Get Updates
Get notified of breaking news, exclusive insights, and must-see stories!

Commercial LPG: ಹೋಟೆಲ್‌, ಪಿಜಿಗಳಿಗೆ ಕೇಂದ್ರದಿಂದ ಬಿಗ್‌ ರಿಲೀಫ್‌: ವಾಣಿಜ್ಯ ಎಲ್‌ಪಿಜಿ ಹಂಚಿಕೆ ಪ್ರಮಾಣ ಹೆಚ್ಚಿಸಿ ಆದೇಶ

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಉಂಟಾಗಿದ್ದ ಎಲ್‌ಪಿಜಿ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಮಾರ್ಚ್ 23ರಿಂದ ಜಾರಿಗೆ ಬರುವಂತೆ ಅನಿಲ ಹಂಚಿಕೆಯನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಾರ್ಚ್ 23ರಿಂದ ಮುಂದಿನ ಆದೇಶದವರೆಗೆ ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ 20ರಷ್ಟು ಎಲ್‌ಪಿಜಿ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಒಟ್ಟು ಹಂಚಿಕೆ ಪ್ರಮಾಣವು ಬಿಕ್ಕಟ್ಟಿಗೆ ಮುಂಚಿನ ಮಟ್ಟದ ಶೇ 50ಕ್ಕೆ ಏರಿಕೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಹೆಚ್ಚುವರಿ ಶೇ 20ರಷ್ಟು ಎಲ್‌ಪಿಜಿ ಹಂಚಿಕೆಯನ್ನು ಮುಖ್ಯವಾಗಿ ಕೆಲವು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆಯಾಗಿ ನೀಡಲು ಸೂಚಿಸಲಾಗಿದೆ.

Commercial LPG

ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಅನುಕೂಲ

ಅವುಗಳಲ್ಲಿ ಹೋಟೆಲ್‌ಗಳು, ಧಾಬಾಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಯಾಂಟೀನ್‌ಗಳು, ಆಹಾರ ಸಂಸ್ಕರಣಾ ಘಟಕಗಳು, ಡೈರಿ ಘಟಕಗಳು, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ಕ್ಯಾಂಟೀನ್‌ಗಳು, ಸಮುದಾಯ ಅಡುಗೆ ಕೇಂದ್ರಗಳು ಹಾಗೂ ವಲಸೆ ಕಾರ್ಮಿಕರಿಗೆ ನೀಡುವ 5 ಕೆಜಿ ಉಚಿತ ಎಲ್‌ಪಿಜಿ ಯೋಜನೆ ಸೇರಿವೆ. ಎಲ್‌ಪಿಜಿ ಸರಬರಾಜಿನಲ್ಲಿ ಯಾವುದೇ ರೀತಿಯ ಮರುಬಳಕೆ ಅಥವಾ ದುರುಪಯೋಗ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೂಡ ಸೂಚಿಸಲಾಗಿದೆ.

ವಾಣಿಜ್ಯ ಎಲ್‌ಪಿಜಿ ಕೊರತೆಯಿಂದ ಹೋಟೆಲ್‌, ಪಿಜಿ ಹಾಗೂ ಆಹಾರ ವಲಯದ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆ, ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಈ ನಿರ್ಧಾರದಿಂದ ಹೋಟೆಲ್‌ ಉದ್ಯಮ, ಪಿಜಿ ವಸತಿ ಕೇಂದ್ರಗಳು ಹಾಗೂ ಸಮುದಾಯ ಅಡುಗೆ ಕೇಂದ್ರಗಳಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಗುವ ನಿರೀಕ್ಷೆಯಿದೆ. ಈ ಹೊಸ ಆದೇಶದೊಂದಿಗೆ ದೇಶದ ಒಟ್ಟಾರೆ ಅನಿಲ ಹಂಚಿಕೆಯು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇ 50ಕ್ಕೆ ತಲುಪಲಿದೆ. ಇದು ಮಾರುಕಟ್ಟೆಯಲ್ಲಿ ಉಂಟಾಗಿದ್ದ ಹಾಹಾಕಾರವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ನಿರೀಕ್ಷೆಯಿದೆ.

ಈಗಾಗಲೇ ನೀಡಲಾಗಿದ್ದ ಶೇ 30ರಷ್ಟು ಹಂಚಿಕೆಗೆ ಹೆಚ್ಚುವರಿಯಾಗಿ ಶೇ 20ರಷ್ಟು ಸೇರಿಸಲಾಗಿದ್ದು, ಮಾರ್ಚ್ 23ರಿಂದ ಒಟ್ಟು ಶೇ 50ರಷ್ಟು ಅನಿಲ ಹಂಚಿಕೆ ರಾಜ್ಯಗಳಿಗೆ ಲಭ್ಯವಾಗಲಿದೆ. ಅದರಂತೆ ಆದ್ಯತಾ ವಲಯಕ್ಕೆ ಹೆಚ್ಚುವರಿ ಶೇ 20ರಷ್ಟು ಅನಿಲವನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳು, ಕೈಗಾರಿಕಾ ಕ್ಯಾಂಟೀನ್‌ಗಳು, ಹಾಲು ಸಂಸ್ಕರಣಾ ಘಟಕಗಳು ಮತ್ತು ವಲಸೆ ಕಾರ್ಮಿಕರಿಗಾಗಿ ಮೀಸಲಾದ 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳಿಗೆ ಆದ್ಯತೆಯ ಮೇಲೆ ನೀಡಬೇಕು. ಈ ಅನಿಲವು ದುರ್ಬಳಕೆಯಾಗದಂತೆ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ತೈಲ ಮಾರುಕಟ್ಟೆ ಕಂಪನಿಗಳ (OMCs) ಡೇಟಾಬೇಸ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಕಂಪನಿಗಳು ಗ್ರಾಹಕರ ವಾರ್ಷಿಕ ಅನಿಲ ಬಳಕೆಯ ದಾಖಲೆಯನ್ನು ನಿರ್ವಹಿಸಬೇಕಾಗುತ್ತದೆ. ವಾಣಿಜ್ಯ ಅನಿಲ ಪಡೆಯಲು ಗ್ರಾಹಕರು ತಮ್ಮ ನಗರದ 'ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್' (CGD) ಸಂಸ್ಥೆಯ ಮೂಲಕ ಪೈಪ್ಡ್ ನೈಸರ್ಗಿಕ ಅನಿಲಕ್ಕಾಗಿ (PNG) ಅರ್ಜಿ ಸಲ್ಲಿಸಿರಬೇಕು. ಭವಿಷ್ಯದಲ್ಲಿ ಎಲ್‌ಪಿಜಿ ಬದಲಿಗೆ ಪಿಎನ್‌ಜಿ ಪಡೆಯಲು ಸಿದ್ಧರಾಗಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಈ ನಿರ್ಧಾರದಿಂದಾಗಿ ಆಹಾರೋದ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಎದುರಾಗಿದ್ದ ಇಂಧನ ಕೊರತೆ ನೀಗುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+