EPFO: ಒಂದೇ ತಿಂಗಳಲ್ಲಿ 16.2 ಹೊಸ ಚೆಂದಾದಾರರು ಸೇರ್ಪಡೆ: ಅಂಕಿ-ಸಂಖ್ಯೆ ಮಾಹಿತಿ

ಬೆಂಗಳೂರು, ಮಾರ್ಚ್ 26: ದೇಶದಲ್ಲಿ 1951ರಲ್ಲಿ ಜಾರಿಗೆ ಬಂದ 'ನೌಕರರ ಭವಿಷ್ಯ ನಿಧಿ ಸಂಘಟನೆ' (EPFO) ಹೊಸ ನೋಂದಣಿಯಲ್ಲಿ ದಾಖಲೆ ಬರೆದಿದೆ. ಒಂದೇ ತಿಂಗಳಲ್ಲಿ ಲಕ್ಷಾಂತರ ಚಂದಾದಾರರು ಸೇರ್ಪಡೆ ಆಗಿದ್ದಾರೆ.

ಹೌದು, ಕೇಂದ್ರ ಕಾರ್ಮಿಕ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, 'ನೌಕರರ ಭವಿಷ್ಯ ನಿಧಿ ಸಂಘಟನೆ' (EPFO)ಗೆ ಪ್ರಸಕ್ತ ವರ್ಷ 2024ರ ಜನವರಿ ಒಂದೇ ತಿಂಗಳಲ್ಲಿ 16.2 ಲಕ್ಷ ಚೆಂದಾದಾರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ ಹೊಸದಾಗಿ ಮೊದಲ ಬಾರಿಗೆ ನೋಂದಣಿ ಮಾಡಿಕೊಂಡವರು ಇದ್ದಾರೆ.

EPFO Got 16 2 Lakh Subscribers in January 2024 Full details inside

8.08 ಲಕ್ಷ ಹೊಸ ಸದಸ್ಯರ ನೋಂದಣಿ

ಜವರಿಯಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡವರು ಸಂಖ್ಯೆ 8.08 ಲಕ್ಷ ಮಂದಿ EPFOಗೆ ಮೊದಲ ಬಾರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ಚೆಂದಾರರ ಪೈಕಿ ಹೊಸ ನೋಂದಣಿ ಹೊರತುಪಡಿಸಿದರೆ ಉಳಿದವರು ಪಿಂಚಣಿಗಾಗಿ ಬಿಟ್ಟು ಹೋಗು ಮರು ಸೇರ್ಪಡೆ ಆದವರು ಆಗಿದ್ದಾರೆ.

ಹೊಸದಾಗಿ ನೋಂದಣಿ ಆದ ಒಟ್ಟು 8.08 ಲಕ್ಷ ಸದಸ್ಯರಲ್ಲಿ ಶೇಕಡಾ 56ಕ್ಕೂ ಹೆಚ್ಚು 18 ರಿಂದ 25 ವಯೋಮಾನದವರು ಇದ್ದಾರೆ. ಇದು ಯುವಸಮೂಹವು EPFOಗೆ ಹೆಚ್ಚು ನೋಂದಣಿ ಆಗಿರುವುದನ್ನು ಖಚಿತಪಡಿಸುತ್ತದೆ.

EPFO Got 16 2 Lakh Subscribers in January 2024 Full details inside

ಹೊರ ನಡೆದ 12 ಲಕ್ಷಕ್ಕೂ ಹೆಚ್ಚು ಸದಸ್ಯರು

ಇತ್ತ EPFO ನಿಂದ ಒಟ್ಟು 12 ಲಕ್ಷಕ್ಕೂ ಹೆಚ್ಚು ಸದಸ್ಯರು ಹೊರ ನಡೆದಿದ್ದಾರೆ. ನಂತರ ಮರು ಸೇರ್ಪಡೆ ಆಗಿದ್ದಾರೆ. 8.08 ಲಕ್ಷ ಸದಸ್ಯರಲ್ಲಿ 02 ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರು ಇದ್ದಾರೆ ಎಂದು ಕಾರ್ಮಿಕ ಸಚಿವಾಲಯದಿಂದ ಪ್ರಕಟಗೊಂಡಿರುವ ಅಂಕಿ ಅಂಶಗಳು ಮಾಹಿತಿ ನೀಡಿವೆ.

ಎಪಿಎಫ್‌ಓ ಪ್ರಕಾರ, ಇಷ್ಟು ಮಂದಿ ಸೇರ್ಪಡೆ ಆದವರಲ್ಲಿ ಉತ್ಪಾದನೆ, ಆಸ್ಪತ್ರೆ, ಮಾರುಕಟ್ಟೆಯಂತಹ ವಿವಿಧ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಇದ್ದಾರೆ. ಎಪಿಎಫ್‌ಓ ಒಟ್ಟು ಸದಸ್ಯರಲ್ಲಿ ಶೇಕಡಾ 40ಕ್ಕೂ ಅಧಿಕ ಪರಿಣಿತ ಸೇವೆಯನ್ನು ಒಳಗೊಂಡಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

27 ಕೋಟಿಗೂ ಹೆಚ್ಚು ಖಾತೆ ನಿರ್ವಹಣೆ

ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿರುವ 'ನೌಕರರ ಭವಿಷ್ಯ ನಿಧಿ ಸಂಘಟನೆ' (EPFO) 1951ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸುಗ್ರಿವಾಜ್ಞೆಯೊಂದಿಗೆ ಜಾರಿಗೆ ಬಂತು. ಅಲ್ಲಿಂದ ಈವರೆಗೆ ಗ್ರಾಹಕರು ಮತ್ತು ಕೈಗೊಂಡ ಹಣಕಾಸಿನ ವಹಿವಾಟಿನ ಪ್ರಮಾಣದಲ್ಲಿ EPFO ಬೃಹತ್ ಸಂಸಥೆಯಾಗಿದೆ. ಪ್ರಸ್ತುತ ಇದು ತನ್ನ ಸದಸ್ಯರಿಗೆ ಸಂಬಂಧಿಸಿದಂತೆ 27.74 ಕೋಟಿಗೂ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+