹೊಂದಿರಬೇಕು. ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕವೇ ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯನಿರ್ಣಯ ಮಂಡಳಿ (KSEAB) ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು ಎಂದು ತಿಳಿಸಲಾಗಿದೆ. ಹಾಗೇ ಫಲಿತಾಂಶ ಪ್ರಕಟ ಮಾಡುತ್ತಿರುವ ಹಿನ್ನೆಲೆ ಇದೀಗ ಶಾಲಾ & ಕಾಲೇಜುಗಳಲ್ಲಿ ಕೂಡ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ!
ಇನ್ನು ಇಂದು ಬೆಳಗ್ಗೆ 10:00 ಗಂಟೆಗೆಲ್ಲ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ, ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ. ಹಾಗೆಯೇ ಫಲಿತಾಂಶ https://karresults.nic.in ವೆಬ್‌ಸೈಟ್ ಮೂಲಕವಾಗಿ, ದಿನಾಂಕ 03/04/2024 ರ ಬೆಳಗ್ಗೆ 11:00 ಗಂಟೆ ನಂತರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಹಾಗೇ ಫಲಿತಾಂಶ ವೀಕ್ಷಿಸಲು ಕೆಲವು ಕಡೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶುಭವಾಗಲಿ.
ದ್ವಿತೀಯ ಪಿಯುಸಿ ಮಹತ್ವದ ಘಟ್ಟ!
ಪ್ರತಿಯೊಬ್ಬ ವಿದ್ಯಾರ್ಥಿ ಬಾಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (2nd PUC Exam Results) ಪ್ರಮುಖವಾದ ಘಟ್ಟ. ಏಕೆಂದರೆ ಯಾವುದೇ ವಿದ್ಯಾರ್ಥಿ ತಾನು ಮುಂದೆ ಏನು ಓದಬೇಕು? ಭವಿಷ್ಯದಲ್ಲಿ ತನ್ನ ವೃತ್ತಿಯಾಗಿ ಯಾವ ವಿಷಯವನ್ನು ಸ್ವೀಕರಿಸಬೇಕು? ಎಂಬುದನ್ನು ನಿರ್ಧಾರ ಮಾಡುವುದು ಇದೇ ಹಂತದಲ್ಲಿ. ಹೀಗಾಗಿಯೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಅತಿ ಮುಖ್ಯವಾದ ವಿಚಾರ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ಎಲ್ಲಾ ಆಸೆ & ಆಕಾಂಕ್ಷೆಗಳನ್ನು ತ್ಯಾಗ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆಯನ್ನ ನಡೆಸಿರುತ್ತಾರೆ.
ಕರ್ನಾಟಕವೇ ಅತ್ಯುತ್ತಮ ರಾಜ್ಯ!
ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಿದೆ. ಅದ್ರಲ್ಲೂ ನಮ್ಮ ರಾಜ್ಯದಲ್ಲಿ ಅತ್ಯಂತ ಕಠಿಣ ನಿಯಮಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಈ ಕಾರಣಕ್ಕೆ ಬೇರೆ ಬೇರೆ ರಾಜ್ಯದಿಂದಲೂ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದು ಶಿಕ್ಷಣವನ್ನು ಪಡೆಯುತ್ತಾರೆ. ಹೀಗಾಗಿ ಕರ್ನಾಟಕದ ಪಿಯುಸಿ ಫಲಿತಾಂಶ ದೇಶಾದ್ಯಂತ ಗಮನ ಸೆಳೆದು, ಸುದ್ದಿಯಾಗುತ್ತದೆ. ಈ ಬಾರಿ ಕೂಡ ಅಷ್ಟೇ ದ್ವಿತೀಯ ಪಿಯುಸಿ ಅಂದ್ರೆ 2nd ಪಿಯುಸಿ ಪರೀಕ್ಷೆ ಫಲಿತಾಂಶ ಏನಾಗಲಿದೆ? ಅನ್ನೋದು ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಹಾಗೇ ಈ ಬಾರಿ ಹುಡುಗಿಯರೇ ಮತ್ತೆ ಟಾಪ್ ಬರ್ತಾರಾ? ಅಥವಾ ಹುಡುಗರು ಇತಿಹಾಸ ಬದಲಿಸುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications