10.09 ಸೆಕೆಂಡುಗಳಲ್ಲಿ 100 ಮೀಟರ್​ ಓಟ: ಹೊಸ ದಾಖಲೆ ಬರೆದ ಗುರಿಂದರ್‌ವೀರ್ ಸಿಂಗ್‌ಗೆ ಭಾರತೀಯ ನೌಕಾಪಡೆ ಅಭಿನಂದನೆ

ಭಾರತೀಯ ನೌಕಾದಳದ ಪೆಟ್ಟಿ ಆಫೀಸರ್ ಗುರಿಂದರ್‌ವೀರ್, ಸಿಂಗ್ ಪುರುಷರ 100 ಮೀಟರ್ ಓಟದಲ್ಲಿ ಬರೋಬ್ಬರಿ 10.09 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. ಶನಿವಾರ ರಾಂಚಿಯಲ್ಲಿ ನಡೆದ ಫೆಡರೇಶನ್ ಕಪ್‌ನ 100 ಮೀಟರ್ ಫ್ರೀಸ್ಟೈಲ್ ಓಟದಲ್ಲಿ ಇವರು ಚಿನ್ನದ ಪದಕ ಗೆದ್ದಿದ್ದಾರೆ. ಅಥ್ಲೀಟ್ ಗುರಿಂದರ್‌ವೀರ್ ಸಿಂಗ್ ಅವರ ಸಾಧನೆಗೆ ಭಾರತೀಯ ನೌಕಾಪಡೆ ಶ್ಲಾಘನೆ ವ್ಯಕ್ತಪಡಿಸಿದೆ. ಗುರಿಂದರ್‌ವೀರ್ ಸಿಂಗ್ ಅವರನ್ನು "ಭಾರತದ ಅತ್ಯಂತ ವೇಗದ ವ್ಯಕ್ತಿ" ಎಂದು ಬಣ್ಣಿಸಿದೆ.

ಭಾರತದ ಅತ್ಯಂತ ವೇಗದ ವ್ಯಕ್ತಿ:

ಗುರಿಂದರ್‌ವೀರ್, ಪುರುಷರ 100 ಮೀಟರ್ ಓಟದಲ್ಲಿ 10.10 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಗುರಿ ಕ್ರಮಿಸಿದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 10.09 ಸೆಕೆಂಡುಗಳಲ್ಲಿ ಫಿನಿಶಿಂಗ್‌ ಪಾಯಿಂಟ್‌ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯೊಂದಿಗೆ ಜಯಗಳಿಸಿದ್ದಾರೆ. ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ ಗುರಿಂದರ್‌ವೀರ್ ಅವರನ್ನು ಭಾರತೀಯ ನೌಕಾಪಡೆ ಎಕ್ಸ್ ಪೋಸ್ಟ್‌ನಲ್ಲಿಅಭಿನಂದಿಸಿದೆ. ಗುರಿಂದರ್‌ವೀರ್ ಅವರನ್ನು "ಭಾರತದ ಅತ್ಯಂತ ವೇಗದ ವ್ಯಕ್ತಿ" ಎಂದು ನೌಕಾಪಡೆ ಕರೆದಿದೆ. ಅವರು ತಮ್ಮ ಉತ್ತಮ ಪ್ರದರ್ಶನದ ಮೂಲಕ 2026 ರ ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಳಿಸಿದ್ದಾರೆ ಎಂದು ಶ್ಲಾಘಿಸಿದೆ.

Gurindervir Singh

ಭಾರತೀಯ ನೌಕಾಪಡೆ ಶ್ಲಾಘನೆ:

ಭಾರತದ ಅತ್ಯಂತ ವೇಗದ ವ್ಯಕ್ತಿ ಬಿಳಿ ಬಣ್ಣದ ಉಡುಪನ್ನು ಧರಿಸುತ್ತಾನೆ ಎಂದು ಭಾರತೀಯ ನೌಕಾಪಡೆಯು X ನಲ್ಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ರಾಂಚಿಯಲ್ಲಿ ನಡೆಯುತ್ತಿರುವ 29ನೇ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಸ್ಪ್ರಿಂಟ್‌ನಲ್ಲಿ 10.09 ಸೆಕೆಂಡುಗಳಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸುವ ಮೂಲಕ ಭಾರತೀಯ ನೌಕಾದಳದ ಪೆಟ್ಟಿ ಆಫೀಸರ್ ಗುರಿಂದರ್‌ವೀರ್ ಸಿಂಗ್ ಇತಿಹಾಸ ಬರೆದಿದ್ದಾರೆ ಎಂದು ಹೆಮ್ಮೆ ಪಟ್ಟಿದೆ. ಈ ಗಮನಾರ್ಹ ಪ್ರದರ್ಶನದೊಂದಿಗೆ, ಅವರು ಏಷ್ಯನ್ ಗೇಮ್ಸ್ ಮತ್ತು 2026 ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಹೇಳಿದೆ. ನಮ್ಮ ಚಾಂಪಿಯನ್ ಸ್ಪ್ರಿಂಟರ್‌ನ ಉತ್ಸಾಹ, ವೇಗ ಮತ್ತು ಸಮರ್ಪಣೆಗೆ ಭಾರತೀಯ ನೌಕಾಪಡೆ ವಂದಿಸುತ್ತದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

RCB: ಐಪಿಎಲ್‌ 2026 ಕ್ಲಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಆರ್‌ಸಿಬಿ ಗೂಡು ತೊರೆದ ಸ್ಟಾರ್ ಆಟಗಾರ
RCB: ಐಪಿಎಲ್‌ 2026 ಕ್ಲಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಆರ್‌ಸಿಬಿ ಗೂಡು ತೊರೆದ ಸ್ಟಾರ್ ಆಟಗಾರ

ಐತಿಹಾಸಿಕ ದಾಖಲೆ ಸೃಷ್ಟಿ:

25 ವರ್ಷದ ಗುರಿಂದರ್‌ವೀರ್, ಸೆಮಿಫೈನಲ್‌ನಲ್ಲಿ ಅನಿಮೇಶ್ ಕುಜುರ್ ಅವರ ಹಿಂದಿನ ರಾಷ್ಟ್ರೀಯ ದಾಖಲೆಗಿಂತ 0.06 ಸೆಕೆಂಡುಗಳು ಕಡಿಮೆ ಅಂತರದಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಗುರಿಂದರ್‌ವೀರ್ ಸೆಮಿಫೈನಲ್‌ನಲ್ಲಿ 10.17 ಸೆಕೆಂಡುಗಳ ದಾಖಲೆ ಬರೆದಿದ್ದರು. ಆದರೆ ಈ ದಾಖಲೆಯನ್ನು ಅನಿಮೇಶ್ 10.15 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಮುರಿದಿದರು. ಆದರೆ ಫೈನಲ್‌ನಲ್ಲಿ ಮತ್ತೆ ಗುರಿಂದರ್‌ವೀರ್ 10.09 ಸೆಕೆಂಡುಗಳ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದರು.

Dinesh Karthik: ವೈಭವ್ ಸೂರ್ಯವಂಶಿಯನ್ನ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಬೇಡಿ: ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್
Dinesh Karthik: ವೈಭವ್ ಸೂರ್ಯವಂಶಿಯನ್ನ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಬೇಡಿ: ಆರ್‌ಸಿಬಿ ಕೋಚ್ ದಿನೇಶ್ ಕಾರ್ತಿಕ್

ಆದರೆ ಇಬ್ಬರೂ ಓಟಗಾರರು ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅಲ್ಲಿ ಪುರುಷರ 100 ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+