ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷಕ್ಕೂ ಹೆಚ್ಚು ಹುದ್ದೆಗಳಿವೆ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಬಾಕಿ ಉಳಿದಿರುವ ನೇಮಕಾತಿ ಬಗ್ಗೆ ವಿವರ ನೀಡುವಂತೆ ಕೋರಿದ ಪ್ರಶ್ನೆಗೆ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅಧಿವೇಶನದಲ್ಲಿ ಉತ್ತರಿಸಿದ್ದಾರೆ.

ಮಾರ್ಚ್ 1, 2020 ರಂತೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8.72 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಗುರುವಾರ ರಾಜ್ಯಸಭೆಗೆ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ನೀಡಿದ ಲಿಖಿತ ಉತ್ತರ ನೀಡಿದರು. ಜಿತೇಂದ್ರ ಸಿಂಗ್ ನೀಡಿದ ಮಾಹಿತಿ ಪ್ರಕಾರ ಮಾರ್ಚ್ 1, 2019 ಕ್ಕೆ 9,10,153 ಮತ್ತು ಮಾರ್ಚ್ 1, 2018 ಕ್ಕೆ 6,83,823 ಖಾಲಿ ಹುದ್ದೆಗಳು ಅಸ್ತಿತ್ವದಲ್ಲಿವೆ.

ಮಾರ್ಚ್ 1, 2020 ರಂತೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ 8,72,243 ಹುದ್ದೆಗಳು ಖಾಲಿ ಇವೆ. ಮೂರು ಪ್ರಮುಖ ನೇಮಕಾತಿ ಏಜೆನ್ಸಿಗಳು -- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಮತ್ತು ರೈಲ್ವೇ ನೇಮಕಾತಿ ಮಂಡಳಿಗಳು (RRBs) 2018-19 ಮತ್ತು 2020-21 ರ ಅವಧಿಯಲ್ಲಿ 2,65,468 ನೇಮಕಾತಿಗಳನ್ನು ನಡೆಸಿವೆ ಎಂದಿದ್ದಾರೆ.

8.72 lakh vacant posts in govt departments: Centre

ಭಾರತದ ನಿರುದ್ಯೋಗ ದರವು ಜನವರಿಯಲ್ಲಿ 6.57 ಪ್ರತಿಶತಕ್ಕೆ ಕುಸಿದಿದೆ. ಇದು ಮಾರ್ಚ್ 2021ರ ಬಳಿಕ ಮೊದಲ ಬಾರಿಗೆ ಈ ಮಟ್ಟಕ್ಕೆ ನಿರುದ್ಯೋಗ ದರವು ಕುಸಿತ ಕಂಡಿದೆ. ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ರೂಪಾಂತರ ಓಮಿಕ್ರಾನ್‌ ಕಡಿಮೆ ಆಗುತ್ತಿರುವ ಹಿನ್ನೆಲೆ ನಿರ್ಬಂಧಗಳನ್ನು ಹಲವಾರು ರಾಜ್ಯಗಳು ಸಡಿಲಿಕೆ ಮಾಡಿದೆ. ಈ ಬೆನ್ನಲ್ಲೇ ದೇಶದಲ್ಲಿ ನಿರುದ್ಯೋಗ ದರವು ಜನವರಿಯಲ್ಲಿ ಇಳಿಕೆ ಆಗಿದೆ. ಕ್ರಮೇಣವಾಗಿ ಮತ್ತಷ್ಟು ಚೇತರಿಕೆ ಕಾಣಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿದೆ.

ಭಾರತದಲ್ಲಿ ನಿರುದ್ಯೋಗ ದರ ಶೇ.6.57ಕ್ಕೆ ಇಳಿಕೆಭಾರತದಲ್ಲಿ ನಿರುದ್ಯೋಗ ದರ ಶೇ.6.57ಕ್ಕೆ ಇಳಿಕೆ

ಡಿಸೆಂಬರ್ 2021 ರ ಹೊತ್ತಿಗೆ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ 53 ಮಿಲಿಯನ್ ಆಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಅಂದಾಜು ಮಾಡಿದೆ. ಈ ಬಗ್ಗೆ ಮಾತನಾಡಿದ, ಸಿಎಂಐಇ ಎಂಡಿ, ಸಿಇಒ ಮಹೇಶ್ ವ್ಯಾಸ್, "ಡಿಸೆಂಬರ್‍ ಡೇಟಾವನ್ನು ಪರಿಶೀಲನೆ ಮಾಡಿದಾಗ, ಡಿಸೆಂಬರ್ 2021 ರಲ್ಲಿ 35 ಮಿಲಿಯನ್ ಜನರು ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದಾರೆ. ಅದರಲ್ಲಿ 23 ಪ್ರತಿಶತ ಅಥವಾ 8 ಪ್ರತಿಶತ ಮಿಲಿಯನ್ ಮಹಿಳೆಯರು ಆಗಿದ್ದಾರೆ," ಎಂದು ಹೇಳಿದ್ದಾರೆ.

ಸೆಂಟ್ರಲ್‌ ಫಾರ್‌ ಮೊನಿಟರಿಂಗ್‌ ಇಂಡಿಯಾ ಇಕಾನಮಿ (ಸಿಎಂಐಇ) ಡಿಸೆಂಬರ್‌ನ ಡೇಟಾವು ದೇಶದಲ್ಲಿ ನಿರುದ್ಯೋಗ ಪ್ರಮಾಣದ ಹೆಚ್ಚಳವನ್ನು ತೋರಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ನೋಡಿದಾಗ ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂದರೆ ಡಿಸೆಂಬರ್‌ನಲ್ಲಿ ದೇಶದಲ್ಲಿ ನಿರುದ್ಯೋಗ ದರವು 7.9ಕ್ಕೆ ಏರಿಕೆ ಕಂಡಿದೆ. ಇನ್ನು ನಗರದ ಉದ್ಯೋಗ ದರವು ನವೆಂಬರ್‌ 2021ರಲ್ಲಿ ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ನಗರ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 9.3ಕ್ಕೆ ಏರಿಕೆ ಕಂಡಿದೆ. ಇನ್ನು ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ದರವು ಕೂಡಾ ಏರಿಕೆ ಕಂಡಿದೆ. ನವೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 8.21 ಇತ್ತು. ಆದರೆ ಡಿಸೆಂಬರ್‌ 2021ರಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ದರವು ಶೇಕಡ 7.28ಕ್ಕೆ ಏರಿಕೆ ಕಂಡಿದೆ. ಇನ್ನು ದೇಶದಲ್ಲಿ ನಿರುದ್ಯೋಗ ಪ್ರಮಾಣವು ನವೆಂಬರ್‌ 2021ರಲ್ಲಿ ಶೇಕಡ 7 ಆಗಿತ್ತು. ಆದರೆ ಡಿಸೆಂಬರ್‌ ವೇಳೆಗೆ ಶೇ.7.9ಕ್ಕೆ ಏರಿಕೆ ಆಗಿದೆ ಎಂದು ಸಿಎಂಐಇ ವೆಬ್‌ಸೈಟ್‌ ಉಲ್ಲೇಖ ಮಾಡಿದೆ.

English summary
There were over 8.72 lakh vacant posts in central government departments as on March 1, 2020, the Rajya Sabha was informed on Thursday. As many as 9,10,153 vacancies existed as on March 1, 2019 and 6,83,823 as on March 1, 2018, according to a written reply given by Minister of State for Personnel Jitendra Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X