ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಷನ್-150' ನಂತರ 'ಮಿಷನ್-300' ಬಿಜೆಪಿಯ ಹೊಸ ಗುರಿ

By Manjunatha
|
Google Oneindia Kannada News

Recommended Video

ಮಿಷನ್ 150 ನಂತರ ಮಿಷನ್ 300 ಗೆ ಅಮಿತ್ ಶಾ ( ಬಿಜೆಪಿ ) ಪಡೆ ಟಾರ್ಗೆಟ್

ನವ ದೆಹಲಿ, ಜೂನ್ 22: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 'ಮಿಷನ್ 150' ಅಡಿಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿಯು ಲೋಕಸಭೆ ಚುನಾವಣೆಗೆ 'ಮಿಷನ್ 300' ಹೆಸರಲ್ಲಿ ಅಖಾಡಕ್ಕಿಳಿಯಲಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈ ಚುನಾವಣೆಯ ಬಗ್ಗೆ ಕಠಿಣ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದು, ಕಾಶ್ಮೀರದಲ್ಲಿ ಮೈತ್ರಿ ಮುರಿದುಕೊಳ್ಳುವ ನಿರ್ಣಯವೂ ಸಹ ಇದೇ ಕಾರ್ಯತಂತ್ರದ ಭಾಗ ಎನ್ನಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸರ್ವಪಕ್ಷ ಸಭೆ ಕರೆದ ರಾಜ್ಯಪಾಲ ವೋಹ್ರಾ ಜಮ್ಮು ಕಾಶ್ಮೀರದಲ್ಲಿ ಸರ್ವಪಕ್ಷ ಸಭೆ ಕರೆದ ರಾಜ್ಯಪಾಲ ವೋಹ್ರಾ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಯೋಜನೆಯೊಂದಿಗೆ ಬಂದಿದ್ದ ಅಮಿತ್ ಶಾ ನೇತೃತ್ವದ ಬಿಜೆಪಿ ಪಡೆ ಇಲ್ಲಿ ಗಳಿಸಿದ್ದು 104 ಮಾತ್ರ. ಆದರೆ ಇದು ಕಡಿಮೆ ಸಾಧನೆಯೇನೂ ಅಲ್ಲ. ದುರಾದೃಷ್ಟವಶಾತ್ ಅವರಿಗೆ ಅಧಿಕಾರಿ ಹಿಡಿಯಲು ಸಾಧ್ಯವಾಗಲಿಲ್ಲವಷ್ಟೆ.

BJP set mission 300 goal for MP elections

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರಿ ಪ್ರತಿರೋಧವನ್ನು ವಿರೋಧ ಪಕ್ಷಗಳಿಂದ ಎದುರಿಸಬೇಕಾಗಿ ಬರುವ ಸಾಧ್ಯತೆ ಹೆಚ್ಚಿರುವ ಕಾರಣ ಅಮಿತ್ ಶಾ ಅವರು 'ಮಿಷನ್ 300' ಗುರಿಯನ್ನು ಹೊಂದಿದ್ದು ಶತಾಯಗತಾಯ ಮತ್ತೆ ಅಧಿಕಾರ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿದೆ.

ಬಿಜೆಪಿ ಕಚೇರಿಯಲ್ಲಿ ಯೋಗದ ಕಸರತ್ತು ನಡೆಸಿದ ಯಡಿಯೂರಪ್ಪ ಬಿಜೆಪಿ ಕಚೇರಿಯಲ್ಲಿ ಯೋಗದ ಕಸರತ್ತು ನಡೆಸಿದ ಯಡಿಯೂರಪ್ಪ

ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ದಾಖಲೆಯ 282 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಮಹಾಮೈತ್ರಿಕೂಟಕ್ಕೆ ಮುಂದಾಗಿರುವುದು ಬಿಜೆಪಿಯ ಸುಲಭ ಗೆಲುವಿನ ಹಾದಿಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ.

English summary
BJP sets mission 300 goal for upcoming lokasabha elections. It has failed sto reach mission 150 in Karantaka assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X