Daily Horoscope: ಈ ರಾಶಿಯವರ ವೃತ್ತಿ ಬದುಕಿನಲ್ಲಿ ಬದಲಾವಣೆ, ಧನ ಲಾಭವಾಗುವುದು, ತಾಳ್ಮೆ ವಹಿಸಿದರೆ ಸಮಸ್ಯೆ ತಪ್ಪುವುದು

ಮೇಷ ರಾಶಿ : ಅನಿರೀಕ್ಷಿತ ಅವಕಾಶಗಳು ಎದುರಾಗುವುದು. ವೃತ್ತಿ ಅಥವಾ ಹಣಕಾಸಿನ ಬಗ್ಗೆ ನಿಮ್ಮ ದೃಷ್ಟಿಕೋನವೇ ಬದಲಾಗುವುದು. ಮಾನಸಿಕ ಶಕ್ತಿ ಹೆಚ್ಚಾಗುವುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸರಿಯಾಗಿ ಆಲೋಚಿಸಿ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.

ವೃಷಭ ರಾಶಿ : ಮಾಡುವ ಕೆಲಸದಲ್ಲಿ ತಾಳ್ಮೆ ಇರಲಿ. ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ನಿರ್ಧಾರದ ಬಗ್ಗೆ ದೃಢ ಸಂಕಲ್ಪವಿರಲಿ. ಹಣಕಾಸು ಅಥವಾ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸರಿಯಾದ ದಿನಚರಿ ಅನುಸರಿಸಿ.

Daily Horoscope

ಮಿಥುನ ರಾಶಿ : ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಶಕ್ತಿ ಬಲವಾಗಿರುತ್ತದೆ. ಹೊಸ ವಿಚಾರಗಳು ಹೊಸ ಅವಕಾಶಗಳನ್ನು ತೆರೆಯಲು ಸಹಾಯ ಮಾಡಬಹುದು. ಮಾತನಾಡುವಾಗ ತಾಳ್ಮೆ ಇರಲಿ.

ಕಟಕ ರಾಶಿ : ನಿರಾಶೆಯನ್ನು ಅನುಭವಿಸಬೇಕಾಗಬಹುದು. ನಿಮ್ಮ ಮಾತುಗಳಿಂದ ಎದುರಿಗಿರುವವರ ಮನಸ್ಸು ನೋಯಿಸದಂತೆ ನೋಡಿಕೊಳ್ಳಿ. ಕೋಪವನ್ನು ನಿಯಂತ್ರಿಸಬೇಕು. ತಾಳ್ಮೆ ಬಹಳ ಮುಖ್ಯವಾಗಿರುತ್ತದೆ.ಅನಗತ್ಯ ಸಮಸ್ಯೆಗಳನ್ನು ತಪ್ಪಿಸಿ.

ಸಿಂಹ ರಾಶಿ : ಇಂದು ಹೆಚ್ಚು ಆಶಾವಾದಿಗಳಾಗಿರುತ್ತೀರಿ. ವೈಯಕ್ತಿಕ ಅಥವಾ ವೃತ್ತಿಪರ ವಿಚಾರಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಪ್ರೀತಿಪಾತ್ರರೊಂದಿಗೆ ಮೂಡಿದ ತಪ್ಪುಗ್ರಹಿಕೆಯನ್ನು ತ್ವರಿತವಾಗಿ ಪರಿಹರಿಸಿಕೊಳ್ಳುವುದು ಒಳ್ಳೆಯದು.

ಕನ್ಯಾರಾಶಿ : ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯದ ಭಾವನೆ ಇರುವುದು. ನಿಮ್ಮ ಜೀವನವನ್ನು ಸುತ್ತುತ್ತಿರುವ ಕೆಟ್ಟ ಶಕ್ತಿಯ ಬಗ್ಗೆ ಜಾಗರೂಕರಾಗಿರಬೇಕು. ಕೆಲಸ ಕಾರ್ಯಗಳಲ್ಲಿ ಹಿನ್ನೆಡೆಯಾಗುವುದು. ಮನಸ್ಸಿಗೆ ನೋವು ಉಂಟಾಗಬಹುದು.

ತುಲಾ ರಾಶಿ : ಅನೇಕ ಹಂತಗಳಲ್ಲಿ ಸಂತೋಷವಾಗಿರುತ್ತೀರಿ. ಕೆಲಸದ ವಿಷಯಕ್ಕೆ ಬಂದಾಗ, ಯಾವುದೇ ಅಡೆತಡೆಗಳಿಲ್ಲದೆ ಗುರಿ ಸಾಧಿಸುವಿರಿ. ವೃತ್ತಿಜೀವನದಲ್ಲಿ ದೊಡ್ಡ ಬದಲಾವಣೆಗಳಾಗುವುದು. ಗುರಿಗಳಿಗೆ ಹತ್ತಿರವಾಗಲು ಈ ಅದೃಷ್ಟದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ವೃಶ್ಚಿಕ ರಾಶಿ : ಇಂದು ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಭಿನ್ನಾಭಿಪ್ರಾಯವು ನೀವು ನಿರೀಕ್ಷಿಸದ ತಿರುವು ಪಡೆದು ಸಮಸ್ಯೆ ಉಂಟು ಮಾಡಬಹುದು. ಆತುರದ ನಿರ್ಧಾರಗಳು ಸಮಸ್ಯೆಯನ್ನು ಉಂಟು ಮಾಡಬಹುದು.

ಧನು ರಾಶಿ : ಹಲವಾರು ರಂಗಗಳಲ್ಲಿ ನಿರಾಶೆ ಮತ್ತು ಹತಾಶೆಯನ್ನು ಅನುಭವಿಸಬಹುದು. ನಿಮಗಾಗಿ ಹೊಂದಿಸಿಕೊಂಡ ಯೋಜನೆಗಳು ಮತ್ತು ಉದ್ದೇಶಗಳನ್ನು ಸಾಧಿಸುವುದು ಕಷ್ಟಕರವಾಗಬಹುದು. ಈ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ. ಅವು ಕೇವಲ ತಾತ್ಕಾಲಿಕ.

ಮಕರ ರಾಶಿ : ಮಾತನಾಡುವ ವೇಳೆ ಸ್ಪಷ್ಟತೆ ಇರಲಿ. ಇಂದು ಮಾಡುವ ಪ್ರಯತ್ನಕ್ಕೆ ಭವಿಷ್ಯದಲ್ಲಿ ಫಲ ಸಿಗುವುದು. ಹಣಕಾಸು ವಿಚಾರದಲ್ಲಿ ಶಿಸ್ತು ಬಹಳ ಮುಖ್ಯ. ಇಲ್ಲವಾದರೆ ಸಮಸ್ಯೆ ಎದುರಾಗುವುದು.

ಕುಂಭ ರಾಶಿ : ಕಳೆದ ಕೆಲವು ದಿನಗಳಿಂದ ನಿಮ್ಮೊಳಗೆ ಉಂಟಾಗುತ್ತಿರುವ ಕೆಲವು ಆಂತರಿಕ ಗೊಂದಲಗಳಿಗೆ ಪರಿಹಾರ ಸಿಗುವುದು. ಸಣ್ಣ ಸಣ್ಣ ವಿಷಯಗಳಿಗೂ ಬೇಸರವಾಗುವುದು. ಭಾವನೆಗಳ ಮೇಲೆ ಹಿಡಿತವಿರಲಿ.

ಮೀನ ರಾಶಿ : ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಸಹಾಯ ಸಿಗುವುದು. ಯಾವುದೇ ವಿಚಾರದ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+