ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಆರ್‌ ಫಾರ್ಮ್‌ನಲ್ಲಿ ಇನ್ಮುಂದೆ ಕ್ರಿಪ್ಟೋ ಆದಾಯಕ್ಕಾಗಿ ಪ್ರತ್ಯೇಕ ಕಾಲಮ್‌!

|
Google Oneindia Kannada News

ನವದೆಹಲಿ, ಫೆಬ್ರವರಿ 03: ಕೇಂದ್ರ ಸರ್ಕಾರವು ಫೆಬ್ರವರಿ ಒಂದರಂದು ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡಿದೆ. ಈ ಬೆನ್ನಲ್ಲೇ ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳು ಕ್ರಿಪ್ಟೋಕರೆನ್ಸಿಗಳಿಂದ ಪಡೆದ ಆದಾಯದ ವಿವರಕ್ಕಾಗಿ ಪ್ರತ್ಯೇಕ ಕಾಲಮ್ ಅನ್ನು ಹೊಂದಿರುತ್ತವೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.

"ಹೂಡಿಕೆದಾರರಿಗೆ ಕ್ರಿಪ್ಟೋಕರೆನ್ಸಿಗಳಿಂದ ಬರುವ ಲಾಭಗಳು ತೆರಿಗೆಗೆ ಒಳಪಡುತ್ತದೆ. ಮುಂದಿನ ವರ್ಷ ITR ಫಾರ್ಮ್ ಕ್ರಿಪ್ಟೋಗಾಗಿ ಪ್ರತ್ಯೇಕ ಕಾಲಮ್ ಇರಲಿದೆ. ಕ್ರಿಪ್ಟೋ ಆದಾಯವನ್ನು ಬಹಿರಂಗಪಡಿಸಬೇಕಾಗಿದೆ," ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ಮಾ.15ಕ್ಕೆ ವಿಸ್ತರಣೆಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ಮಾ.15ಕ್ಕೆ ವಿಸ್ತರಣೆ

2022ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಘೋಷಣೆ ಮಾಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಮೊದಲೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2022ನೇ ಸಾಲಿನ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ITR Forms From Next Year Will Have Separate Column For Income From Cryptocurrency: Revenue Secretary

ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ ಎಂದು ನಿರ್ಮಲಾ ಹೇಳಿದರು.

ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆ

ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಕಾನೂನು

ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಣ ಮಾಡಲು ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಯಾವುದೇ ಕರಡು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಇನ್ನು ಈಗಾಗಲೇ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿ ಸೇರಿದಂತೆ ಡಿಜಿಟಲ್ ಆಸ್ತಿ ವಹಿವಾಟುಗಳ ಲಾಭದ ಮೇಲೆ ಏಪ್ರಿಲ್ 1 ರಿಂದ ಶೇಕಡಾ 30 ತೆರಿಗೆಯನ್ನು ವಿಧಿಸಲಿದೆ ಎಂದು ಬಜೆಟ್‌ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಾಡಲು ಸರ್ಕಾರ ಮುಂದಾದಂತೆ ಕಂಡು ಬಂದಿದೆ.

"ಇನ್ನು ಕ್ರಿಪ್ಟೋಕರೆನ್ಸಿಗಳಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಸ್ಪಷ್ಟವಾದ ನಿಲುವನ್ನು ಹೊಂದಿದೆ. ಇನ್ನು ಮುಂದೆ 30 ಪ್ರತಿಶತವನ್ನು ವಿಧಿಸಲಾಗುತ್ತದೆ. ನಾವು ಈಗ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತೇವೆ. ಇದಕ್ಕಾಗಿ ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳು ಕ್ರಿಪ್ಟೋಕರೆನ್ಸಿಗಳಿಂದ ಪಡೆದ ಆದಾಯದ ವಿವರಕ್ಕಾಗಿ ಪ್ರತ್ಯೇಕ ಕಾಲಮ್ ಅನ್ನು ಹೊಂದಿರುತ್ತವೆ," ಎಂದು ತಿಳಿಸಿದ್ದಾರೆ.

"ಕ್ರಿಪ್ಟೋಗಳು ಯಾವಾಗಲೂ ತೆರಿಗೆಗೆ ಒಳಪಡುತ್ತದೆ, ಇದು ಹೊಸ ತೆರಿಗೆ ಅಲ್ಲ ಎಂದು ನಾನು ಹೇಳುತ್ತಿಲ್ಲ. ಈಗ ನೀವು ಐಟಿಆರ್ ರೂಪದಲ್ಲಿ ಕ್ರಿಪ್ಟೋ ಆದಾಯ ತೋರಿಸಿದ ಬಳಿಕ ನಿಮಗೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ," ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.

2022-23ರ ಬಜೆಟ್ ಒಂದು ವರ್ಷದಲ್ಲಿ ರೂ 10,000 ಮೀರಿದ ವರ್ಚುವಲ್ ಕರೆನ್ಸಿಗಳಿಗೆ ಪಾವತಿಗಳ ಮೇಲೆ 1 ಶೇಕಡಾ ಟಿಡಿಎಸ್‌ ಅನ್ನು ಪ್ರಸ್ತಾಪ ಮಾಡಿದೆ. ಐಟಿ ಕಾಯಿದೆಯ ಅಡಿಯಲ್ಲಿ ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾದ ವ್ಯಕ್ತಿಗಳು ತೆರಿಗೆ ವಿನಾಯಿತಿ ಮಿತಿಯು ವರ್ಷಕ್ಕೆ 50,000 ರೂಪಾಯಿ ಆಗಿದೆ. ಭಾರತದಲ್ಲಿನ ಕ್ರಿಪ್ಟೋ ಮಾರುಕಟ್ಟೆಯು ಜೂನ್ 2021 ರವರೆಗಿನ ವರ್ಷದಲ್ಲಿ ಶೇಕಡಾ 641 ರಷ್ಟು ಬೆಳೆದಿದೆ ಎಂದು ಉದ್ಯಮ ಸಂಶೋಧನಾ ಸಂಸ್ಥೆ ಚೈನಾಲಿಸಿಸ್ ಅಕ್ಟೋಬರ್‌ನಲ್ಲಿ ವರದಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
ITR Forms From Next Year Will Have Separate Column For Income From Cryptocurrency Says Revenue Secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X