ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯಿಂದ ಮುರಳಿ ಮನೋಹರ್ ಜೋಶಿ ಅಭ್ಯರ್ಥಿ?

Posted By:
Subscribe to Oneindia Kannada

ನವದೆಹಲಿ, ಜೂನ್ 14: ಬಿಜೆಪಿಯ ಹಿರಿಯ ನಾಯಕ ಡಾ. ಮುರಳಿ ಮನೋಹರ್ ಜೋಶಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಮುಂದಿನ ವರ್ಷ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಈ ಬಗ್ಗೆ ಇಂಡಿಯಾ ಟುಡೇ ವರದಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವಥ್ ಹಾಗೂ ಇತರೆ ಹಿರಿಯ ನಾಯಕರ ಜೊತೆ 82 ವರ್ಷ ವಯಸ್ಸಿನ ಜೋಶಿ ಅವರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. [ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?]

ಮೇ 22ರಂದು ನಂ 7, ರೇಸ್ ಕೋರ್ಸ್ ರಸ್ತೆಯಲ್ಲಿ ಭೋಜನ ಕೂಟದಲ್ಲಿ ಪ್ರಧಾನಿ ಮೋದಿ ಅವರ ಜೊತೆ ಜೋಶಿ ಅವರು ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ.

BJP to project Dr Murli Manohar Joshi as next president of India: Reports

ಇದಾದ ಬಳಿಕ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಈ ಬಗ್ಗೆ ಮೋಹನ್ ಭಾಗ್ವಥ್ ಅವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ನಂತರ ಜೂನ್ 6 ಹಾಗೂ 7ರಂದು ಮುಂಬೈನ ಆರೆಸ್ಸೆಸ್ ನಾಯಕರೊಂಡಿಗೆ ಚರ್ಚೆ ನಡೆಸಲಾಗಿದೆ. [ಅಧಿಕಾರ ಇದ್ರೂ ನಿರುದ್ಯೋಗಿಯಂತಾದ ಅಡ್ವಾಣಿ, ಎಂಎಂ ಜೋಶಿ]

ಜೋಶಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೇರಿಸಲು ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಚ್ಛಿಸಿದ್ದು, ಇದಕ್ಕೆ ಆರೆಸ್ಸೆಸ್ ನಾಯಕರ ಸಂಪೂರ್ಣ ಬೆಂಬಲ ಸಿಕ್ಕಿದೆ.

ಮುಂದಿನ ವರ್ಷ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಬ್ರಾಹ್ಮಣ ಪರಿವಾರದ ಮತಗಳನ್ನು ಸೆಳೆಯಲು ಇದರಿಂದ ಅನುಕೂಲವಾಗಲಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರ ಅವಧಿ 2017ರ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP has projected its veteran leader Dr Murli Manohar Joshi as the candidate for the next year presidential elections in India.
Please Wait while comments are loading...