7th Pay Commission: 'ತುಟ್ಟಿಭತ್ಯೆ' ಜೊತೆಗೆ 'ಟಿಎ- ಎಚ್ಆರ್‌ಎ' ಪರಿಷ್ಕರಣೆ? ಪೂರ್ಣ ಮಾಹಿತಿ
ಬೆಂಗಳೂರು, ಫೆಬ್ರವರಿ 22: ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ಮಾರ್ಚ್ ತಿಂಗಳು ವಿಶೇಷವಾಗಿರಲಿದೆ. ಏಕೆಂದರೆ ಕೇಂದ್ರ ತನ್ನ ನೌಕರರಿಗೆ ವಾಡಿಕೆಯಂತೆ ತುಟ್ಟಿಭತ್ಯೆ (Dearness Allowance) ಏರಿಕೆ ಮಾಡಲಿದೆ. ಇನ್ನೂ ವಿಶೇಷವೆಂದರೆ ನೌಕರರ ಪ್ರಯಾಣ ಭತ್ಯೆ (TA) ಹಾಗೂ ಮನೆ ಬಾಡಿಗೆ ಭತ್ಯೆ (HRA) ಹೆಚ್ಚಳದ ಅಪ್ಡೇಟ್ ಸಹ ಸಿಕ್ಕಿದೆ.
ನೌಕರರ ತುಟ್ಟಿಭತ್ಯೆ ಏರಿಕೆ ಆಗುವುದು ಖಚಿತವಾಗಿದೆ. ಡಿಎ ಶೇಕಡಾ 4ರಷ್ಟು ಏರಿಕೆ ಆಗಲಿದ್ದು, ಇದರಿಂದ ನೌಕರರ ತುಟ್ಟಿಭತ್ಯೆ ಶೇ. 50ಕ್ಕೆ ತಲುಪಲಿದೆ. ಈ ಮೂಲಕ ವರ್ಷ ಮೊದಲಾರ್ಧದಲ್ಲಿ ಅಂದರೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರ ಸರ್ವತೋಮುಖ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ನಿರೀಕ್ಷೆ ಹೆಚ್ಚಾಗಲು ಮತ್ತೊಂದು ಕಾರಣವೆಂದರೆ ಲೋಕಸಭೆ ಚುನಾವಣೆ. ಈ ಕಾರಣಂದ್ರ ಕೇಂದ್ರುವ ತುಟ್ಟಿಭತ್ಯೆ (DA) ಜೊತೆಗೆ ನೌಕರರ ಪ್ರಯಾಣದ ಭತ್ಯೆ (Travel Allowance) ಹೆಚ್ಚಳದ ಘೋಷಣೆಯ ನಿರೀಕ್ಷೆ ಇದೆ. ಪ್ರಯಾಣ ಭತ್ಯೆ (ಟಿಎ) ಬಗ್ಗೆಯೂ ದೊಡ್ಡ ಘೋಷಣೆಯಾಗಬಹುದು ಎನ್ನಲಾಗಿದೆ. ಈಗ ತುಟ್ಟಿಭತ್ಯೆ ಹೆಚ್ಚಳದ ಅನುಮೋದನೆಯನ್ನು ಎದುರು ನೋಡಲಾಗುತ್ತಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಬಹುದು ಎನ್ನಲಾಗಿದೆ.
ತುಟ್ಟಿಭತ್ಯೆ (DA) ಹೆಚ್ಚಳ ಘೋಷಣೆ ಯಾವಾಗ?
ಕೇಂದ್ರವು ಸಾಮಾನ್ಯವಾಗಿ ಜನವರಿ ಮತ್ತು ಜುಲೈನಲ್ಲಿ ಅಂದರೆ ಆರು ತಿಂಗಳಿಗೊಮ್ಮೆ ನೌಕರರ ತುಟ್ಟಿ ಭತ್ಯೆ ಏರಿಕೆ ಘೋಷಿಸುತ್ತದೆ. ಇದು ಮಾರ್ಚ್ ನಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯುತ್ತದೆ. ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಸೂಚ್ಯಂಕ ಸಂಖ್ಯೆಗಳು ಕೇಂದ್ರ ನೌಕರರು 50 ಪ್ರತಿಶತ ತುಟ್ಟಿಭತ್ಯೆ ಪಡೆಯಲಿದ್ದಾರೆ ಎಂಬುದು ಖಚಿತಪಡಿಸಲಾಗಿದೆ. ಸದ್ಯ ಡಿಎ ಶೇಕಡಾ 46ರಷ್ಟಿದೆ.
ಪ್ರಯಾಣ ಭತ್ಯೆ (TA) ಏರಿಕೆ ಘೋಷಿಸಬಹುದು
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಬಳಿಕ ಪ್ರಯಾಣ ಭತ್ಯೆ (ಟಿಎ) ಸಹ ಹೆಚ್ಚಿಸಿ ಸರ್ಕಾರ ಘೋಷಿಸಬಹುದು ಎನ್ನಲಾಗಿದೆ. ಪ್ರಯಾಣ ಭತ್ಯೆಯನ್ನು ಸಂಬಳದ ಬ್ಯಾಂಡ್‌ನೊಂದಿಗೆ ಸಂಯೋಜಿಸುವ ಮೂಲಕ, ಡಿಎ ಹೆಚ್ಚಳವು ಇನ್ನೂ ಅಧಿಕವಾಗಬಹುದು. ಹೆಚ್ಚಿನ TPTA ನಗರಗಳಲ್ಲಿ, ಗ್ರೇಡ್ 1 ರಿಂದ 2 ರವರೆಗೆ ಪ್ರಯಾಣ ಭತ್ಯೆ ರೂ 1800 ಮತ್ತು ರೂ 1900. ಗ್ರೇಡ್ 3 ರಿಂದ 8 ರವರೆಗೆ ರೂ 3600 ಕ್ಕೂ ಅಧಿಕ ಡಿಎ ಪಡೆಯಲಾಗುತ್ತದೆ.

ಮನೆ ಬಾಡಿಗೆ ಭತ್ಯೆ (HRA) ಪರಿಷ್ಕರಣೆ
ಉದ್ಯೋಗಿಗಳ ಮನೆ ಬಾಡಿಗೆ ಭತ್ಯೆ (HRA) ಯಲ್ಲೂ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಮುಂದಿನ ಮಾರ್ಚ್‌ನಲ್ಲಿ DA ಏರಿಕೆ ಬಳಿಕ ಎಚ್‌ಆರ್‌ಎ ಕೂಡ ಪರಿಷ್ಕರಣೆ ನಡೆಯಲಿದೆ. ವಾಸ್ತವವಾಗಿ, ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ದಾಟಿದರೆ HRA ಪರಿಷ್ಕರಿಸಬೇಕಿದೆ.
ಪ್ರಸ್ತುತ ಶೇಕಡಾ 27, 24, 18ರ ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತದೆ. ಇದನ್ನು ನಗರಗಳ Z, Y, X ವರ್ಗಗಳಾಗಿ ವಿಂಗಡಿಸಲಾಗಿದೆ. ತುಟ್ಟಿಭತ್ಯೆ ಶೇಕಡಾ 50 ಪ್ರತಿಶತ ದಷ್ಟಿದ್ದರೆ, HRA 30, 27, 21 ಪ್ರತಿಶತಕ್ಕೆ ಏರಕೆ ಆಗುತ್ತದೆ.
ನೌಕರರಿಗೆ 3 ಉಡುಗೊರೆ ಖಚಿತ
ಕೇಂದ್ರ ಉದ್ಯೋಗಿಗಳಿಗೆ ತುಟ್ಟಿಭತ್ಯೆ, ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ಸೇರಿ 3 ಉಡುಗೊರೆಗಳನ್ನು ಮಾರ್ಚ್ 2024 ರಲ್ಲಿ ಅಧಿಕೃತಗೊಳ್ಳಲಿವೆ. ಮಾರ್ಚ್‌ನಲ್ಲಿ ಹೋಳಿ ಹಬ್ಬವಿದ್ದು, (holi fest 2024) ಅದಕ್ಕೂ ಮೊಲದೇ ಪರಿಷ್ಕರಣೆ ದರ ಘೋಷಣೆ ಆಗಲಿವೆ.












Click it and Unblock the Notifications