'ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ ವಯಸ್ಕರಿಗೆ ಲಸಿಕೆ ಹಾಕಬಹುದು': ತಜ್ಞರ ಸಮಿತಿ ಮುಖ್ಯಸ್ಥ
ನವದೆಹಲಿ, ಜು.09: "ಭಾರತದ ಸಂಪೂರ್ಣ ವಯಸ್ಕ ಜನಸಂಖ್ಯೆಗೆ ಡಿಸೆಂಬರ್ ವೇಳೆಗೆ ಕೋವಿಡ್ ವಿರುದ್ಧ ಲಸಿಕೆ ನೀಡಲಾಗುತ್ತದೆ. ಸರ್ಕಾರವು ತನ್ನ ಗುರಿಯನ್ನು ಪೂರೈಸಲು ಸಾಧ್ಯವಾಗುತ್ತದೆ," ಎಂದು ಲಸಿಕೆ ನಿರ್ವಹಣೆ ರಾಷ್ಟ್ರೀಯ ತಜ್ಞರ ಗುಂಪಿನ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ.ಎನ್.ಕೆ.ಅರೋರಾ, "ಭಾರತ ಸರ್ಕಾರವು ಲಸಿಕೆ ಅಭಿಯಾನದ ತನ್ನ ಗುರಿಯನ್ನು ಪೂರೈಸಲು ಸಾಧ್ಯವಾಗುತ್ತದೆ. ಆದರೆ ಇದು ಮುಂಬರುವ ತಿಂಗಳುಗಳಲ್ಲಿ ನಿರೀಕ್ಷಿತ ಲಸಿಕೆ ಪೂರೈಕೆಯಲ್ಲಿನ ಹೆಚ್ಚಳವನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ.
"ಆದರೆ ಲಸಿಕೆ ಆಡಳಿತ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಾಜ್ಯಗಳು ಸಹಕರಿಸಬೇಕು. ಲಸಿಕೆಗಳ ಲಭ್ಯತೆಯಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

ಕೋವಿಡ್ ಲಸಿಕೆ ಲಭ್ಯತೆಯಲ್ಲಿ ಹೆಚ್ಚಳ
"ಜೂನ್ ಮತ್ತು ಜುಲೈನಲ್ಲಿ ಲಸಿಕೆ ಲಭ್ಯತೆಯಲ್ಲಿನ ಹೆಚ್ಚಳ ಕಂಡುಬಂದಿದೆ. ದೇಶವು ಮೇ ವರೆಗೆ ತಿಂಗಳಿಗೆ 5.6 ಕೋಟಿ ಡೋಸೇಜ್‌ಗಳನ್ನು ಪಡೆದುಕೊಂಡಿದೆ, ಈಗ ಅದು 10 ರಿಂದ 12 ಕೋಟಿ ಡೋಸೇಜ್ ಪಡೆಯುತ್ತಿದೆ. ಮುಂದಿನ ತಿಂಗಳು ಅದು 16 ರಿಂದ 18 ಕೋಟಿಗಳ ಸಮೀಪದಲ್ಲಿರಬೇಕು. ಸೆಪ್ಟೆಂಬರ್‌ನಿಂದ ನಾವು 30 ಕೋಟಿ ಪ್ಲಸ್ ಡೋಸ್‌ಗಳನ್ನು ಹೊಂದಿರಬೇಕು," ಎಂದು ಡಾ.ಎನ್.ಕೆ.ಅರೋರಾ ಗ್ರಾಫ್ ಒಂದನ್ನು ವಿವರಿಸಿದ್ದಾರೆ.

ರಾಜ್ಯಗಳು ಮಾಡಬೇಕಾಗಿದೆ ಲಸಿಕೆ ಕೇಂದ್ರಗಳ ಹೆಚ್ಚಳ
"ಲಸಿಕೆ ಕೇಂದ್ರಗಳನ್ನು ಸ್ಥಾಪಿಸುವುದು ಲಸಿಕೆಗಳನ್ನು ಪಡೆದುಕೊಳ್ಳುವಷ್ಟೇ ದೊಡ್ಡ ಸವಾಲಾಗಿರುತ್ತದೆ. ಇದು ರಾಜ್ಯಗಳ ಜವಾಬ್ದಾರಿಯ ಭಾಗವಾಗಿದೆ. ಸರ್ಕಾರಿ ವಲಯದಲ್ಲಿ ದೇಶಾದ್ಯಂತ 75 ರಿಂದ 100 ಸಾವಿರ ಲಸಿಕೆ ಕೇಂದ್ರಗಳನ್ನು ಹೊಂದುವ ಉದ್ದೇಶವಿದೆ. ಆದರೆ ರಾಜ್ಯಗಳು ಪ್ರಸ್ತುತ ಅಲ್ಪಾವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೂರೈಕೆ ಹೆಚ್ಚಾದಂತೆ ಹೆಜ್ಜೆ ಮುಂದಿಡುವ ಅಗತ್ಯವಿದೆ," ಎಂದು ಕೂಡಾ ಅರೋರಾ ಅಭಿಪ್ರಾಯಿಸಿದ್ದಾರೆ.

ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಏರಿಕೆ
ಕಳೆದ ಮೂರು ದಿನಗಳಲ್ಲಿ, ದೇಶವು 56 ದಿನಗಳ ವಿರಾಮದ ನಂತರ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ದಾಖಲಿಸಿದೆ. ಕೆಲವು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವು ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಜುಲೈ 8 ರ ಹೊತ್ತಿಗೆ, ಎಂಟರಿಂದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ದಾಖಲಾಗಿದೆ.

ಲಸಿಕೆ ನೀಡಿಕೆ ದರದಲ್ಲಿ ಇಳಿಕೆ
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ ಲಸಿಕೆ ನೀಡಿಕೆ ದರಗಳಲ್ಲಿ ಇಳಿಕೆ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಬೇಕಾದರೆ ದೈನಂದಿನ ಲಸಿಕೆ ನೀಡಿಕೆ ದರದಲ್ಲಿ ಹೆಚ್ಚಳ ಅತ್ಯಗತ್ಯವಾಗಿದೆ. ಕಳೆದ 7 ದಿನಗಳಲ್ಲಿ, ಸರಾಸರಿ 4.7 ಮಿಲಿಯನ್ ಡೋಸ್‌ಗಳ ಕೊರತೆ ಕಂಡು ಬಂದಿದೆ. ಮೂರನೇ ದರವನ್ನು ಸಫಲವಾಗಿ ಎದುರಿಸಲು ಬೇಕಾದ ದಿನಕ್ಕೆ 8.7 ಮಿಲಿಯನ್ ಡೋಸ್‌ಗಳ ಅಗತ್ಯವಿದೆ.
ಕಳೆದ ತಿಂಗಳು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಮತ್ತು ಕೇಂದ್ರದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ರಣ್‌ದೀಪ್ ಗುಲೇರಿಯಾ, ಕೋವಿಡ್‌ನ ಮೂರನೇ ಅಲೆಯು "ಅನಿವಾರ್ಯ". ಇದು ಇನ್ನೂ ಆರರಿಂದ ಎಂಟು ವಾರಗಳಲ್ಲಿ ಅಪ್ಪಳಿಸಲಿದೆ ಎಂದು ಹೇಳಿದ್ದರು. ಕಳೆದ ವಾರದಲ್ಲಿ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚಾಗಿದೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಜನಸಂದಣಿಯ ಚಿತ್ರಗಳು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ತಮ್ಮ ಹೊಸ ಮಂತ್ರಿ ಮಂಡಳಿಯೊಂದಿಗೆ ಇಂದು ಸಂಜೆ ನಡೆದ ಸಭೆಯಲ್ಲಿ ಜನಸಮೂಹವನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ''ಇದು ನಮ್ಮಲ್ಲಿ ಭಯದ ಭಾವವನ್ನು ಮೂಡಿಸಬೇಕು,'' ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications