Budget 2024: ಸೌಲಭ್ಯ, ಯೋಜನೆ ವಿಶಿಷ್ಠತೆಗಳ ಅಪ್ಡೇಟ್ ಕೊಟ್ಟ ಮಾಜಿ ಸಿಎಂ
ಬೆಂಗಳೂರು, ಫೆಬ್ರವರಿ 04: ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ಈ ಆಯವ್ಯಯದಲ್ಲಿ ಸರ್ಕಾರ ಯುಕವರು, ಮಹಿಳೆ, ಬಡವರು, ರೈತರಿಗೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ. ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದೇ ರೀತಿ ಹಲವು ವಿಶೇಷತೆಗಳು ಈ ಬಜೆಟ್ ನಲ್ಲಿವೆ. ಈ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಲವು ಪಟ್ಟಿಗಳನ್ನು ಜನರಿಗೆ ನೀಡಿದ್ದಾರೆ. ಅವನ್ನು ಮುಂದೆ ತಿಳಿಯಿರಿ.
* ಸುಮಾರು 5% ನಷ್ಟು ಚಾಲ್ತಿ ಖಾತೆ ಕೊರತೆಯು ವಿಶಿಷ್ಟ ಲಕ್ಷಣವಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರವು ಆರ್ಥಿಕತೆ ಸರಳ ಸೂತ್ರ ಅನುಸರಿಸಿದೆ. ಅದನ್ನು ಪ್ರತಿ ಸರ್ಕಾರವು ಅನುಕರಿಸಲು ಯೋಗ್ಯವಾದ ಸಾಧನೆಯಾಗಿದೆ. ಕಳೆದ ವರ್ಷ ಇದೇ ರೀತಿ ಕರ್ನಾಟ ಬಿಜೆಪಿ ಸರ್ಕಾರ ಉತ್ತಮ ಬಜೆಟ್ ನೀಡಿತ್ತು.

* 8 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಕೈಗೆಟುಕುವ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಗರ್ಭಕಂಠದ ಲಸಿಕೆ ಒದಗಿಸುವ ಬಗ್ಗೆ ಬಜೆಟ್ ಘೋಷಣೆ ಆಗಿದೆ. ಮಹಿಳೆಯರಿಗೆ ಈ ಮೂಲಕ ಕೇಂದ್ರವು ಆದ್ಯತೆ ನೀಡಿದೆ.
* ರಾಜ್ಯಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಅನಾವರಣಗೊಳಿಸಲಾಗಿದ್ದು, ಇದು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ನ ದೃಢೀಕರಣವಾಗಿದೆ ಎಂದು ಬೊಮ್ಮಾಯಿ ಅವರು ಬಣ್ಣಿಸಿದ್ದಾರೆ.
* ನರೇಂದ್ರ ಮೋದಿಯವರು ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ 50 ವರ್ಷಗಳವರೆಗೆ ಬಡ್ಡಿರಹಿತ ಸಾಲವಾಗಿ ₹75,000 ಕೋಟಿಗಳನ್ನು ಒದಗಿಸಲಿದೆ. 'ವಿಕ್ಷಿತ್ ಭಾರತ್'ದೃಷ್ಟಿಯನ್ನು ಸಾಕಾರಗೊಳಿಸಲು ರಾಜ್ಯಗಳ ಸುಧಾರಣೆಗಳನ್ನು ಬೆಂಬಲಿಸಲಿದೆ. ಈ ಹಿಂದೆ ಮಾಡಿದ್ದ ಬಿಡುಗಡೆಗಳನ್ನು ವಿದ್ಯುತ್ ಕ್ಷೇತ್ರಗಳಲ್ಲಿನ ಸುಧಾರಣೆಗಳಿಗಾಗಿ ಅನೇಕ ವಿರೋಧ ಪಕ್ಷದ ಆಡಳಿತ ರಾಜ್ಯಗಳು ಸಹ ಬಳಸಿಕೊಂಡಿವೆ ಎಂದು ಅವರು ಕುಟುಕಿದರು.
* 2023ರಲ್ಲಿ ಸ್ವಾತಂತ್ರ್ಯ ದಿನದ ಭಾಷಣದಿಂದ ತಮ್ಮ ಘೋಷಣೆಯನ್ನು ಈಡೇರಿಸುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2 ಕೋಟಿ ಲಕ್ಷಪತಿ ದೀದಿ ರಚನೆ ಆಗಿದೆ. ರಚಿಸಿದರು. ಈ ವರ್ಷ ಪ್ರಧಾನ ಮಂತ್ರಿ @narendramodi ji ಅವರು 3 ಕೋಟಿ ಲಕ್ಷಪತಿ ದೀದಿಗಳನ್ನು ರಚಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಇದು ಮಹಿಳಾ ಸಬಲೀಕರಣಕ್ಕೆ ಪೂರಕವಾಗಲಿದೆ.

* ಸಾಸಿವೆ, ಸೋಯಾ ಬೀನ್, ನೆಲಗಡಲೆ ಮುಂತಾದ ಬೀಜಗಳ ಉತ್ಪಾದನೆಗೆ ಸಹಾಯ ಮಾಡುವ ಮೂಲಕ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ಕಾರ್ಯತಂತ್ರ ರೂಪಿಸಲು ಪ್ರಧಾನಿ ನಿರ್ದೇಶಿಸಲಾಗಿದೆ.
* ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸ್ ಯೋಗಾನವನ್ನು ಔಪಚಾರಿಕಗೊಳಿಸಿದ್ದಾರೆ. ಇದು 2.4 ಲಕ್ಷ ಸ್ವ-ಸಹಾಯ ಗುಂಪುಗಳು ಮತ್ತು 60,000 ವ್ಯಕ್ತಿಗಳಿಗೆ ಸಹಾಯ ಮಾಡಲು ಕಾರಣವಾಗಿದೆ.
* ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ 2025ರ ಹಣಕಾಸು ವರ್ಷ ದಲ್ಲಿ 80,671 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
* ಬೆಂಗಳೂರಿನಲ್ಲಿ ಸ್ಥಾಪಿಸಲಾಗುವ ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ ಇನ್ನೋವೇಶನ್ ಫಂಡ್‌ಗಾಗಿ 1 ಲಕ್ಷ ಕೋಟಿ ಮೀಸಲಾಡಲಾಗಿದೆ.
* ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗೆ 7,524 ಕೋಟಿ ರೂಪಾಯಿಗಳ ಬಜೆಟ್ ವೆಚ್ಚಗಳು, ಹೊಸ ಮಾರ್ಗಗಳಿಗೆ 2286 ಕೋಟಿಗಳು, ಲೈನ್ ಡಬ್ಲಿಂಗ್ ಗಾಗಿ 1,531 ಕೋಟಿ ರೂಪಾಯಿ ಮತ್ತು ಪ್ರಯಾಣಿಕರ ಸೌಕರ್ಯಗಳಿಗೆ 981 ಕೋಟಿ ರೂಪಾಯಿಗಳು ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications