Get Updates
Get notified of breaking news, exclusive insights, and must-see stories!

ನನ್ನ ಯೋಗ್ಯತೆಗೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ: ಎಸ್.ಎಂ.ಕೃಷ್ಣ

ಇದು ನನಗೆ ಬಯಸದೆ ಬಂದ ಭಾಗ್ಯ, ಕನಸಲ್ಲೂ ನಿರೀಕ್ಷೆ ಮಾಡಿರಲಿಲ್ಲ ಎಂದು ಪದ್ಮವಿಭೂಷಣ ಗೌರವಕ್ಕೆ ಎಸ್.ಎಂ ಕೃಷ್ಣ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದರು.

ಬೆಂಗಳೂರು, ಜನವರಿ 27: ನನ್ನ ಯೋಗ್ಯತೆ ಮಿರಿದ ದೊಡ್ಡ ಗೌರವ ಕೇಂದ್ರ ಸರ್ಕಾರ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್.ಎಂ.‌ಕೃಷ್ಣ ಅವರನ್ನ ಅಭಿನಂದಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಎಸ್.ಎಂ ಕೃಷ್ಣ ಅವರು ಮಾತನಾಡಿ, ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಗೌರವ ನೀಡಿದ್ದಾರೆ. ಇದು ನನಗೆ ಬಯಸದೆ ಬಂದ ಭಾಗ್ಯ, ಕನಸಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ನನ್ನ ಅನಂತ ಧನ್ಯವಾದ ಹೇಳುತ್ತೇನೆ ಎಂದರು.

ಮುಖ್ಯಮಂತ್ರಿ ನನ್ನ ಆಡಳಿತದ ಸುಧಾರಣೆ ಬಗ್ಗೆ ಹೇಳಿದ್ದರು. ಯಶಸ್ವಿನಿ, ಬಿಸಿ ಊಟ ಮನಸ್ಸಿಗೆ ಹತ್ತಿರವಾದ ಕಾರ್ಯಕ್ರಮ, ಇವುಗಳನ್ನು ಇನ್ನಷ್ಟು ಸುಧಾರಣೆ ಮಾಡಲಿ. ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಮೊದಲು ಕೆಂಪೇಗೌಡ ಪ್ರತಿಮೆ ಮಾಡಿದ್ರು, ಈಗ ನನಗೆ ಪ್ರಶಸ್ತಿ ಕೊಟ್ಟಿದ್ದಾರೆ. ನಾನು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Central Government Has Honored Me Beyond What I Deserve SM Krishna Said

ಇನ್ನೂ ಈ ವೇಳೆ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ, ಎಸ್ ಎಂ ಕೃಷ್ಣ ಅವರಿಗೆ ಅವರ ಯೋಗ್ಯತೆಗೆ ತಕ್ಕ ಪ್ರಶಸ್ತಿ ಬಂದಿದೆ. ಅವರ ಪದ ಪ್ರಯೋಗ ಅಷ್ಟು ಹರಿತ,ಶುದ್ಧವಾಗಿತ್ತು.
ಬೆಂಗಳೂರು ಐಟಿ ಸಿಟಿ ಆಗಿದೆ ಅಂದ್ರೆ ಅದಕ್ಕೆ ಎಸ್ ಎಂ ಕೃಷ್ಣ ಅವರೇ ಕಾರಣ. ಕೆಂಪೇಗೌಡ ಹೇಗೆ ಬೆಂಗಳೂರು ಕಟ್ಟಿದ್ರು, ಅದೇ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಕೃಷ್ಣ ಅವರು, ಬೆಂಗಳೂರು ಅಭಿವೃದ್ಧಿ ಬಗ್ಗೆ ಮೊದಲ ಸಾಲಿನಲ್ಲಿ ಕೃಷ್ಣ ಅವರು ನಿಲ್ಲುತ್ತಾರೆ ಎಂದು ಹೇಳಿದರು.

ಆರೋಗ್ಯ ಸಚಿವ ಸುಧಾಕರ್ ಅವರು ಮಾತನಾಡಿ, ರಾಜ್ಯ ಕಂಡ ಅಪರೂಪದ ರಾಜಕೀಯ ಮುತ್ಸದಿ. ಜನರು ಕೂಡ ಅದೆ ರೀತಿಯಲ್ಲಿ ಪ್ರೀತಿ ಕೊಟ್ಟಿದ್ದಾರೆ, ರಾಜ್ಯದ ಹಿರಿಮೆ ಹೆಚ್ಚಿಸಿ ದ ಕೀರ್ತಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರಿಗೆ ಸಲ್ಲುತ್ತದೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲ ನಿರ್ಧಾರ ಮಾಡುತ್ತಾ ಇದ್ದಾರೆ, ಮಹಾನ್ ನಾಯಕರ ನೆರಳಲ್ಲಿ ನಾವು ಬೆಳೆದಿದ್ದೇವೆ, ನಾವು ಕೂಡ ಅವರ ಆದರ್ಶ ರೂಡಿಸಿಕೊಳ್ಳಬೇಕಿದೆ, ನಾನು ಸಹ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+