ರಾಜ್ಯಸಭೆಗೆ ಗುಡ್ ಬೈ ಹೇಳಿದ ನವಜ್ಯೋತ್ ಸಿಂಗ್ ಸಿಧು

Posted By:
Subscribe to Oneindia Kannada

ನವದೆಹಲಿ, ಜುಲೈ 18: ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ನವಜ್ಯೋತ್ ಸಿಂಗ್ ಸಿಧು ಅವರು ಮೇಲ್ಮನೆ ಸದಸ್ಯತ್ವಕ್ಕೆ ಸೋಮವಾರದಂದು ರಾಜೀನಾಮೆ ನೀಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ತಮ್ಮ ಅಮೃತಸರ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

BJP Rajya Sabha MP Navjot Sidhu resigns, likely to join AAP

ಸಿಧು ಅವರು ಪಂಜಾಬಿನ ಯಾವುದೇ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಸಿದ್ದವಿಲ್ಲ ಎಂದಿದ್ದರು. ಇದಕ್ಕೆ ಒಪ್ಪಿದ ಬಿಜೆಪಿ ಹೈ ಕಮಾಂಡ್ ಸಿಧು ಅವರ ಮುಂದೆ ದೆಹಲಿ, ಚಂಡೀಗಢ ಅಥವಾ ಕುರುಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಿತ್ತು.[ಮಾರಕ ರೋಗಕ್ಕೆ ಈಡಾದ ಸಿಧು, ಮೋದಿ ಅವರಿಂದ ಪ್ರಾರ್ಥನೆ]

ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಿಧು ಅವರಿಗೆ ಮುಂದಿನ ಬಾರಿ ಬಿಜೆಪಿ ಟಿಕೆಟ್ ಸಿಗುವುದು ಕಷ್ಟ ಎನಿಸಿತ್ತು. 2014ರ ಚುನಾವಣೆಗೆ ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ನವಜ್ಯೋತ್ ಸಿಂಗ್ ಸಿಧು ಅವರಿಗೆ ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತ ಸಿಧು ಅವರ ಪತ್ನಿ ಕೌರ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದರು. [ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!]

ಮೂಲಗಳ ಪ್ರಕಾರ, ಸಿಧು ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ. ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಕೌರ್ ಅವರು ಕೂಡಾ ಸದ್ಯದಲ್ಲೇ ಬಿಜೆಪಿ ತೊರೆದು ಎಎಪಿ ಸೇರುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior Bhartiya Janta Party (BJP) leader and nominated Rajya Sabha MP Navjot Singh Sidhu resigned from the Upper House on Monday.
Please Wait while comments are loading...