ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7th Pay Commission DA: ನೌಕರರಿಗೆ 18 ತಿಂಗಳ ಬಾಕಿ DA ಹಣ ಎಷ್ಟು ಕಂತುಗಳಲ್ಲಿ ಸಿಗಲಿದೆ? ತಿಳಿಯಿರಿ

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (DA) ಹೆಚ್ಚಳವನ್ನು ಫೆಬ್ರುವರಿಗೆ ನೀಡುವುದಾಗಿ ತಿಳಿಸಿದ್ದ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಬಾಕಿ ಡಿಎ ಹಣವನ್ನು ಕಂತುಗಳಲ್ಲಿ ನೀಡಲು ನಿರ್ಧರಿಸಿದೆ. ಎಷ್ಟು ಕಂತು ಎಂಬ ಮಾಹಿತಿ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಜನವರಿ 27: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (DA) ಹೆಚ್ಚಳವನ್ನು ಫೆಬ್ರುವರಿಗೆ ನೀಡುವುದಾಗಿ ತಿಳಿಸಿದ್ದ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ನೌಕರರಿಗೆ ನೀಡಬೇಕಿದ್ದ 18 ತಿಂಗಳ ತುಟ್ಟಿ ಭತ್ಯೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದೀಗ ಆ ಹಣವನ್ನು ನೌಕರರಿಗೆ ನೀಡುಲು ಮುಂದೆ ಬಂದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಅನುಮೋದನೆಯ ಪ್ರಕಾರ ಬಾಕಿ ತುಟ್ಟಿಭತ್ಯೆ ಹಣ ಒಟ್ಟು ಸುಮಾರು ಎಂಟು ಕಂತುಗಳಲ್ಲಿ ನೌಕರರ ಕೈ ಸೇರಲಿದೆ.

ಫೆಬ್ರವರಿ 18ರಂದು ಇರುವ ಹೋಲಿ ಹಬ್ಬಕ್ಕೆ ವರ್ಷಕ್ಕೆ ಎರಡು ಭಾರಿ ಹೆಚ್ಚಿಸುವ ತುಟ್ಟಿಭತ್ಯೆ ಹಣವು ನೌಕರರಿಗೆ ನೀಡುವುದಾಗಿ ತಿಳಿಸಿದ್ದರು. ಈ ಬಗ್ಗೆ ಖಷಿ ಪಟ್ಟಿದ್ದ ನೌಕರರು ಬಹಳದಿನಗಳಿಂದ 18 ತಿಂಗಳ ಬಾಕಿ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದೀಗ ಆ ಹಣ ವಿತರಣೆ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ನೌಕರರ ಸಂತಸಕ್ಕೆ ಕಾರಣವಾಗಿದೆ.

7th Pay Commission: In how many installments central employees get 18 months arrears of DA

ಪ್ರಸಕ್ತ ವರ್ಷ ಕೇಂದ್ರ ನೌಕರರು ತುಟ್ಟಿ ಭತ್ಯೆ (DA) ಮತ್ತು ಪಿಂಚಣಿದಾರರಿಗೆ ಡೀಯರ್ನೆಸ್‌ ರಿಲೀಫ್ (DR) ಅನ್ನು ಮಾರ್ಚ್ 2023 ರಲ್ಲಿ ಘೋಷಿಸಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದರಂತೆ ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಸಜ್ಜಾಗಿದೆ.

ಮುಂದಿನ ಮಾರ್ಚ್‌ಗೆ ಡಿಎ ಏರಿಕೆ

ಕೇಂದ್ರ ಸರ್ಕಾರ ಸುಮಾರು ಒಂದು ಕೋಟಿ ಕೇಂದ್ರದ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರಿಗೆ ಡಿಆರ್‌ ಪರಿಹಾರ ಹಣವನ್ನು ಮುಂದಿನ ಮಾರ್ಚ್ ತಿಂಗಳಲ್ಲಿ ಹೆಚ್ಚಿಸಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಮಧ್ಯೆ ಹಲವು ರಾಜ್ಯಗಳು ತಮ್ಮ ನೌಕರರು ಹಾಗೂ ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಡಿಆರ್ ಹಣ ಘೋಷಿಸಿವೆ. ಇತ್ತೀಚೆಗಷ್ಟೇ ಬಾಕಿ ಉಳಿದಿದ್ದ ರಾಜ್ಯ ತೆಲಂಗಾಣವು ಡಿಎ, ಡಿಆರ್ ಘೋಷಣೆ ಮಾಡಿದೆ.

 ನನ್ನ ಯೋಗ್ಯತೆಗೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ: ಎಸ್.ಎಂ.ಕೃಷ್ಣ ನನ್ನ ಯೋಗ್ಯತೆಗೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ: ಎಸ್.ಎಂ.ಕೃಷ್ಣ

ಕಳೆದ ನಾಲ್ಕು ತಿಂಗಳ ಸೇವೆಯಲ್ಲಿ ಸಾಮಾನ್ಯ ಭವಿಷ್ಯ ನಿಧಿಗೆ (GPF) ಕೊಡುಗೆ ನೀಡುವುದರಿಂದ ವಿನಾಯಿತಿ ನೀಡಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ 4.4 ಲಕ್ಷ ನೌಕರರು ಮತ್ತು 2.28 ಲಕ್ಷ ಪಿಂಚಣಿದಾರರಿಗೆ ಉಪಯೋಗವಾಗಲಿದೆ ಎನ್ನಲಾಗಿದೆ.

7th Pay Commission: In how many installments central employees get 18 months arrears of DA

ಎಷ್ಟು ಹೆಚ್ಚಳ ಮಾಡಲಾಗಿದೆ?

ಕೇಂದ್ರ ಸರ್ಕಾರ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇಕಡಾ 2.73 ರಷ್ಟು ಹೆಚ್ಚಿಸಿದೆ. ಇದಾದ ಬಳಿಕ ಉದ್ಯೋಗಿಗಳ ಡಿಎ ಶೇ. 17.29 ರಿಂದ ಶೇ. 20.2ರಷ್ಟಕ್ಕೆ ಹೆಚ್ಚಾಗಿದೆ. ಈ ಹೆಚ್ಚಳದ ಹಣ ಬಿಡುಗಡೆಯು 2021ರ ಜುಲೈ 1 ರಿಂದ ಜಾರಿಗೆ ತರಲಾಗುತ್ತಿದೆ. ಈ ಹಣ 8 ಕಂತುಗಳಲ್ಲಿ ನೌಕರರ ಜಿಪಿಎಫ್ ಖಾತೆಗೆ ಪಾವತಿಯಾಗಲಿದೆ.

English summary
7th Pay Commission: In how many installments will central employees get 18 months arrears of Dearness Allowance (DA)? know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X