ಕಲಾಭವನ್ ಮಣಿ ಸಾವಿನ ಹಿಂದೆ ದಿಲೀಪ್ ಕೈವಾಡ?

Posted By:
Subscribe to Oneindia Kannada

ತ್ರಿಶೂರ್, ಜು.14: ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ಹಿಂದೆ ಸೂಪರ್ ಸ್ಟಾರ್ ನಟ ದಿಲೀಪ್ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ. ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಸದ್ಯ ಜೈಲಿನಲ್ಲಿದ್ದಾರೆ.

ಈ ಬಹುಭಾಷಾ ನಟನ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ

ನಟ ಕಲಾಭವನ್ ಮಣಿಯ ಸಾವಿನ ತನಿಖೆ ಸರಿಯಾಗಿ ನಡೆದಿಲ್ಲ. ದೊಡ್ಡ ಸ್ಟಾರ್ ಗಳ ಕೈವಾಡವಿದೆ ಎಂದು ಮಣಿಯ ಸಹೋದರ ಆರ್‍.ಎಲ್‍.ವಿ. ರಾಮಕೃಷ್ಣನ್ ಆರೋಪಿಸಿದ್ದಾರೆ. ದಿಲೀಪ್ ಮತ್ತು ಮಣಿಯ ನಡುವೆ ಭೂವ್ಯವಹಾರ ಇತ್ತು. ಇದಕ್ಕೆ ಸಂಬಂಧಿಸಿದ

ಇಡುಕ್ಕಿಯ ರಾಜಾಕ್ಕಾಡ್, ಮೂನ್ನಾರ್‍ಗಳಲ್ಲಿ ದಿಲೀಪ್ ಮತ್ತು ಮಣಿ ಜಂಟಿಯಾಗಿ ಭೂವ್ಯವಹಾರ ನಡೆಸಿದ್ದರು ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಈ ಹಿಂದೆ ತನಿಖೆ ನಡೆಸಿದ್ದ ಕೇರಳ ಪೊಲೀಸರು ಈ ಕುರಿತು ವಿವರ ನೀಡಿದ್ದರೂ ಭೂವ್ಯವಹಾರವನ್ನು ಪರಿಗಣಿಸದೆ ತನಿಖೆ ಮುಂದುವರಿದಿದೆ ಎಂದು ರಾಮಕೃಷ್ಣನ್ ಆರೋಪಿಸಿದ್ದಾರೆ. ಇಡುಕ್ಕಿಯ ರಾಜಾಕ್ಕಾಡ್, ಮೂನ್ನಾರ್‍ಗಳಲ್ಲಿ ದಿಲೀಪ್ ಮತ್ತು ಮಣಿ ಜಂಟಿಯಾಗಿ ಭೂವ್ಯವಹಾರ ನಡೆಸಿದ್ದರು ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಮಣಿ ಮತ್ತು ದಿಲೀಪ್‍ರ ನಡುವಿನ ಭೂವ್ಯವಹಾರದ ಸಾಕ್ಷ್ಯಗಳು ತನ್ನ ಬಳಿ ಇದೆಯೆಂದು ಮತ್ತು ಈ ವಿಷಯದಲ್ಲಿ ಇಬ್ಬರ ನಡುವೆ ವಿವಾದವಾಗಿತ್ತು ಎಂದು ಈ ಬಗ್ಗೆ ಬೇಕಾದ ಸಾಕ್ಷಿಯನ್ನು ನಾನು ಒದಗಿಸುತ್ತೇನೆ ಎಂದು ಮಹಿಳೆಯೊಬ್ಬರು, ನಿರ್ದೇಶಕ ಬೈಜು ಕೊಟ್ಟಾರಕರರಿಗೆ ಕರೆ ಮಾಡಿದ್ದರು.

ಕೀಟನಾಶಕದ ಬಗ್ಗೆ ವರದಿಯಿಲ್ಲ

ಕೀಟನಾಶಕದ ಬಗ್ಗೆ ವರದಿಯಿಲ್ಲ

ಮಣಿಯ ಶರೀರದಲ್ಲಿ ವಿಷ ಮದ್ಯ ಜೊತೆಗೆ ಕ್ಲಾರ್ ಪೈಪರೀಸ್ ಎನ್ನುವ ಕೀಟನಾಶಕ ಕೂಡ ಇರತ್ತು ಎರ್ನಾಕುಲಂನಲ್ಲಿರುವ ರೀಜನಲ್ ಲ್ಯಾಬ್ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಈ ವರದಿಯನ್ನು ಪೊಲೀಸರು ಪರಿಗಣಿಸಿಲ್ಲ ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ. ಮಣಿ ಅವರು 2016 ಮಾರ್ಚ್ 6ರಂದು ನಿಧನರಾದರು. ಈಗ ಕಿಡ್ನಿ ವೈಫಲ್ಯವೇ ಅವರ ಸಾವಿಗೆ ಕಾರಣ ಎಂದು ಅಂತಿಮ ಷರಾ ಬರೆಯಲು ಸಿದ್ಧತೆ ನಡೆದಿದೆ.

ರಿಯಲ್ ಎಸ್ಟೇಟ್ ವ್ಯವಹಾರ

ರಿಯಲ್ ಎಸ್ಟೇಟ್ ವ್ಯವಹಾರ

ಕೊಚ್ಚಿ ಮೂಲದ ನಟ ದಿಲೀಪ್ ಅವರು ರಿಯಲ್ ಎಸ್ಟೇಟ್ ವ್ಯವಹಾರ, ಹೊಟೆಲ್ ಉದ್ಯಮ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿಸಿದ್ದು, ಕಲಾಭವನ್ ಮಣಿ ಅವರ ಜತೆ ಈ ಬಗ್ಗೆ ಮನಸ್ತಾಪವಾಗಿತ್ತು ಎನ್ನಲಾಗಿದೆ.

ಬೆಂಬಲಕ್ಕೆ ಬಿಜೆಪಿ ನಿಂತಿದೆ

ಬೆಂಬಲಕ್ಕೆ ಬಿಜೆಪಿ ನಿಂತಿದೆ

ಸಿಬಿಐ ತನಿಖೆಗೆ ಆಗ್ರಹಿಸಿ ಕಲಾಭವನ್ ಮಣಿ ಅವರ ಸೋದರ ಕೆ ರಾಮಕೃಷ್ಣನ್ ಅವರು ಪ್ರತಿಭಟನೆ ನಡೆಸಿದ್ದಾರೆ. ಇವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಪಶು ವೈದ್ಯೆ ಡಾ. ನಿಮ್ಮಿಯನ್ನು ಮದುವೆಯಾಗಿದ್ದ ಮಣಿ ಅವರಿಗೆ ಶ್ರೀಲಕ್ಷ್ಮಿ ಎಂಬ ಹೆಸರಿನ ಮಗಳಿದ್ದಾರೆ. ಆಟೋರಿಕ್ಷಾ ಚಾಲಕನಾಗಿ ವೃತ್ತಿ ಬದುಕು ಕಂಡುಕೊಂಡು, ಕಲಾಭವನ ನಾಟಕ ತಂಡದ ಮೂಲಕ ಹಲವಾರು ಶೋಗಳನ್ನು ನೀಡಿ ಜನಪ್ರಿಯತೆ ಗಳಿಸಿ, ನಂತರ ಚಿತ್ರರಂಗದಲ್ಲಿ ಮಿಂಚಿದ್ದರು. 2016ರ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅವರಿಗೆ ಆಫರ್ ಬಂದಿತ್ತು.

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಾವಿನ ಕಥೆ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಾವಿನ ಕಥೆ

ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರು ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ನ್ಯಾನುಂ ಚಿತ್ರದಲ್ಲಿ ಅಂಧ ಗಾಯಕನಾಗಿ ಕಾಣಿಸಿಕೊಂಡು ಕೇರಳ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದೇ ಪಾತ್ರವನ್ನು ಕನ್ನಡ ಆವೃತ್ತಿ(ನನ್ನ ಪ್ರೀತಿಯ ರಾಮು) ಯಲ್ಲಿ ದರ್ಶನ್ ತೂಗುದೀಪ ಅವರು ನಟಿಸಿದ್ದರು. ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದ ಸಂದರ್ಭದಲ್ಲೇ ಇವರ ಅಕಾಲಿಕ ಸಾವು ಹಲವು ಅನುಮಾನಕ್ಕೆ ಎಡೆಮಾಡಿದ್ದು ಸಹಜ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fresh allegations made by late actor Kalabhavan Mani’s family has linked Dileep to Mani’s death
Please Wait while comments are loading...