LIVE: 5 ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ನವದೆಹಲಿ, ಜನವರಿ 04: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. 2017ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ನಸೀಮ್ ಜೈದಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣಾ ಆಯೋಗ ರಾಜ್ಯಗಳಲ್ಲಿನ ಚುನಾವಣಾ ಸಿದ್ಧತೆ, ಮತದಾರರ ಪಟ್ಟಿ ಮತ್ತು ಕಾನೂನು ಪರಿಪಾಲನೆಯ ಕುರಿತು ಮಂಗಳವಾರ ಸಭೆ ನಡೆಸಲಾಯಿತು. ಆಯೋಗವು ಈಗಾಗಲೇ ರಾಜ್ಯಗಳಿಗೆ ನೋಟಿಸ್ ಕಳುಹಿಸಿದ್ದು, ನಿಯಮ ಮತ್ತು ನಿರ್ಬಂಧಗಳ ಕುರಿತು ಪಟ್ಟಿಯಲ್ಲಿ ತಿಳಿಸಿದೆ.
ನಸೀಮ್ ಜೈದಿ ಸುದ್ದಿಗೋಷ್ಠಿ ಮುಖ್ಯಾಂಶಗಳು:
* ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
* ಐದು ರಾಜ್ಯಗಳಲ್ಲೂ ಜನವರಿ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
* ಗೋವಾದಲ್ಲಿ ಫೆಬ್ರವರಿ 4ರಂದು ಮತದಾನ.(ಒಟ್ಟು 40 ಅಸೆಂಬ್ಲಿ ಕ್ಷೇತ್ರ)
* ಪಂಜಾಬ್ ನ 117 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿಫೆಬ್ರವರಿ 4ರಂದು ಮತದಾನ.
* ಉತ್ತರಾಖಂಡ್ ರಾಜ್ಯದಲ್ಲಿ ಫೆಬ್ರವರಿ 17ರಂದು ಮತದಾನ.(70 ಕ್ಷೇತ್ರ)
* ಮಣಿಪುರದಲ್ಲಿ 60 ಸ್ಥಾನಗಳಿಗೆ ಎರಡು ಹಂತದಲ್ಲಿ ಮತದಾನ, ಮಾರ್ಚ್ 4 ಹಾಗೂ ಮಾರ್ಚ್ 8.
* ಉತ್ತರಪ್ರದೇಶದಲ್ಲಿ 7 ಹಂತದಲ್ಲಿ ಮತದಾನ.
ಮೊದಲ ಹಂತ: ಫೆಬ್ರವರಿ 11
ಎರಡನೇ ಹಂತ : ಫೆಬ್ರವರಿ 15
ಮೂರನೇ ಹಂತ : ಫೆಬ್ರವರಿ 19
ನಾಲ್ಕನೇ ಹಂತ: ಫೆಬ್ರವರಿ 23
ಐದನೇ ಹಂತ: ಫೆಬ್ರವರಿ 27
ಆರನೇ ಹಂತ : ಮಾರ್ಚ್ 04
ಏಳನೇ ಹಂತ: ಮಾರ್ಚ್ 08
* ಮಾರ್ಚ್ 11 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
* ಎಲ್ಲಾ ಐದು ರಾಜ್ಯಗಳಲ್ಲೂ ಮತಯಂತ್ರದಲ್ಲಿ NOTA (ನೋಟಾ) ಬಟನ್/ಚಿನ್ಹೆ ಇರುತ್ತದೆ.
Electoral roll of Goa will be published on Jan 5, Manipur on Jan 12, Punjab Jan 5, Uttarakhand on Jan 10 and UP on Jan 12: CEC Nasim Zaidi pic.twitter.com/cIZFgY5FrE
— ANI (@ANI_news) January 4, 2017
* ಅಭ್ಯರ್ಥಿಗಳ ಆಯ್ಕೆ ಸುಲಭಗೊಳಿಸಲು ಒಂದೇ ಚಿನ್ಹೆ, ಹೆಸರು ಗೊಂದಲ ನಿವಾರಣೆಗಾಗಿ ಅಭ್ಯರ್ಥಿಗಳ ಭಾವಚಿತ್ರವನ್ನು ಮತಯಂತ್ರದಲ್ಲಿ ಮುದ್ರಿಸಲಾಗುತ್ತದೆ.
1.85 lakh polling stations to be in operation for Assembly Elections to the five states: CEC Nasim Zaidi pic.twitter.com/UXBBnVYJEZ
— ANI (@ANI_news) January 4, 2017
ಖರ್ಚು ವೆಚ್ಚ ಮಿತಿ: ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ್ ನ ಅಭ್ಯರ್ಥಿಗಳಿಗೆ 28 ಲಕ್ಷ ರು ಹಾಗೂ ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ 20 ಲಕ್ಷ ರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications