ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ
ತಿರುವನಂತಪುರಂ, ಜನವರಿ 17; ಪ್ರತಿಭಟನೆ, ವಿರೋಧಗಳ ನಡುವೆಯೂ ಕೇರಳ ಸರ್ಕಾರ ತಿರುವನಂತಪುರಂ-ಕಾಸರಗೋಡು ಸೆಮಿ-ಹೈಸ್ಪೀಡ್ ರೈಲು ಯೋಜನೆ ಡಿಪಿಆರ್ ಬಿಡುಗಡೆ ಮಾಡಿದೆ. 529.45 ಕಿ. ಮೀ ಯೋಜನೆ ಇದಾಗಿದ್ದು, ಈ ಯೋಜನೆಗೆ ಭಾರೀ ವಿರೋಧವೂ ಇದೆ.
ಶನಿವಾರ ಪ್ರಸ್ತಾವಿತ ರೈಲು ಯೋಜನೆ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕೇರಳ ಬಿಡುಗಡೆ ಮಾಡಿದೆ. ಯೋಜನಾ ವೆಚ್ಚ 63,941 ಕೋಟಿ ಆಗಿದ್ದು, 2025ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದೆ.
ಕೇರಳ ವಿಧಾನಸಭೆ ವೆಬ್‌ಸೈಟ್‌ನಲ್ಲಿ ಡಿಪಿಆರ್ ಲಭ್ಯವಿದೆ. ಈ ಯೋಜನೆ ಪೂರ್ಣಗೊಂಡರೆ ತಿರುವನಂತಪುರಂ-ಕಾಸರಗೋಡು ನಡುವಿನ ಸಂಚಾರದ ಅವಧಿ ಈಗಿನ 12 ಗಂಟೆಗಳಿಂದ 4 ಗಂಟೆಗೆ ಇಳಿಕೆಯಾಗಲಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಿರುವನಂತಪುರಂ-ಕಾಸರಗೋಡು ನಡುವೆ ರಸ್ತೆಯಲ್ಲಿ ಸಂಚಾರ ನಡೆಸುವುದು ಕಷ್ಟಕರವಾಗಿದೆ. ಈ ರೈಲು ಮಾರ್ಗ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಮೈಲುಗಲ್ಲು ಆಗಲಿದೆ ಎಂದು ಕೇರಳ ಸರ್ಕಾರ ಹೇಳಿದೆ. ರಾಜ್ಯದ ಆರ್ಥಿಕ ಸುಧಾರಣೆಗೆ ಈ ಸೆಮಿ-ಹೈಸ್ಪೀಡ್ ರೈಲು ಮಾರ್ಗ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.
ಸಿಲ್ವರ್ ಲೈನ್ ಪ್ರಾಜೆಕ್ಟ್ ಎಂದು ಸಹ ಇದಕ್ಕೆ ಹೆಸರಿಡಲಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣದ ಬಳಿಯಿಂದ ಆರಂಭವಾಗುವ ರೈಲು ಯೋಜನೆ 529.45 ಕಿ. ಮೀ. ಇರಲಿದೆ. ಕೊಲ್ಲಂ, ಅಪಫೂಜ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕಣ್ಣೂರು ಮೂಲಕ ಸಾಗುವ ಮಾರ್ಗ ಕಾಸರಗೋಡು ತಲುಪಲಿದೆ.
ಈ ಮಾರ್ಗದಲ್ಲಿ 11 ನಿಲ್ದಾಣಗಳು ಬರಲಿವೆ. ಇವುಗಳ ಪೈಕಿ ತಿರುವನಂತಪುರಂ, ಏರ್ನಾಕುಲಂ ಮತ್ತು ತ್ರಿಶೂರ್ ನಿಲ್ದಾಣಗಳು ಭೂಮಿ ಮೇಲೆ ಇರಲಿವೆ. ಕಣ್ಣೂರು ನಿಲ್ದಾಣ ಸುರಂಗ ಮಾರ್ಗದಲ್ಲಿ ಇರಲಿದೆ ಎಂದು ಪ್ರಸ್ತಾಪಿತ ಯೋಜನೆ ವಿವರಣೆ ನೀಡಿದೆ.
ಸಿಲ್ವರ್ ಲೈನ್ ಪ್ರಾಜೆಕ್ಟ್ ಯಾವುದೇ ರಾಷ್ಟ್ರೀಯ ಉದ್ಯಾನ, ವನ್ಯಪಾಣಿಗಳ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವುದಿಲ್ಲ. ರೈಲು ಮಾರ್ಗ ಜೀವವೈವಿಧ್ಯದ ತಾಣ ಪಶ್ಚಿಮ ಘಟ್ಟಗಳಿಗೆ ಸ್ವಲ್ಪಮಟ್ಟಿಗೆ ಸಮಾನಾಂತರವಾಗಿ ಸಾಗುತ್ತದೆ. ಆದ್ದರಿಂದ ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಪರಿಣಾಮಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಿದೆ ಎಂದು ವಿವರಿಸಲಾಗಿದೆ.
ಕಾಂಗ್ರೆಸ್ ವಿರೋಧ; ವಿಸ್ತೃತ ಯೋಜನಾ ವರದಿ (ಡಿಪಿಆರ್) ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ (ಕಾಂಗ್ರೆಸ್) ನಾಯಕ ವಿ. ಡಿ. ಸತೀಶನ್, "3,700 ಪುಟಗಳ ಡಿಪಿಆರ್ ಅಪೂರ್ಣ ಮತ್ತು ಅವೈಜ್ಞಾನಿಕ. ಯೋಜನೆಯಿಂದಾಗುವ ಸಾಮಾಜಿಕ ಮತ್ತು ಪರಿಸರ ಹಾನಿ ಬಗ್ಗೆ ವೈಜ್ಞಾನಿಕ ಅಧ್ಯಯನವೇ ಆಗಿಲ್ಲ" ಎಂದು ಆರೋಪಿಸಿದ್ದಾರೆ.
"ಯಾವುದೇ ಅಧ್ಯಯನ, ಸಮೀಕ್ಷೆ ನಡೆಸದೇ ಡಿಪಿಆರ್ ಸಿದ್ಧಗೊಳಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಎಲ್ಲಾ ವಸ್ತುಗಳು ಕೇರಳದಲ್ಲಿಯೇ ಸಿಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಯೋಜನಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಅಕ್ಕಪಕ್ಕದ ರಾಜ್ಯಗಳಿಂದ ಖರೀದಿ ಮಾಡಬಹುದಾಗಿದೆ. ಆದರೆ ಯಾವ ವಸ್ತುಗಳು ಅಗತ್ಯವಿದೆ? ಎಂದು ಹೇಳಲು ಈಗ ಸಾಧ್ಯವಿಲ್ಲ. ಅದರ ಬಗ್ಗೆ ತಿಳಿದಿದ್ದರೆ ಡಿಪಿಆರ್‌ನಲ್ಲಿ ಉಲ್ಲೇಖಿಸುತ್ತಿದ್ದೆವು ಎಂದು ಕೆ-ರೈಲ್ ಹೇಳಿದೆ.
2009-10ರಲ್ಲಿ ಘೋಷಣೆ; ಕೇರಳ ಸರ್ಕಾರ 2009-10ರ ರಾಜ್ಯ ಬಜೆಟ್‌ನಲ್ಲಿ ತಿರುವನಂತಪುರಂ-ಕಾಸರಗೋಡು ಸೆಮಿ ಹೈಸ್ಪೀಡ್ ರೈಲು ಯೋಜನೆ ಘೋಷಣೆ ಮಾಡಿತು. ಕೇರಳ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಡೆಡ್ ಸ್ಥಾಪನೆ ಮಾಡಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಸರ್ಕಾರ ಹೇಳಿತ್ತು.
ದೆಹಲಿ ಮೆಟ್ರೋ ರೈಲು ನಿಗಮ ಯೋಜನೆ ಕುರಿತು ಅಧ್ಯಯನ ನಡೆಸಿ 2012ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತು. ಆದರೆ ಯೋಜನೆ ಬೇರೆ ಬೇರೆ ಕಾರಣದಿಂದಾಗಿ ಜಾರಿಯಾಗಲಿಲ್ಲ. ಸರ್ಕಾರ ಕೇರಳ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಡೆಡ್ ರದ್ದುಗೊಳಿಸಿತು.
ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ಸರ್ಕಾರ ತಿರುವನಂತಪುರಂ-ಕಾಸರಗೋಡು ನಡುವೆ ವಿಶೇಷ ರೈಲು ಕಾರಿಡಾರ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತು. 2019-20ರ ಬಜೆಟ್‌ನಲ್ಲಿ ಈ ಕುರಿತು ಹಣಕಾಸು ಸಚಿವ ಟಿ. ಎಂ. ಥಾಮಸ್ ಉಲ್ಲೇಖಿಸಿದರು.
ಕೇರಳ ರೈಲು ಅಭಿವೃದ್ಧಿ ಕಾರ್ಪೊರೇಷನ್ ಲಿಮಿಡೆಡ್ (ಕೆ-ರೈಲ್), ಕೇರಳ ಸರ್ಕಾರ ಮತ್ತು ರೈಲ್ವೆ ಖಾತೆ ಜಂಟಿಯಾಗಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿತು. ಆದರೆ ಯೋಜನೆಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ವಾದವಿದ್ದು, ಯೋಜನೆಗೆ ವಿರೋಧವೂ ವ್ಯಕ್ತವಾಗುತ್ತಿದೆ.
Recommended Video
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications