SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Indian Railways Jobs 2026: ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ವ್ಯಾಪ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಕೋಶ (ಆರ್‌ಆರ್‌ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಒಟ್ಟು ಸಾವಿರಾರು ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಆಸಕ್ತರಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಲಿಖಿತ ಪರೀಕ್ಷೆ ಇಲ್ಲದೇ ಆಯ್ಕೆ ಆಗಲು ಇಲ್ಲಿ ಅವಕಾಶ ಇದೆ. ಈ ಹುದ್ದೆಗಳ ಮಾಹಿತಿ, ನೇಮಕಾತಿ ಪೂರ್ಣ ವಿವರ ಇತರ ಮಾಹಿತಿ ಮುಂದಿದೆ.
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಸ್ ಆಂಡ್ ಟಿ ಹಾಗೂ ಇನ್ನಿತರ ಹುದ್ದೆಗಳು ಸೇರಿ ಒಟ್ಟು ಸುಮಾರು 2801 ಅಪ್ರೆಂಟಿಸ್ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಗೆ ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ರೈಲ್ವೆ ನೇಮಕಾತಿ ಕೋಶ
ಒಟ್ಟು ಹುದ್ದೆಗಳು: 2801
ಹುದ್ದೆಗಳ ಪ್ರಕಾರ; ಅಪ್ರೆಂಟಿಸ್
ಅರ್ಜಿ ಸಲ್ಲಿಕೆ ಕೊನೆ ದಿನ: ಏಪ್ರಿಲ್ 11
ವಿದ್ಯಾರ್ಹತೆ: 10ನೇ ತರಗತಿ
ಅಭ್ಯರ್ಥಿಗಳ ವಯಸ್ಸು: ಗರಿಷ್ಠ 24
ನೇಮಕಾತಿ ಇತರ ಮಾಹಿತಿ
ಎಸ್‌ಎಸ್‌ಎಲ್‌ಸಿ ಪಾಸಾದವರು ಕೈ ತುಂಬ ವೇತನದ ಕೇಂದ್ರ ಸರ್ಕಾರಿ ವ್ಯಾಪ್ತಿಯ ಹುದ್ದೆ ಪಡೆಯಬಹುದು. ಅರ್ಜಿ ಸಲ್ಲಿಸುವವರು 10 ನೇ ತರಗತಿಯಲ್ಲಿ ಕನಿಷ್ಠ ಶೇ. 50 ಅಂಕ ಗಳಿಸಿರಬೇಕು. ಅಭ್ಯರ್ಥಿಗಳು ಎಸಿ ಮೆಕ್ಯಾನಿಕ್, ಕಾರ್ಪೆಂಟರ್, ಸಿಒಪಿಎ, ಡೀಸೆಲ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್, ಮೆಷಿನಿಸ್ಟ್, ಎಂಎಂಟಿಎಂ, ಮೋಟಾರ್ ಮೆಕ್ಯಾನಿಕ್, ಪೇಂಟರ್, ವೆಲ್ಡರ್ ವಿಭಾಗಗಳಲ್ಲಿ ಐಟಿಐ ಪ್ರಮಾಣಪತ್ರ ಪಡೆದಿರಬೇಕೆಂದು ತಿಳಿಸಲಾಗಿದೆ.
ವಯೋಮಿತಿ ಸಡಿಲಿಕೆ
ಇನ್ನೂ ಅಭ್ಯರ್ಥಿಗಳ ವಯೋಮಿತಿ ಅರ್ಜಿ ಸಲ್ಲಿಕೆಯ ಕೊನೆ ದಿನ ಏಪ್ರಿಲ್ 11ರ ಹೊತ್ತಿಗೆ ಕನಿಷ್ಠ 15 ರಿಂದ ಗರಿಷ್ಠ 24 ವರ್ಷ ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಎಸ್‌ಸಿ, ಎಸ್‌ಟಿಗಳಿಗೆ 05 ವರ್ಷಗಳು, ಒಬಿಸಿಗಳಿಗೆ 03 ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ ಮತ್ತು ಇಎಸ್‌ಎಂ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಸಡಿಲಿಕೆ ನೀಡಲಾಗುತ್ತದೆ ಎಂದು ಆರ್‌ಆರ್‌ಸಿ ಮಾಹಿತಿ ನೀಡಿದೆ.
ಅರ್ಜಿ ಶುಲ್ಕ
ಅರ್ಹ ಆಸಕ್ತ ಅಭ್ಯರ್ಥಿಗಳು ಸೂಕ್ತ ಜಾತಿ, ಶೈಕ್ಷಣಿಕ ದಾಖಲಾತಿಗಳ ಮೂಲಕ ಅರ್ಜಿ ಸಲ್ಲಿಸಬೇಕು. 100 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆಗುವ ಅರ್ಹರಿಗೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ರೈಲ್ವೆ ಘಟಕಗಳಲ್ಲಿ ಒಂದು ವರ್ಷದ ತರಬೇತಿ ನೀಡಲಾಗುತ್ತದೆ.
ಆನ್‌ಲೈನ್ ಅರ್ಜಿ ಲಿಂಕ್
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಲಾಗಿರುವ https://scr.indianrailways.gov.in/?lang=1 ಅಧಿಕೃತ ಜಾಲತಾಣ ಲಿಂಕ್ ಮೇಲೆ ಕ್ಲಿಕ್ ಮಾಡಿ ಗಮನಿಸಬಹುದು ಎಂದು ಆರ್‌ಆರ್‌ಸಿ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ.












Click it and Unblock the Notifications