ಅಗ್ನಿಪಥ್ ಯೋಜನೆ: ವಯೋಮಿತಿ ಹೆಚ್ಚಿಸಿದ್ದೂ ತೊಂದರೆಯೇ, ಕಾರಣ?
ನವದೆಹಲಿ, ಜೂ. 18: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ಅಗ್ನಿಪಥ್ ನೇಮಕಾತಿ ಯೋಜನೆಯ ಸಂದೇಹಗಳನ್ನು ನಿವಾರಿಸಲು ಮತ್ತು ಬೀದಿಗಳಲ್ಲಿ ಈಗಾಗಲೇ ರೈಲುಗಳನ್ನು ಸುಡುತ್ತಿರುವವರ ಕೋಪಾಗ್ನಿ ತಗ್ಗಿಸಲು, ಸರ್ಕಾರವು ಈ ವರ್ಷ ನೇಮಕಾತಿಯಲ್ಲಿ ಪಾಲ್ಗೊಲ್ಳುವವರಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಒಂದು ಬಾರಿ ಸಡಿಲಿಕೆಯನ್ನು ಘೋಷಿಸಿ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿದೆ. ಆದರೆ ಈ ಒಂದು ಬಾರಿ ಸಡಿಲಿಕೆಯೂ ಸಮಸ್ಯೆ ಆಗಬಹುದು.
ನೇಮಕಾತಿ ಮಾಹಿತಿಯು ಈ ವರ್ಷ 46,000 ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುತ್ತದೆ ಎಂದು ಹೇಳಿದೆ. ಇದು ಅಗ್ನಿಪಥ್ ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಾತಿಗಾಗಿ ನಿರ್ದಿಷ್ಟಪಡಿಸಿದ ಸಂಖ್ಯೆಯಾಗಿದೆ. ಮೂರು ಪಡೆಗಳಿಗೆ ಒಟ್ಟಿಗೆ 2015 ರಿಂದ ಕಡಿಮೆ ನೇಮಕಾತಿ ನಡೆದಿದೆ. ಮೊದಲ ವರ್ಷದ ವಯೋಮಿತಿ ಸಡಿಲಿಕೆಯು ಎರಡು ವರ್ಷಗಳಲ್ಲಿ ಇಲ್ಲವಾಗಿದೆ. ಸದ್ಯ 46,000 ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳು 2022ಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಇನ್ನೂ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ.

ಪ್ರತಿ ವರ್ಷ 50,000ಕ್ಕೂ ಹೆಚ್ಚು ಸೈನಿಕರ ನೇಮಕ
ಈ ವರ್ಷದ ಮಾರ್ಚ್‌ನಲ್ಲಿ ರಕ್ಷಣಾ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದ ನೇಮಕಾತಿ ಪ್ರಕ್ರಿಯೆ ಮಾಹಿತಿಯ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ನೇಮಕಾತಿ ರ್‍ಯಾಲಿಗಳ ಮೂಲಕ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸೈನ್ಯಕ್ಕೆ ಸೈನಿಕರ ನೇಮಕಾತಿ 2019 -2020ರಲ್ಲಿ 80,572 ರಷ್ಟಿದೆ. ಆದರೆ ಅದರ ನಂತರ ಇಷ್ಟು ವರ್ಷ ಕಳೆದರೂ ನೇಮಕಾತಿ ನಡೆದಿಲ್ಲ. 2015 ಮತ್ತು 2020 ರ ನಡುವೆ, ಸೇನೆಯು ಪ್ರತಿ ವರ್ಷ 50,000ಕ್ಕೂ ಹೆಚ್ಚು ಸೈನಿಕರನ್ನು ನೇಮಿಸಿಕೊಂಡಿದೆ ಎಂದು ದತ್ತಾಂಶಗಳನ್ನು ತೋರಿಸುತ್ತದೆ.

50,026 ಇನ್ನೂ ಕಡಿಮೆ ಜನರ ನೇಮಕ
2015- 2016ರ ಸಾಲಿನಲ್ಲಿ ಸೇನೆಯು ದೇಶಾದ್ಯಂತ 71,804 ಸೈನಿಕರನ್ನು ನೇಮಕ ಮಾಡಿಕೊಂಡಿದ್ದು, 2016- 2017ರಲ್ಲಿ 52,447ಕ್ಕೆ ಇಳಿದಿದೆ. 2017-2018 ರಲ್ಲಿ ಸೈನ್ಯವು 50,026 ಇನ್ನೂ ಕಡಿಮೆ ಜನರನ್ನು ನೇಮಿಸಿಕೊಂಡಿದೆ. ಇದು 2018- 2019 ರಲ್ಲಿ 53,431 ನೇಮಕಾತಿಗಳಿಗೆ ಏರಿದೆ. 2019-2020 ರಲ್ಲಿ ಸೇನೆಯು ತನ್ನ ರ್‍ಯಾಲಿಗಳ ಮೂಲಕ 80,572 ನೇಮಕಾತಿಗಳನ್ನು ಮಾಡಿಕೊಂಡಾಗ ಇದು ಅತಿದೊಡ್ಡ ನೇಮಕಾತಿ ಎನಿಸಿದೆ. ಸದ್ಯ ಈ ವರ್ಷ 46,000 ಅಗ್ನಿವೀರ್‌ಗಳು ಎಲ್ಲಾ ಮೂರು ಪಡೆಗಳಿಗೆ ನೇಮಕಾತಿ ಆಗುತ್ತದೆ.

ಪ್ರತಿ ವರ್ಷ ಸುಮಾರು 50,000 ಅಗ್ನಿವೀರ್ ನೇಮಕ
ಅಗ್ನಿಪಥ್ ಯೋಜನೆಯ ಅಡಿಯಲ್ಲಿ ಮೊದಲ ನಾಲ್ಕು ವರ್ಷಗಳಲ್ಲಿ ಮೂರು ಪಡೆಗಳಲ್ಲಿ ಒಟ್ಟು ಸೇರ್ಪಡೆ 2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 2,02,900 ಅಗ್ನಿವೀರ್‌ಗಳು, ಅದರಲ್ಲಿ ಸುಮಾರು 1,75,000 ಸೇನೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ. ಇದು ಮುಂದಿನ ನಾಲ್ಕು ವರ್ಷಗಳಲ್ಲಿ ಎಲ್ಲಾ ಮೂರು ಪಡೆಗಳಿಗೆ ಪ್ರತಿ ವರ್ಷ ಸುಮಾರು 50,000 ಅಗ್ನಿವೀರ್‌ಗಳನ್ನು ಮಾತ್ರ ನೇಮಿಸಿಕೊಳ್ಳುತ್ತದೆ. ಇಲ್ಲಿ ಸಂಸತ್ತಿಗೆ ತಿಳಿಸಿದ ದತ್ತಾಂಶದ ಪ್ರಕಾರ 2015 ರಿಂದ ಸೇನೆಯಲ್ಲಿನ ಎಲ್ಲಾ ನೇಮಕಾತಿಗಳಲ್ಲಿ ಕೇವಲ ಎಂಟು ರಾಜ್ಯಗಳು ಶೇಕಡಾ 60ಕ್ಕಿಂತ ಹೆಚ್ಚು ನೇಮಕಾತಿ ಆಗಿದೆ.

ಕೆಲವು ರಾಜ್ಯಗಳಿಂದ ಒಟ್ಟು ನೇಮಕಾತಿ 3,08,280
ಅಂಕಿಅಂಶಗಳ ಪ್ರಕಾರ 2015 ರಿಂದ ಪಂಜಾಬ್, ಹರಿಯಾಣ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ 1,86,795 ಮಂದಿಯನ್ನು ಸೇನೆಗೆ ನೇಮಿಸಿಕೊಳ್ಳಲಾಗಿದೆ. ಈ ವರ್ಷಗಳಲ್ಲಿ ಸೇನೆಯಲ್ಲಿ ಒಟ್ಟು ನೇಮಕಾತಿ 3,08,280 ಆಗಿತ್ತು. ಒಟ್ಟು ನೇಮಕಾತಿಯಲ್ಲಿ ಈ ರಾಜ್ಯಗಳ ಪಾಲು ಶೇಕಡಾ 60ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಸದ್ಯ ಹೊಸ ಯೋಜನೆಯ ವಿರುದ್ಧದ ಯುವಕರ ಕೋಪವು ರೈಲುಗಳನ್ನು ಹೆಚ್ಚು ಧ್ವಂಸಗೊಳಿಸುವ ಸಾಧ್ಯತೆಯಿದೆ. ಏಕೆಂದರೆ ಸೇನೆಯ ನೇಮಕಾತಿ ಅಂಕಿ ಅಂಶಗಳು 2018-2019 ರಲ್ಲಿ ಮುಕ್ಕಾಲು ಭಾಗದಷ್ಟು ನೇಮಕಾತಿಗಳು ಸದರಿ ರಾಜ್ಯಗಳಿಂದಲೇ ಬಂದಿವೆ ಎಂದು ತೋರಿಸುತ್ತದೆ. ಸದರಿ ರಾಜ್ಯದಿಂದ ನೇಮಕಗೊಂಡವರು ಸೇನೆಯ ಒಟ್ಟು ಶೇಕಡಾ 78.32 ರಷ್ಟಿದ್ದರು ಮತ್ತು 2019-2020 ರಲ್ಲಿ ಈ ಪಾಲು ಶೇಕಡಾ 77.20 ರಷ್ಟಿತ್ತು.
ಜುಲೈ 2021 ರಿಂದ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ರ್‍ಯಾಲಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಸಂಸತ್ತಿಗೆ ತಿಳಿಸಿತ್ತು. 2020-2021 ರಲ್ಲಿ ಸೇನೆಯು ದೇಶಾದ್ಯಂತ 47 ರ್‍ಯಾಲಿಗಳನ್ನು ನಡೆಸಿತ್ತು. ಆದರೆ ಮತ್ತೆ ಸಾಂಕ್ರಾಮಿಕ ರೋಗದಿಂದಾಗಿ ನೇಮಕಾತಿ ಪ್ರಕ್ರಿಯೆಯು ಆಗಿರಲಿಲ್ಲ. ರ್‍ಯಾಲಿಗಳು ಆ ವರ್ಷವೂ ಯಾವುದೇ ನೇಮಕಾತಿಗೆ ಕಾರಣವಾಗಲಿಲ್ಲ ಎಂದು ದಾಖಲೆಗಳು ತೋರಿಸಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications