
ಗಮನಿಸಿ: ಏಪ್ರಿಲ್ 1ರಿಂದ ಯಾವುದು ಅಗ್ಗ, ಯಾವುದು ದುಬಾರಿ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ 10ನೇ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಕೈಗೊಂಡ ನಿರ್ಧಾರಗಳು ಏಪ್ರಿಲ್ 1ರಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಲ್ಲಿ ಜಾರಿಗೆ ತರಲಾಗುತ್ತದೆ. ಶುಕ್ರವಾರದಿಂದ ಹಲವಾರು ವಸ್ತುಗಳು ದುಬಾರಿಯಾದರೆ, ಇನ್ನೂ ಕೆಲವು ವಸ್ತುಗಳು ಅಗ್ಗವಾಗಲಿದೆ.
ಛತ್ರಿ ಮೇಲಿನ ಸುಂಕ, ಆಮದು ವಸ್ತುಗಳ ಮೇಲೆ ಸುಂಕ ಏರಿಕೆ, ಅನ್ ಬ್ಲೆಂಡೆಡ್ ಇಂಧನ ಮೊದಲಾದವುಗಳ ಬೆಲೆ ಇಂದಿನಿಂದ ಏರಿಕೆ ಆಗಲಿದ್ದು, ಈ ಸಂದರ್ಭದಲ್ಲೇ ಮೆಥಾನಲ್ ಸೇರಿದಂತೆ ಕೆಲವು ರಾಸಾಯನಿಕ ಮೇಲೆ ಸುಂಕ ಇಳಿಕೆ ಆಗಲಿದೆ. ಮೊಬೈಲ್ ಫೋನ್ ಚಾರ್ಜರ್ ಬೆಲೆ, ಮೊಬೈಲ್ ಫೋನ್ ಬೆಲೆಯಲ್ಲಿ ಇಳಿಕೆ ಕಾಣಲಿದೆ. ಈ ನಡುವೆ ಈಗಾಗಲೇ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆ ಆಗಿದೆ. ಎಲ್‌ಪಿಜಿ ಬೆಲೆಯು ಹೆಚ್ಚಾಗಿದೆ.
ಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆ
ಆಮದು ಮಾಡಲಾದ ವಸ್ತುಗಳು, ಛತ್ರಿಗಳು ಮತ್ತು ಮಿಶ್ರಣ ಮಾಡದ ಇಂಧನದ ಜೊತೆಗೆ ಏಪ್ರಿಲ್‌ನಿಂದ ಬಜೆಟ್ ಜಾರಿಗೆ ಬಂದಾಗ ಬೆಲೆಯಲ್ಲಿ ಏರಿಕೆಯಾಗಲಿದೆ. ಫೋನ್‌ಗಳಿಗೆ ಚಾರ್ಜರ್‌ಗಳು ಮತ್ತು ಕ್ಯಾಮೆರಾಗಳು, ಸ್ಮಾರ್ಟ್‌ವಾಚ್, ರತ್ನದ ಕಲ್ಲುಗಳು ಮತ್ತು ವಜ್ರಗಳು, ಕೃಷಿ ಉಪಕರಣಗಳು ಮತ್ತು ಸ್ಮಾರ್ಟ್ ಮೀಟರ್‌ಗಳು, ಸ್ಟೀಲ್ ಪೆಟ್ರೋಲಿಯಂ ಸಂಸ್ಕರಣೆಗೆ ಸ್ಕ್ರ್ಯಾಪ್‌ಗಳು ಮತ್ತು ರಾಸಾಯನಿಕಗಳು ಅಗ್ಗವಾಗಲಿದೆ. ಇನ್ನು ಹಲವಾರು ವಸ್ತುಗಳು ಇಂದಿನಿಂದ ದುಬಾರಿಯಾಗಲಿದೆ. ಹಾಗೆಯೇ ಕೆಲವು ಅಗ್ಗವಾಗಲಿದೆ. ಅವು ಯಾವುದು ಎಂದು ತಿಳಿಯಲು ಮುಂದೆ ಓದಿ....
Budget 2022: ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಬದಲಾವಣೆ ಆಗಿಲ್ಲ

ಕೇಂದ್ರ ಬಜೆಟ್: ಯಾವೆಲ್ಲಾ ವಸ್ತುಗಳು ದುಬಾರಿ?
* ಛತ್ರಿ
* ಆಭರಣ
* ಲೌಡ್‌ಸ್ಪೀಕರ್‌ಗಳು
* ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು
* ಸ್ಮಾರ್ಟ್ ಮೀಟರ್
* ಸೋಲರ್ ಸೆಲ್
* ಸೋಲರ್ ಮೋಡಲ್
* ಎಕ್ಸ್-ರೇ ಯಂತ್ರಗಳು
* ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳು
* ಔಷಧ

ಕೇಂದ್ರ ಬಜೆಟ್: ಯಾವೆಲ್ಲಾ ವಸ್ತುಗಳು ಅಗ್ಗವಾಗಲಿದೆ?
ಇಂಗು
ಕೋಕೋ ಬೀನ್ಸ್
ಮೀಥೈಲ್ ಆಲ್ಕೋಹಾಲ್
ಅಸಿಟಿಕ್ ಆಮ್ಲ
ವಜ್ರಗಳು
ಸೆಲ್ಯುಲಾರ್ ಮೊಬೈಲ್ ಫೋನ್‌ನ ಕ್ಯಾಮೆರಾ ಲೆನ್ಸ್

ಔಷಧಗಳು ದುಬಾರಿ
ಔಷಧ ಎಂಬುವುದು ಬಹುಮುಖ್ಯವಾದದು. ಆದರೆ ಈ ಔಷಧಗಳ ಬೆಲೆಯು ಏರಿಕೆ ಆಗಲಿದೆ. 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತೆ. ಈ ಔಷಧಗಳಲ್ಲಿ ನೋವು ನಿವಾರಕ ಔಷಧಿಗಳು ಕೂಡಾ ಸೇರಿದೆ. ಆಂಟಿ ಅಲರ್ಜಿಕ್ಸ್, ಆಂಟಿಬಯೋಟಿಕ್, ಆಂಟಿಕಾನ್ವಲ್ಸೆಂಟ್‌ಗಳು, ಹೃದಯರಕ್ತನಾಳದ, ವಿಟಮಿನ್ ಮತ್ತು ಖನಿಜಗಳಂತಹ ಔಷಧಿಗಳನ್ನು ಏಪ್ರಿಲ್ 1ರಿಂದ ಹೆಚ್ಚಳವಾಗಲಿದೆ.

ವಾಹನಗಳ ಬೆಲೆ ಏರಿಕೆ
ಏಪ್ರಿಲ್ 1 ರಿಂದ ಕಾರುಗಳು ಕೂಡ ದುಬಾರಿಯಾಗಲಿವೆ. ಟಾಟಾ ಮೋಟಾರ್ಸ್ ತನ್ನ ವಾಹನಗಳ ಬೆಲೆಯನ್ನು ಶೇಕಡಾ 2-2.5 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದರೆ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಹ ತನ್ನ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಶೇಕಡಾ 4 ರವರೆಗೆ ಹೆಚ್ಚಿಸಲು ನಿರ್ಧರಿಸಿದೆ. ಇದಲ್ಲದೇ ಮರ್ಸಿಡಿಸ್ ಬೆಂಜ್ ಇಂಡಿಯಾ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲಿದೆ. ಅದೇ ಸಮಯದಲ್ಲಿ, ಬಿಎಂಡಬ್ಲ್ಯೂ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಏಪ್ರಿಲ್ 1 ರಿಂದ ಶೇಕಡಾ 3.5 ರಷ್ಟು ಹೆಚ್ಚಿಸಲಿದೆ.

ಕ್ರಿಪ್ಟೋಕರೆನ್ಸಿ ತೆರಿಗೆ ಹೊರೆ
ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಮೊದಲೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಭಾರತದಲ್ಲಿ ಕ್ರಿಪ್ಟೋ ಆಸ್ತಿ ತೆರಿಗೆಯು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಆರಂಭವಾಗಲಿದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ.