ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಅಜಂಖಾನ್ ನೀಡಿದ ಸಲಹೆ

Posted By:
Subscribe to Oneindia Kannada

ಲಕ್ನೋ, ಡಿ 7: ಸಚಿವರಾದ ಮೇಲೆ ಜನಪರ ಕೆಲಸ ಮಾಡಿ ಜನಪ್ರಿಯ ಪಡೆಯುವುದಕ್ಕಿಂತ ಹೆಚ್ಚಾಗಿ ವಿವಾದಕಾರಿ ಹೇಳಿಕೆ ನೀಡುವುದರಲ್ಲೇ ತೃಪ್ತಿ ಪಡುತ್ತಿರುವ ಉತ್ತರಪ್ರದೇಶ ಕ್ಯಾಬಿನೆಟ್ ಸಚಿವ ಮತ್ತೊಂದು ವಿವಾದಕಾರಿ ಹೇಳಿಕೆ ನೀಡಿ ಅಸಹಿಷ್ಣುತೆ ಮೆರೆದಿದ್ದಾರೆ.

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ, ಧ್ವಂಸ ಮಾಡಲಾಗಿರುವ ಬಾಬ್ರಿ ಮಸೀದಿಯನ್ನು ಮತ್ತೆ ನಿರ್ಮಿಸಬೇಕೆಂದು ಉತ್ತರಪ್ರದೇಶದ ಸಚಿವ ಅಜಂ ಖಾನ್ ಹೇಳಿದ್ದಾರೆ.

ಭಾನುವಾರ (ಡಿ 6) ರಾಂಪುರದಲ್ಲಿ ಬಾಬ್ರಿ ಮಸೀದಿ ಧ್ವಂಸವಾದ 23ನೇ ಕರಾಳ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅಜಂ ಖಾನ್, ದೇಶಕ್ಕೆ ಉಗ್ರರಿಗಿಂತ ಹೆಚ್ಚಿನ ಅಭದ್ರತೆ ಇರುವುದು ಆರ್ ಎಸ್ ಎಸ್ ಸಂಘಟನೆಯಿಂದ ಎಂದು ಟೀಕಿಸಿದ್ದಾರೆ.

ಇತ್ತ ಬಾಬ್ರಿ ಧ್ವಂಸ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಹೇಳಿಕೆ ನೀಡಿ, ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ಸದ್ಯದಲ್ಲೇ ಅಂತಿಮಗೊಳಿಸಲಿದ್ದೇವೆಂದು ಹೇಳಿದೆ.

ಮೊದಲು ಉತ್ತರಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಸರಿಪಡಿಸಿ ಉತ್ತಮ ಸರಕಾರ ನೀಡುವುದನ್ನು ಕಲಿಯಿರಿ ಎಂದು ಅಜಂ ಖಾನ್ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

RSSನವರು ಸಲಿಂಗಕಾಮಿಗಳು, ಮುಂದೆ ಓದಿ..

ಅಜಂ ಖಾನ್

ಅಜಂ ಖಾನ್

ಬಾಬ್ರಿ ಮಸೀದಿ ಧ್ವಂಸವಾಗಿ ಇಂದಿಗೆ 23 ವರ್ಷವಾಗಿದೆ. ಆ ಕರಾಳ ನೆನಪು ಭಾರತೀಯರೆಲ್ಲರನ್ನೂ ಕಾಡುತ್ತಿದೆ. ಮತ್ತೆ ಬಾಬ್ರಿ ಮಸೀದಿ ನಿರ್ಮಿಸಿ, ಆರ್ ಎಸ್ ಎಸ್ ಸಂಘಟನೆಯನ್ನು ನಿಷೇಧಗೊಳಿಸಿದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಜಂ ಖಾನ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ತಿರುಗೇಟು

ಬಿಜೆಪಿ ತಿರುಗೇಟು

ದೇಶಕ್ಕೆ ಸ್ವಾತಂತ್ಯ ಬಂದ ನಂತರ ಯಾವೊಬ್ಬ ಪ್ರಧಾನಿಯೂ, ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಹೇಳಲಿಲ್ಲ. ಅಜಂ ಖಾನ್ ಹೇಳಿಕೆ ಒಂದು ವರ್ಗವನ್ನು ಓಲೈಸಲು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.ದೇಶಕ್ಕೆ ಸ್ವಾತಂತ್ಯ ಬಂದ ನಂತರ ನೆಹರೂ ಬಿಟ್ಟರೆ ಯಾವೊಬ್ಬ ಪ್ರಧಾನಿಯೂ, ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಹೇಳಲಿಲ್ಲ. ಅಜಂ ಖಾನ್ ಹೇಳಿಕೆ ಒಂದು ವರ್ಗವನ್ನು ಓಲೈಸಲು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ

ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ

ಹಿಂದೂ ಸಂಘಟನೆಯ ಮುಖಂಡರೊಬ್ಬರು ಪ್ರವಾದಿ ಮೊಹಮ್ಮದ್ ಬಗ್ಗೆ ಕೇವಲವಾಗಿ ಮಾತನ್ನಾಡಿದ್ದಾರೆ. ಇದಕ್ಕೆಲ್ಲ ಪ್ರತಿಕ್ರಿಯೆ ನೀಡುವುದಕ್ಕೆ ನಮ್ಮ ಸಂಸ್ಕೃತಿ ಅವಕಾಶ ನೀಡುವುದಿಲ್ಲ. ದೆಹಲಿ ಮತ್ತು ಬಿಹಾರದಲ್ಲಿ ಬಿಜೆಪಿ ಪರಾಭವಗೊಂಡ ನಂತರ ದ್ವೇಷ ರಾಜಕಾರಣದ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಮುಂದಾಗುತ್ತಿದೆ - ಅಜಂ ಖಾನ್.

RSSನವರು ಸಲಿಂಗಕಾಮಿಗಳು

RSSನವರು ಸಲಿಂಗಕಾಮಿಗಳು

ದೇಶದಲ್ಲಿ ಇಂದು ಕೋಮುಗಲಭೆ ಹೆಚ್ಚಾಗಲು ಮತ್ತು ಅಸಹಿಷ್ಣುತೆಗೆ ಆರ್ ಎಸ್ ಎಸ್ ಸಂಘಟನೆ ಪ್ರಮುಖ ಕಾರಣ. ಈ ಸಂಘಟನೆಯವರೆಲ್ಲಾ ಸಲಿಂಗಕಾಮಿಗಳು, ಭಯೋತ್ಪಾದಕರು. ಈ ಸಂಘಟನೆಯನ್ನು ನಿಷೇಧಿಸಿದರೆ ದೇಶದಲ್ಲಿ ಶಾಂತಿ, ನೆಮ್ಮದಿ ತಾನಗಿಯೇ ನೆಲೆಸಲಿದೆ - ಅಜಂ ಖಾನ್.

ಅಯೋಧ್ಯೆಯಲ್ಲಿ ರಾಮ ಮಂದಿರ

ಅಯೋಧ್ಯೆಯಲ್ಲಿ ರಾಮ ಮಂದಿರ

ಹಿಂದೂ ಸಂಘಟನೆಗಳು ಒಟ್ಟಾಗಿ ಚರ್ಚಿಸಿ, ರಾಮ ಮಂದಿರ ನಿರ್ಮಾಣ ಸಂಬಂಧ ದಿನಾಂಕ ಅಂತಿಮಗೊಳಿಸಲಿದ್ದೇವೆ. ಆ ದಿನಾಂಕವನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೂ ತಿಳಿಸಲಿದ್ದೇವೆ. ಒಂದು ವೇಳೆ ಪ್ರಧಾನಿಯವರಿಂದ ಖಚಿತ ಭರವಸೆ ಸಿಗದೇ ಇದ್ದಲ್ಲಿ, ಮುಂದಿನ ಜನವರಿಯಿಂದ ನಮ್ಮ ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ಸಂಘಟನೆಯ ಪ್ರಮುಖರೊಬ್ಬರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP again will come to power in centre, if Babri mosque rebuilt, Uttara Pradesh Cabinet Minister Azam Khan.
Please Wait while comments are loading...