ಬಾಲಕಿಯರಲ್ಲಿ ಅಕಾಲಿಕ ಪ್ರೌಢಾವಸ್ಥೆ ಹೆಚ್ಚಳ: ವೈದ್ಯರು ಹೇಳುವ ಆತಂಕಕಾರಿ ಕಾರಣಗಳಿವು

ಇತ್ತೀಚಿನ ವರ್ಷಗಳಲ್ಲಿ ಬಾಲಕಿಯರಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಪ್ರೌಢಾವಸ್ಥೆ ಆರಂಭವಾಗುತ್ತಿರುವುದು ವೈದ್ಯಕೀಯ ತಜ್ಞರು ಮತ್ತು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇದು 12 ರಿಂದ 13 ವರ್ಷದೊಳಗೆ ಆರಂಭವಾಗಬೇಕಾದ ಮಾಸಿಕ ಋತುಚಕ್ರ ಇತ್ತೀಚಿನ ದಿನಗಳಲ್ಲಿ ಹಲವಾರು ಬಾಲಕಿಯರಲ್ಲಿ 9 ವರ್ಷಕ್ಕೂ ಮೊದಲೆ ಕಾಣಿಸಿಕೊಳ್ಳುತ್ತಿರುವುದು ಹೊಸ ಅಧ್ಯಯನಗಳಲ್ಲಿ ಬೆಳಕಿಗೆ ಬಂದಿದೆ.

ಅಮೆರಿಕದ ಲೋಮಾ ಲಿಂಡಾ ಯುನಿವರ್ಸಿಟಿ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಪೀಡಿಯಾಟ್ರಿಕ್ ಡಯಾಬಿಟಿಸ್ ಮತ್ತು ಎಂಡೊಕ್ರೈನ್ ಸೆಂಟರ್‌ನ ವೈದ್ಯೆ ಡಾ. ಸೇನಾ ಒರ್ಸ್ಡೆಮಿರ್ ಅವರ ಪ್ರಕಾರ, "ಪ್ರಿಕೋಷಿಯಸ್ ಪ್ಯೂಬರ್ಟಿ" ಅಥವಾ ಅನಿರೀಕ್ಷಿತ ಪ್ರೌಢಾವಸ್ಥೆ ಎನ್ನುವುದು ಮಕ್ಕಳ ದೇಹವು ಸಾಮಾನ್ಯ ವಯಸ್ಸಿಗಿಂತ ತುಂಬಾ ಬೇಗ ಪ್ರೌಢಾವಸ್ಥೆಯ ಲಕ್ಷಣಗಳನ್ನು ತೋರಿಸುವ ಪರಿಸ್ಥಿತಿ.

Early Puberty in Girls

ಸಾಮಾನ್ಯವಾಗಿ ಬಾಲಕಿಯರಲ್ಲಿ ಪ್ರೌಢಾವಸ್ಥೆಯು ದೇಹದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಸಂಭವಿಸುತ್ತವೆ. ಆದರೆ ಕೆಲವು ಮಕ್ಕಳಲ್ಲಿ ಈ ಪ್ರಕ್ರಿಯೆ ಬೇಗ ಆರಂಭವಾಗುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಅಮೆರಿಕದಲ್ಲಿ ಬಾಲಕಿಯರ ಮೊದಲ ಮಾಸಿಕ ಚಕ್ರ 1950 ಮತ್ತು 1960ರ ದಶಕಗಳಿಗಿಂತ ಸರಾಸರಿ ಆರು ತಿಂಗಳು ಬೇಗ ಆರಂಭವಾಗುತ್ತಿದೆ.

ಮಹಿಳಾ ಉದ್ಯೋಗಿಯ ಪಿರಿಯಡ್ಸ್ ಲೀವ್-ಮ್ಯಾನೇಜರ್ ವಾಟ್ಸಾಪ್ ಚಾಟ್ ವೈರಲ್; ನೆಟ್ಟಿಗರು ಹೇಳಿದ್ದೇನು?
ಮಹಿಳಾ ಉದ್ಯೋಗಿಯ ಪಿರಿಯಡ್ಸ್ ಲೀವ್-ಮ್ಯಾನೇಜರ್ ವಾಟ್ಸಾಪ್ ಚಾಟ್ ವೈರಲ್; ನೆಟ್ಟಿಗರು ಹೇಳಿದ್ದೇನು?

ಏಕೆ ಇಷ್ಟು ಬೇಗ ಪ್ರೌಢಾವಸ್ಥೆ ಆಗುತ್ತಿದೆ?

ತಜ್ಞರ ಪ್ರಕಾರ, ಇದಕ್ಕೆ ಒಂದೇ ಕಾರಣವಿಲ್ಲ. ಹಲವಾರು ಅಂಶಗಳು ಸೇರಿ ಈ ಸಮಸ್ಯೆಗೆ ಕಾರಣವಾಗುತ್ತಿವೆ. ದೇಹದಲ್ಲಿ ತೂಕ ಹೆಚ್ಚಾಗುವುದು ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚು ಕ್ಯಾಲೊರಿ, ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಅಂಶದ ಪ್ರಮಾಣ ಜಾಸ್ತಿಯಾಗುತ್ತದೆ. ವಿಶೇಷವಾಗಿ ಬಾಲಕಿಯರಲ್ಲಿ ದೇಹದಲ್ಲಿ ಅಧಿಕವಾದ ಕೊಬ್ಬು ಪ್ರೌಡಾವಸ್ಥೆ ಬೇಗ ಆರಂಭ ಅಗುವುದಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಪ್ಲಾಸ್ಟಿಕ್, ಕೀಟನಾಶಕ ಮತ್ತು ಕೆಲವು ರಾಸಾಯನಿಕ ವಸ್ತುಗಳಲ್ಲಿ ಕಂಡುಬರುವ "ಎಂಡೊಕ್ರೈನ್ ಡಿಸ್ರಪ್ಟರ್ಸ್" ಎಂಬ ರಾಸಾಯನಿಕಗಳು ದೇಹದ ಹಾರ್ಮೋನ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಇವುಗಳೂ ಕೂಡ ಅಕಾಲಿಕ ಪ್ರೌಡಾವಸ್ಥೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಬಿಸಿಲಿನ ತಾಪದಿಂದ ಬಚಾವಾಗಲು ಆಯುಷ್‌ ಸಚಿವಾಲಯ ನೀಡಿದ ಮಹತ್ವದ ಸಲಹೆಗಳು ಇಲ್ಲಿದೆ
ಬಿಸಿಲಿನ ತಾಪದಿಂದ ಬಚಾವಾಗಲು ಆಯುಷ್‌ ಸಚಿವಾಲಯ ನೀಡಿದ ಮಹತ್ವದ ಸಲಹೆಗಳು ಇಲ್ಲಿದೆ

ಪ್ರಮುಖ ಲಕ್ಷಣಗಳು?

ಅಕಾಲಿಕ ಪ್ರೌಡಾವಸ್ಥೆಯ ಪ್ರಮುಖ ಲಕ್ಷಣಗಳಲ್ಲಿ ಬಾಲಕಿಯರಲ್ಲಿ ಬೇಗನೆ ಸ್ತನಗಳ ಬೆಳವಣಿಗೆ, ಎತ್ತರದಲ್ಲಿ ತ್ವರಿತ ಬದಲಾವಣೆ, ದೇಹದ ವಾಸನೆ, ಕೂದಲಿನ ಬೆಳವಣಿಗೆ ಮತ್ತು ಕಡಿಮೆ ವಯಸ್ಸಿನಲ್ಲೇ ಮಾಸಿಕ ಚಕ್ರ ಆರಂಭವಾಗುವುದು ಹಲವಾರು ಪ್ರಕ್ರಿಯೆಗಳು ಸೇರಿವೆ.

ಪೋಷಕರು ಅಥವಾ ಮಕ್ಕಳ ವೈದ್ಯರು ಈ ಲಕ್ಷಣಗಳನ್ನು ಗಮನಿಸಿದರೆ ರಕ್ತ ಪರೀಕ್ಷೆಗಳ ಮೂಲಕ ಹಾರ್ಮೋನ್ ಪ್ರಮಾಣಗಳನ್ನು ಪರೀಕ್ಷಿಸಲಾಗುತ್ತದೆ. ಹಾರ್ಮೋನ್ ಹಂತಗಳು ಹೆಚ್ಚಾಗಿದ್ದರೆ "ಸೆಂಟ್ರಲ್ ಪ್ರಿಕೋಷಿಯಸ್ ಪ್ಯೂಬರ್ಟಿ" ಎಂದು ದೃಢಪಡಿಸಲಾಗುತ್ತದೆ.

ಮಾನಸಿಕ ಪರಿಣಾಮಗಳೂ ಈ ರೀತಿ ಇರುತ್ತವೆ

ವೈದ್ಯರ ಹೇಳಿಕೆ ಪ್ರಕಾರ, ಅಕಾಲಿಕ ಪ್ರೌಡಾವಸ್ಥೆಯಲ್ಲಿ ಕೇವಲ ದೈಹಿಕ ಬದಲಾವಣೆ ಮಾತ್ರ ಆಗುದಿಲ್ಲ. ಬದಲಿಗೆ ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ತುಂಬಾ ಚಿಕ್ಕ ವಯಸ್ಸಿನಲ್ಲಿ ಪ್ರೌಡಾವಸ್ಥೆ ಆರಂಭವಾದರೆ ಆತಂಕ, ಮುಜುಗರ, ಶಾಲೆಯಲ್ಲಿ ಬಲವಂತ ಮತ್ತು ಆತ್ಮವಿಶ್ವಾಸದ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಇದರಿಂದ ಮಕ್ಕಳ ಎತ್ತರದ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಮುಂದಿನ ಜೀವನದಲ್ಲಿ ಬೇಗ ಋತುಬಂಧ ಆಗುವ ಸಾಧ್ಯತೆಗಳೂ ಇವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಚಿಕಿತ್ಸೆ ಹೇಗೆ?

ಪೀಡಿಯಾಟ್ರಿಕ್ ಎಂಡೊಕ್ರೈನಾಲಜಿಸ್ಟ್‌ಗಳು "GnRH Analogues" ಎಂಬ ಔಷಧಿಗಳನ್ನು ಬಳಸಿ ಪ್ರೌಢಾವಸ್ಥೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಚಿಕಿತ್ಸೆ ನೀಡುತ್ತಾರೆ. ಇವುಗಳನ್ನು ಸಾಮಾನ್ಯವಾಗಿ "ಪ್ಯೂಬರ್ಟಿ ಬ್ಲಾಕರ್ಸ್" ಎಂದು ಕರೆಯಲಾಗುತ್ತದೆ. ಇಂಜೆಕ್ಷನ್ ಅಥವಾ ಇಂಪ್ಲಾಂಟ್ ರೂಪದಲ್ಲಿ ಈ ಚಿಕಿತ್ಸೆಗಳು ಲಭ್ಯವಿವೆ.

ಪೋಷಕರು ಏನು ಮಾಡಬೇಕು?

ಮಕ್ಕಳಲ್ಲಿ ಅಸಾಮಾನ್ಯ ದೈಹಿಕ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಮಕ್ಕಳ ಎಂಡೊಕ್ರೈನ್ ತಜ್ಞರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಸರಿಯಾದ ಸಮಯದಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡಿದರೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು ಎಂದು ತಜ್ಞರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+