ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain
ಮಳೆ.. ಮಳೆ.. ಮಳೆ.. ಎಲ್ಲಿ ನೋಡಿದರೂ & ಎಲ್ಲಿ ಕೇಳಿದರೂ ಬರೀ ಆಲಿಕಲ್ಲು ಸಹಿತ ಬಿರುಗಾಳಿ ಮಳೆ ಬಗ್ಗೆ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಬಿಸಿ ಬಿಸಿ ಬೇಸಿಗೆ ನಡುವೆಯೇ ಭರ್ಜರಿ ಮಳೆ ಬಿದ್ದು ಒಂದಷ್ಟು ತಂಪಾಗಿದೆ ಕನ್ನಡ ನಾಡು. ಆದರೆ ಇದೇ ಸಮಯದಲ್ಲಿ ಅಕಾಲಿಕ ಎಂದರೆ ಬೇಸಿಗೆ ಸಮಯದಲ್ಲಿ ಸುರಿದ ಮಳೆ ಪರಿಣಾಮ ಮಾವಿನ ಬೆಳೆ, ಬಾಳೆ ಸೇರಿದಂತೆ ಹಲವು ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಿದ್ದಾಗ ದಿಢೀರ್ ಹವಾಮಾನ ಇಲಾಖೆ ಮಳೆ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಹಾಗಾದರೆ ಮತ್ತೆ ಜೋರಾಗಿ ಮಳೆ ಬರುತ್ತಾ? ಬನ್ನಿ ತಿಳಿಯೋಣ.
ಚಳಿಗಾಲ ಅನ್ನೋ ಹಾಗಿಲ್ಲ, ಬೇಸಿಗೆ ಕಾಲ ಅನ್ನೋ ಹಂಗೂ ಇಲ್ಲ. ಈ ರೀತಿ ಮಳೆ ಸುರಿಯುತ್ತಿರುವ ರೀತಿ ನೋಡಿದರೆ ಯಾವ ಕೇಡುಗಾಲ ಬಂದಿದೆಯೋ ಅಂತಾ ಈಗ ಜನ ಬೇಸರ ಹೊರ ಹಾಕುತ್ತಿದ್ದಾರೆ. ಈ ರೀತಿ ಬೇಸಿಗೆ ಕಾಲ ಬಂದಿದ್ದರೂ ಮಳೆ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮಳೆಯ ಆರ್ಭಟ ಕಡಿಮೆ ಆಗುವ ಬದಲು ಹೆಚ್ಚಾಗ್ತಾ ಇದ್ದು ಆತಂಕದ ವಾತಾವರಣ ನಿರ್ಮಾಣ ಆಗಿದೆ.

ಈಗಾಗಲೇ ಮುಂಗಾರು ಮಳೆಯ ಸಮಯದಲ್ಲಿ ಭರ್ಜರಿ ಮಳೆ ಬಂದು, ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಡ್ಯಾಂ, ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಇಂತಹ ಸಮಯದಲ್ಲೇ ವಾತಾವರಣ ಬದಲಾವಣೆ & ಭೂಮಿ ಮೇಲೆ ಹವಾಮಾನ ಕೆಟ್ಟು ಏರುಪೇರು ಆಗಿರುವ ಕಾರಣಕ್ಕೆ ಬೇಸಿಗೆಯಲ್ಲೂ ದೊಡ್ಡ ಮಟ್ಟಿಗೆ ಮಳೆ ಸುರಿಯುತ್ತಿದೆ. ಹಾಗಾದರೆ ಈ ಮಳೆ ಇನ್ನಷ್ಟು ಸುರಿಯುತ್ತಾ? ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದು ಏನು? ಮುಂದೆ ಓದಿ.
ಮಳೆ.. ಮಳೆ.. ಮಳೆ...
ಅಂದಹಾಗೆ ಕರ್ನಾಟಕ ರಾಜ್ಯದಲ್ಲಿ ಈ ವರ್ಷದ ಮೊದಲ ಪೂರ್ವ ಮುಂಗಾರು ಮಳೆ, ಅಂದ್ರೆ ತುಂಬಾ ಜನಪ್ರಿಯವಾಗಿ "ಮ್ಯಾಂಗೋ ಶವರ್ಸ್" ಎಂದು ಕರೆಯುವ ಮಳೆ ಭರ್ಜರಿಯಾಗಿ ಬೀಳುತ್ತಿದೆ. ಕನ್ನಡ ನಾಡಿನ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ತುಮಕೂರು, ಧಾರವಾಡ, ದಾವಣಗೆರೆ & ಇನ್ನೂ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ. ಮಳೆಯಿಂದ ಈಗ ಬಿಸಿಲು ಹೆಚ್ಚುತ್ತಿರುವ ಸಮಯದಲ್ಲೇ ಜನರಿಗೆ ಸ್ವಲ್ಪ ತಂಪು ತಂಪಿನ ವಾತಾವರಣ ಸಿಕ್ಕಿದ್ದು, ಖುಷಿಯಾಗಿದೆ ಕನ್ನಡಿಗರಿಗೆ. ಈ ಸಮಯದಲ್ಲೇ ಹವಾಮಾನ ಇಲಾಖೆ ಮತ್ತಷ್ಟು ಖುಷಿ ಸುದ್ದಿ ಕೊಟ್ಟಿದ್ದು, ಮಳೆ ಇನ್ನೂ 2-3 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದಿದೆ. ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಬರುವ ಮಳೆ ಇದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆ?
ಹವಾಮಾನ ಮುನ್ಸೂಚನೆ ಪ್ರಕಾರ ಮಾರ್ಚ್ 22 ತನಕವೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಪಕ್ಕಾ ಎನ್ನಲಾಗಿದೆ. ಅದರಲ್ಲೂ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ಜೋರಾಗಿ ಗಾಳಿಯು ಬೀಸುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು ಕರ್ನಾಟಕ ಭಾಗದಲ್ಲಿ ಬರುವ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ, ಬಳ್ಳಾರಿ, ಕೊಪ್ಪಳ ಸೇರಿದಂತೆ ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲೂ ಚದುರಿದಂತೆ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಈ ಮೂಲಕವಾಗಿ ಬೇಸಿಗೆಯ ಬಿರು ಬಿಸಿಲಿನ ನಡುವೆ ಮಳೆರಾಯ ಒಂದಷ್ಟು ತಂಪು, ತಂಪು ವಾತಾವರಣ ಸೃಷ್ಟಿಸುವ ನಿರೀಕ್ಷೆ ಮೂಡಿದೆ.












Click it and Unblock the Notifications