ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್; ದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ?

|
Google Oneindia Kannada News

ನವದೆಹಲಿ, ಜನವರಿ 20; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ರ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್ ಸಹ ಈಗ ಸಾಮಾನ್ಯ ಬಜೆಟ್‌ನಲ್ಲಿ ವಿಲೀನವಾಗಿರುವುದರಿಂದ ಇಲಾಖೆಯ ಹೊಸ ಘೋಷಣೆಗಳು ಸಹ ಬಜೆಟ್‌ನಲ್ಲಿ ಆಗಲಿವೆ. ಆದ್ದರಿಂದ ರೈಲ್ವೆ ವಲಯದ ನಿರೀಕ್ಷೆಗಳು ಸಹ ಸಾಕಷ್ಟಿವೆ.

ಈ ಬಾರಿಯ ಬಜೆಟ್‌ನಲ್ಲಿ ನವದೆಹಲಿ-ವಾರಣಾಸಿ ಹೈಸ್ಪೀಡ್ ರೈಲು ಕಾರಿಡಾರ್‌ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇದೆ. ಮುಂಬೈ-ನಾಗ್ಪುರ ಕಾರಿಡಾರ್ ಪ್ರಸ್ತಾವನೆ ಸಹ ಸರ್ಕಾರದ ಮುಂದೆ ಇದೆ. ಆದರೆ ಮಹಾರಾಷ್ಟ್ರ ಸರ್ಕಾರದ ಹೂಡಿಕೆ ಮೇಲೆ ಆ ಯೋಜನೆಯ ಬಗ್ಗೆ ತೀರ್ಮಾನವಾಗಲಿದೆ. ಆದರೆ, ಬಜೆಟ್‌ನಲ್ಲಿ ಒಂದು ಯೋಜನೆಯಂತೂ ಘೋಷಣೆಯಾಗಲಿದೆ?.

ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ

2022-23ರಲ್ಲಿ ಭಾರತ ಸರ್ಕಾರ ಎರಡು ಬುಲೆಟ್ ರೈಲು ಯೋಜನೆ ಆರಂಭಿಸಲು ಬಯಸಿದೆ. ದೇಶದಲ್ಲಿ ಮೊದಲು ಘೋಷಣೆ ಮಾಡಿದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಕುಟುಂತ್ತಾ ಸಾಗಿದೆ. ಇದರ ನಡುವೆಯೇ ಹೊಸ ಯೋಜನೆ ಘೋಷಣೆಯಾಗಲಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ದರ ಮತ್ತೆ ಹೆಚ್ಚಳ ರೈಲು ನಿಲ್ದಾಣದ ಪ್ಲಾಟ್ ಫಾರಂ ದರ ಮತ್ತೆ ಹೆಚ್ಚಳ

ಹೈ-ಸ್ಪೀಡ್ ರೈಲು ಕಾರಿಡಾರ್‌ ಯೋಜನೆಗೆ ಅನುದಾನ ಬರುವ ಕುರಿತು ಸರ್ಕಾರಕ್ಕೆ ಇನ್ನೂ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಆದರೆ ನವದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ಹೈ ಸ್ಪೀಡ್ ಕಾರಿಡಾರ್ ಯೋಜನೆ ಪ್ರಸ್ತಾವನೆ ಸರ್ಕಾರದ ಮುಂದಿದೆ. ನವದೆಹಲಿ-ವಾರಣಾಸಿ ರೈಲು ಯೋಜನೆ ವಿಸ್ತೃತ ಯೋಜನಾ ವರದಿ ಸಹ ತಯಾರಾಗಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

 ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು? ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು?

ಯೋಜನೆ ಡಿಪಿಆರ್ ಸಲ್ಲಿಕೆಯಾಗಿದೆ

ಯೋಜನೆ ಡಿಪಿಆರ್ ಸಲ್ಲಿಕೆಯಾಗಿದೆ

2021ರ ನವೆಂಬರ್‌ನಲ್ಲಿ ನ್ಯಾಷನಲ್ ಹೈ-ಸ್ಪೀಡ್‌ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ನವದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಯೋಜನೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಆದರೆ ಮುಂಬೈ-ನಾಗ್ಪುರ ಯೋಜನೆ ಡಿಪಿಆರ್ ಇನ್ನೂ ಅಂತಿಮ ಹಂತದಲ್ಲಿದೆ. ಮಾರ್ಚ್ ಅಥವ ಏಪ್ರಿಲ್ ವೇಳೆಗೆ ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೈ-ಸ್ಪೀಡ್ ರೈಲು ಕಾರ್ಪೋರೇಷನ್ ಹೇಳಿದೆ. ಒಟ್ಟು 5 ಹೈ-ಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ ಸಿದ್ಧವಾಗುತ್ತಿದ್ದು, 2023ರ ಆರ್ಥಿಕ ವರ್ಷಕ್ಕೆ ಎಲ್ಲವೂ ಪೂರ್ಣಗೊಳ್ಳಲಿದೆ.

1.5 ಲಕ್ಷ ಕೋಟಿ ರೂ. ಯೋಜನೆ

1.5 ಲಕ್ಷ ಕೋಟಿ ರೂ. ಯೋಜನೆ

ನವದೆಹಲಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ತವರು ಕ್ಷೇತ್ರ ವಾರಣಾಸಿ ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್‌ಗೆ ಸುಮಾರು 1.5 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಡಿಪಿಆರ್ ಅಂದಾಜಿಸಿದೆ. ಯೋಜನೆ ಘೋಷಣೆಗೊಂಡು ಪೂರ್ಣಗೊಳ್ಳುವಾಗ ವೆಚ್ಚ ಅಧಿಕವಾಗಲೂ ಬಹುದು. ಆದರೆ ಮುಂಬೈ-ನಾಗ್ಪುರ ಯೋಜನೆಯ ವೆಚ್ಚ ಕಡಿಮೆಯಾಗಲಿದೆ. ಪ್ರಯಾಣಿಕರ ಸಂಖ್ಯೆ, ಗ್ರಾಮಗಳ ಮೇಲೆ ಆಗುವ ಪರಿಣಾಮ, ಭೂ ಸ್ವಾಧೀನ ಮುಂತಾದ ಅಂಶಗಳನ್ನು ಅಧ್ಯಯನ ಮಾಡಿ ಡಿಪಿಆರ್ ಸಿದ್ಧಪಡಿಸಲಾಗಿದೆ.

ಮುಂಬೈ-ಅಹಮದಾಬಾದ್ ಯೋಜನೆ

ಮುಂಬೈ-ಅಹಮದಾಬಾದ್ ಯೋಜನೆ

ದೇಶದಲ್ಲಿ ಮೊದಲು ಘೋಷಣೆಯಾಗಿದ್ದು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ. ನ್ಯಾಷನಲ್ ಹೈ-ಸ್ಪೀಡ್‌ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಈ ಯೋಜನೆ ಜಾರಿಯ ಹೊಣೆ ಹೊತ್ತುಕೊಂಡಿದೆ. ಆದರೆ ಮಾರ್ಗ ಬದಲಾವಣೆ, ಭೂ ಸ್ವಾಧೀನ ಮುಂತಾದ ಪ್ರಕ್ರಿಯೆಗಳಿಂದಾಗಿ ಯೋಜನೆ ವಿಳಂಬವಾಗುತ್ತಿದೆ. ಈ ಯೋಜನೆಗೆ ಸುಮಾರು 1 ಲಕ್ಷ ಕೋಟಿ ಹೂಡಿಕೆಯಾಗಿದೆ. ಜಪಾನ್‌ ಇ5 ತಂತ್ರಜ್ಞಾನದ ನೆರವಿನಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಗಂಟೆಗೆ ರೈಲು 300 ಕಿ. ಮೀ.ಯಲ್ಲಿ ಸಂಚಾರ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ.

50 ಕಿ. ಮೀ. ಪ್ರಾಯೋಗಿಕ ಸಂಚಾರ

50 ಕಿ. ಮೀ. ಪ್ರಾಯೋಗಿಕ ಸಂಚಾರ

ಸೂರತ್‌ನಿಂದ 50 ಕಿ. ಮೀ. ಪ್ರಾಯೋಗಿಕ ಸಂಚಾರ 2026ರಲ್ಲಿ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಬೈ-ಅಹಮದಾಬಾದ್ ಯೋಜನೆಗೆ ಇದುವರೆಗೂ ಸುಮಾರು 39,000 ಕೋಟಿ ವೆಚ್ಚ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿಯೇ ಸರ್ಕಾರ ದೇಶದ ವಿವಿಧ ಬುಲೆಟ್ ರೈಲು ಯೋಜನೆಗೆ ಅಧ್ಯಯನ ನಡೆಸಲು ಅನುದಾನ ನೀಡಿತ್ತು.

English summary
In the budget 2022-23 fiance minister Nirmala Sitharaman may announce New Delhi to Varanasi high-speed rail corridor project. This project already submitted to government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X