2nd PUC Result: ಏಪ್ರಿಲ್ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಸಾಧ್ಯತೆ
ಬೆಂಗಳೂರು, ಏಪ್ರಿಲ್.02: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ (2nd PUC Result)ಕ್ಕಾಗಿ ವಿದ್ಯಾರ್ತಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಪರೀಕ್ಷಾ ಮಂಡಳಿ ಹೆಸರಲ್ಲಿ ನಕಲಿ ಪತ್ರಿಕಾ ಪ್ರಕಟಣೆ ಹೊರ ಬಿದ್ದು ಏಪ್ರಿಲ್ 03 ರ ಬುಧವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಸುದ್ದಿ ಹಬ್ಬಿತ್ತು.
ಆದರೆ, ಈ ಸುದ್ದಿ ನಕಲಿ ಎಂಬುದು ಬಹಿರಂಗವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಏಪ್ರಿಲ್ 03ರ ಬುಧವಾರ ಯಾವುದೇ ಫಲಿತಾಂಶ ಬಿಡುಗಡೆ ಮಾಡಿಲ್ಲ. ಈ ಬಾರಿ ರಾಜ್ಯದ 1,124 ಕೇಂದ್ರಗಳಲ್ಲಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು.

ಕೊನೆಗೂ ತಿಳಿಯಿತು ಪಿಯುಸಿ ಫಲಿತಾಂಶ ಯಾವಾಗ ಎಂಬ ಮಾಹಿತಿ!
ಮಾರ್ಚ್ 2023ರ ದ್ವಿತೀಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 01 ರಿಂದ ಮಾರ್ಚ್ 23ರ ವರೆಗು ನಡೆದಿದ್ದವು. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಮಾರ್ಚ್ 30 ರಂದು ಪ್ರಥಮ ಪಿಯುಸಿ ಫಲಿತಾಂಶ ಬಿಡುಗಡೆ ಮಾಡಿತ್ತು. ಅಂದಿನಿಂದ, ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ಬಿಡುಗಡೆಯಾಗಬಹುದು ಎಂದು ತಿಳಿಯಲು ಎಲ್ಲಾ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಕರ್ನಾಟಕ ಶಿಕ್ಷಣ ಮಂಡಳಿಯು ಈ ಏಪ್ರಿಲ್ 2024 ರಲ್ಲಿ ದ್ವಿತಿಯ ಪಿಯುಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ .
ಇಂದು ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾತ್ತು. ಇದು ಸಂಪೂರ್ಣ ತಪ್ಪು ಮಾಹಿತಿ. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು 20ನೇ ಏಪ್ರಿಲ್ 2024 ರೊಳಗೆ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಪರೀಕ್ಷಾ ಫಲಿತಾಂಶವನ್ನು https://kseab.karnataka.gov.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಉತ್ತೀರ್ಣರಾಗಲು ಪ್ರತಿ ವಿಷಯದಲ್ಲಿ ಶೇಕಡಾ 35 ರಷ್ಟು ಅಂಕಗಳನ್ನು ಪಡೆಯುವುದು ಅಗತ್ಯ.
ಪಿಯುಸಿ ಫಲಿತಾಂಶ ಡೌನ್‌ಲೋಡ್ ಮಾಡುವುದು ಹೇಗೆ?
* ಮೊದಲಿಗೆ ವಿದ್ಯಾರ್ಥಿಯು ಕರ್ನಾಟಕ ಶಿಕ್ಷಣ ಮಂಡಳಿಯು ಅಧಿಕೃತ ಪೋರ್ಟಲ್ karresults.nic.in ಗೆ ಹೋಗಬೇಕು
* ವೆಬ್‌ಸೈಟ್‌ನ ಮುಖಪುಟದಲ್ಲಿ 2ನೇ ಪಿಯುಸಿ ಫಲಿತಾಂಶದ ಲಿಂಕ್ ಹುಡುಕಬೇಕು
* ನಿಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ಮತ್ತು ಇತರ ಅಗತ್ಯ ವಿವರಗಳನ್ನು ಟೈಪ್ ಮಾಡಬೇಕು
* ಬಳಿಕ ಫಲಿತಾಂಶ ಕಾಣಲಿದೆ
* ಅದನ್ನು ಡೌನ್‌ಲೋಡ್ ಆಪ್ಷನ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.












Click it and Unblock the Notifications